ಚಮೋಲಿಯ ದುರ್ಘಟನೆಗೆ ವಿಶ್ವ ನಾಯಕರ ಸಂತಾಪ
ಚಮೋಲಿಯ ಘಟನೆಯ ಹಿನ್ನೆಲೆಯಲ್ಲಿ ಭಾರತದೊಂದಿಗೆ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದ ವಿಶ್ವ ನಾಯಕರು
Team Udayavani, Feb 8, 2021, 11:36 AM IST
ನವ ದೆಹಲಿ : ಉತ್ತರಾಖಂಡದ ಹಿಮನದಿ ಸ್ಪೋಟವು ಇಡೀ ವಿಶ್ವವನ್ನೇ ಭಾರತದತ್ತ ತಿರುಗಿ ನೊಡುವಂತೆ ಮಾಡಿದೆ. ಭಾನುವಾರ(ಫೆ. 7)ದಂದು ನಡೆದ ಅವಘಡದಲ್ಲಿ 15 ಮಂದಿ ಮೃತರಾಗಿದ್ದು, 170 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸದ್ಯಕ್ಕಿರುವ ಮಾಹಿತಿ ತಿಳಿಸಿದೆ.
ಚಮೋಲಿಯ ದುರ್ಘಟನೆ ಬಗ್ಗೆ ಜಾಗತಿಕ ಮಟ್ಟದಲ್ಲಿ ಸಂತಾಪ ವ್ಯಕ್ತವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಕಷ್ಟದ ಸಂದರ್ಭದಲ್ಲಿ ಭಾರತದೊಂದಿಗೆ ಬೆನ್ನೆಲುಬಾಗಿ ನಾವು ನಿಲ್ಲುತ್ತೇವೆ ಎಂದು ವಿಶ್ವ ನಾಯಕರು ಹೇಳಿಕೊಂಡಿದ್ದಾರೆ.
ಓದಿ: ವಿಧಾನಪರಿಷತ್ ಸಭಾಪತಿ ಚುನಾವಣೆ: ನಾಮಪತ್ರ ಸಲ್ಲಿಸಿದ ಬಸವರಾಜ ಹೊರಟ್ಟಿ
ಚಮೋಲಿಯ ತಪೋವನ್ ಪ್ರದೇಶದ ರೈನಿ ಗ್ರಾಮದ ಹಿಮನದಿ ಸ್ಫೋಟಗೊಂಡ ಪರಿಣಾಮ ಭಾರಿ ಅನಾಹುತ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದ ಪ್ರಮುಖ ನಾಯಕರು ವಿಷಾದ ವ್ಯಕ್ತಪಡಿಸಿದ್ದಾರೆ.
“ಉತ್ತರಾಖಂಡದಲ್ಲಿ ಸಂಭವಿಸಿದ ಭಾರಿ ಹಿಮ ಸ್ಫೋಟದಿಂದ ಮನಸ್ಸಿಗೆ ಭಾರಿ ಆಘಾತವಾಗಿದೆ. ಇಂತಹ ಕಷ್ಟದ ಸಂದರ್ಭದಲ್ಲಿ ಎಲ್ಲಾ ರೀತಿಯಲ್ಲಿಯೂ ಯುಕೆ ಭಾರತದೊಂದಿಗೆ ಬೆನ್ನೆಲುಬಾಗಿ ನಿಲ್ಲಲು ಸಿದ್ಧವಿದೆ” ಎಂದು ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
“ಉತ್ತರಾಖಂಡದ ಅವಘಡ 100ಕ್ಕೂ ಹೆಚ್ಚು ಜನರ ನಾಪತ್ತೆಗೆ ಕಾರಣವಾಗಿದೆ. ಕೆಲವರು ಮೃತರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ತಮ್ಮ ಕುಟುಂಬದ ಸದಸ್ಯರನ್ನು ಕಳೆದುಕೊಂಡವರಿಗೆ ಸಾಂತ್ವಾನ ಹೇಳುತ್ತೇವೆ. ಹಾಗೂ ನಮ್ಮ ಪೂರ್ಣ ಬೆಂಬಲ ಭಾರತದೊಂದಿಗೆ ಇದೆ” ಎಂದು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಟ್ವೀಟ್ ಮಾಡಿದ್ದಾರೆ.
ಓದಿ: ತಪ್ಪು ಮಾಹಿತಿ ಹರಡುತ್ತಿರುವ ಖಲಿಸ್ತಾನಿ ಖಾತೆಗಳನ್ನು ತೆಗೆಯಿರಿ : ಟ್ವೀಟರ್ ಗೆ ಕೇಂದ್ರ ಮನವಿ
ಇನ್ನು, “ಉತ್ತರಾಖಂಡದಲ್ಲಿ ಸಂಭವಿಸಿದ ಘಟನೆ ವಿಷಾದನೀಯ. ಮೃತರ ಕುಟುಂಬದ ಸದಸ್ಯರಿಗೆ ನಾವು ಸಂತಾಪ ಸೂಚಿಸುತ್ತೇವೆ ಮತ್ತು ಅವರ ಭವಿಷ್ಯಕ್ಕೆ ಪ್ರಾರ್ಥಿಸುತ್ತೇವೆ.” ಎಂದು ನೇಪಾಳದ ವಿದೇಶಿ ವ್ಯವಹಾರಗಳ ಸಚಿವಾಲಯ ಸಂತಾಪ ವ್ಯಕ್ತಪಡಿಸಿದೆ.
“ಚಮೋಲಿಯ ಭಾರಿ ಹಿಮ ಸ್ಫೋಟದಲ್ಲಿ ಮೃತರಾದ ಮತ್ತು ನಾಪತ್ತೆಯಾದವರ ಬಗ್ಗೆ ತುಂಬಾ ದುಃಖವಾಗಿದೆ. ಉತ್ತರಾಖಂಡ ಈ ಆಘಾತದಿಂದ ಆದಷ್ಟು ಬೇಗ ಮುಕ್ತವಾಗಲಿ” ಎಂದು ಅಮೇರಿಕಾದ ವಿದೇಶಾಂಗ ಸಚಿವಾಲಯ ಹೇಳಿದೆ.
“ಉತ್ತರಾಖಂಡದ ಘಟನೆ ನಿಜಕ್ಕೂ ಭಾರಿ ಆಘಾತ ಉಂಟು ಮಾಡಿದೆ. ಈ ಕಷ್ಟದ ಸಂದರ್ಭದಲ್ಲಿ ಆಸ್ಟ್ರೇಲಿಯಾ ತನ್ನ ಆಪ್ತ ಬಂಧುವಿಗೆ (ಭಾರತಕ್ಕೆ) ಆದ ದುಃಖಕ್ಕೆ ಸ್ಪಂದಿಸಲಿದೆ” ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್ ಟ್ವೀಟ್ ಮಾಡಿದ್ದಾರೆ.
ಸದ್ಯ, ಐಟಿಬಿಪಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಚರಣೆಯನ್ನು ಮುಂದುವರಿಸಿದೆ. ನ್ಯಾಶನಲ್ ಥರ್ಮಲ್ ಪವರ್ ಕಾರ್ಪೋರೇಷನ್ ಲಿಮಿಟೆಡ್(ಎನ್ ಟಿ ಪಿ ಸಿ) ಸೈಟ್ ತಪೋವನ್ ಬಳಿ ಒಂಬತ್ತು ಮೃತ ದೇಹಗಳು ಪತ್ತೆಯಾಗಿವೆ ಎಂದು , ಐಟಿಬಿಪಿಯ ಮಹಾ ನಿರ್ದೇಶಕ ಎಸ್ ಎಸ್ ದೇಶ್ವಾಲ್ ಮಾಹಿತಿ ನೀಡಿದ್ದಾರೆ.
ಓದಿ: ಉತ್ತರಾಖಂಡ್ ಹಿಮ ದುರಂತ: ರಕ್ಷಣಾ ಕಾರ್ಯಕ್ಕೆ ಪಂದ್ಯದ ಸಂಭಾವನೆ ನೀಡಲಿರುವ ರಿಷಭ್ ಪಂತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
NCB ನಿರಂತರ ಕಾರ್ಯಾಚರಣೆ: ಡ್ರಗ್ಸ್ ಜಾಲ ಮುರಿಯಲು ಆಪರೇಷನ್ ಸಾಗರ ಮಂಥನ
J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ
Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ
Maharashtra: ಕಾಂಗ್ರೆಸ್ ಸರಕಾರ ಬಂದರೆ ಮುಸ್ಲಿಂ ಮೀಸಲು: ರೇವಂತ್ ರೆಡ್ಡಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.