ಬಾಹ್ಯಾಕಾಶದಲ್ಲಿ ಹೊಸ ಎತ್ತರ : ಎಪ್ರಿಲ್‌ನಲ್ಲಿ ಚಂದ್ರಯಾನ-2
Team Udayavani, Feb 17, 2018, 12:03 PM IST
ಹೊಸದಿಲ್ಲಿ : ಭಾರತವನ್ನು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಹೊಸ ಎತ್ತರಕ್ಕೆ ಒಯ್ಯುವ ನಿಟ್ಟಿನಲ್ಲಿ ಇಸ್ರೋ ಇದೇ ವರ್ಷ ಎಪ್ರಿಲ್‌ನಲ್ಲಿ ಚಂದ್ರಯಾನ-2 ಯೋಜನೆಯನ್ನು ಆರಂಭಿಸಲಿದೆ.
ಒಂದು ವೇಳೆ ಎಪ್ರಿಲ್‌ನಲ್ಲಿ ಪ್ರತಿಕೂಲ ಹವಾಮಾನ ಇದ್ದ ಪಕ್ಷದಲ್ಲಿ ಚಂದ್ರಯಾನ -2 ಅಕ್ಟೋಬರ್‌ನಲ್ಲಿ ಆರಂಭವಾಗಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.
ಪ್ರಧಾನಿ ಕಾರ್ಯಾಲಯದ ಕೇಂದ್ರ ಸಹಾಯಕ ಸಚಿವ ಡಾ. ಜಿತೇಂದ್ರ ಸಿಂಗ್ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಬಾಹ್ಯಾಕಾಶ ಮತ್ತು ಪರಮಾಣು ಇಂಧನ ಇಲಾಖೆಯ ಸಾಧನೆಗಳನ್ನು ವಿವರಿಸಿ, “ಚಂದ್ರಯಾನ – 2 ಅತ್ಯಂತ ಗುರುತರ ಸವಾಲಿನ ಅಭಿಯಾನವಾಗಿದೆ; ಏಕೆಂದರೆ ಇದು ಮೊದಲ ಬಾರಿಗೆ ಕಕ್ಷೆಯನ್ನು ಸೇರಿಕೊಳ್ಳಲಿದ್ದು ಲ್ಯಾಂಡರ್ ಮತ್ತು ರೋವರ್ ಅನ್ನು ಚಂದ್ರನಲ್ಲಿ ಇಳಿಸಲಿದೆ’ ಎಂದು ಹೇಳಿದರು.
ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಮತ್ತು ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿರುವ ಡಾ. ಶಿವನ್ ಕೆ ಅವರು ಮಾತನಾಡಿ, “ಚಂದ್ರಯಾನ 2ರ ಒಟ್ಟು ಖರ್ಚು ವೆಚ್ಚ ಸುಮಾರು 800 ಕೋಟಿ ರೂ. ಆಗಲಿದೆ ಎಂದು ಹೇಳಿದರು.
ಇಸ್ರೋ ಕಳೆದ ನಾಲ್ಕು ವರ್ಷಗಳಲ್ಲಿ 48 ವ್ಯೋಮ ಅಭಿಯಾನಗಳನ್ನು ಯಶಸ್ವಿಯಾಗಿ ಕೈಗೊಂಡಿದ್ದು ಇವುಗಳಲ್ಲಿ 21 ಕಕ್ಷೆಗೆ ಒಯ್ಯುವ ಅಭಿಯಾನಗಳು ಮತ್ತು 24 ಸ್ಯಾಟಲೈಟ್ ಅಭಿಯಾನಗಳು ಹಾಗೂ 3 ತಂತ್ರಜ್ಞಾನ ಪ್ರದರ್ಶನಗಳು ಸೇರಿವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.