Goa ಗಣೇಶೋತ್ಸವ ಲಾಟರಿ ಕೂಪನ್ ಗೆ ಮುಗಿಬಿದ್ದ ಜನರು
ನೂಕುನುಗ್ಗಲು... ಕಾಲ್ತುಳಿತ ತಡೆದ ಪೊಲೀಸರು..!
Team Udayavani, Aug 28, 2023, 3:49 PM IST
ಪಣಜಿ: ಕೆಫೆಮ್‍ನಲ್ಲಿರುವ ಸಾರ್ವಜನಿಕ ಗಣೇಶೋತ್ಸವ ಮಂಡಲದಲ್ಲಿ ಪ್ರತಿ ವರ್ಷದಂತೆ ಭಾನುವಾರವೂ ಲಾಟರಿ ಕೂಪನ್ ಮಾರಾಟ ಆರಂಭವಾಯಿತು. ಆದಾಗ್ಯೂ, ಕೂಪನ್‍ಗಳನ್ನು ಖರೀದಿಸಲು ಮತ್ತು ಲಕ್ಷಾಂತರ ಬಹುಮಾನಗಳನ್ನು ಗೆಲ್ಲಲು ನಾಗರಿಕರುಲಾಟರಿ ಖರೀದಿಸಲು ಮುಗಿಬಿದ್ದಿದ್ದು ಕಿಲೋಮೀಟರ್ ವರೆಗೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬರುತ್ತಿದೆ.
ಭಾನುವಾರ ಲಾಟರಿ ಕೂಪನ್ ಖರೀದಿಯ ವೇಳೆ ಜನರ ನೂಕುನುಗ್ಗಲು ಉಂಟಾಗಿ ಪೊಲೀಸರು ಮಧ್ಯಪ್ರವೇಶಿಸಿ ಮಾರಾಟವನ್ನು ನಿಲ್ಲಿಸಿ ಕಾಲ್ತುಳಿತ ತಡೆಯಬೇಕಾಯಿತು. ನಂತರ ಇಂದು ಸೋಮವಾರ (ಆ.28) ಕೆಫೆಮ್ ಸರ್ಕಾರಿ ಕಾಲೇಜು ಸಭಾಂಗಣದಲ್ಲಿ ದೇಣಿಗೆ ಕೂಪನ್‍ಗಳ ಮಾರಾಟವನ್ನು ಬೆಳಗ್ಗೆ ಪ್ರಾರಂಭಿಸಲು ನಿರ್ಧರಿಸಲಾಯಿತು. ಮಂಡಳಿಯ ಅಧ್ಯಕ್ಷ ಇಚಿತ್ ಫಲ್ದೇಸಾಯಿ ಈ ಮಾಹಿತಿ ನೀಡಿದರು.ಸೋಮವಾರದ ಕೂಪನ್ ಖರೀದಿಗೆ ನಾಗರಿಕರು ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಅವರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಈ ಮಧ್ಯೆ, ದೇಣಿಗೆ ಕೂಪನ್‍ಗಳನ್ನು ಖರೀದಿಸಲು ನಾಗರಿಕರು ಭಾನುವಾರ ಬೆಳಗ್ಗೆ ಐದೂವರೆ ಗಂಟೆಯಿಂದಲೇ ಮುಗಿಬಿದ್ದರು. 15 ನಿಮಿಷಗಳಲ್ಲಿ ಉದ್ಘಾಟನಾ ಸಮಾರಂಭ ಮುಗಿದು ಕೂಪನ್ ಮಾರಾಟ ಆರಂಭಗೊಂಡರೂ ಜನಸಂದಣಿ ಹೆಚ್ಚಾಗುತ್ತಿತ್ತು. ಮುನ್ಸಿಪಲ್ ಪಾರ್ಕ್ ಆವರಣದಲ್ಲಿ ಈ ಕೂಪನ್ ಮಾರಾಟ ಆರಂಭವಾದಾಗ . ಈ ವೇಳೆ ಜನರು ಸರತಿ ಸಾಲಿನಲ್ಲಿ ನಿಲ್ಲದೆಯೇ ನೇರವಾಗಿ ಕೂಪನ್ ಮಾರಾಟ ಕೌಂಟರ್ ಗೆ ಓಡಿದ್ದರಿಂದ ಭಾನುವಾರ ನೂಕುನುಗ್ಗಲು ಉಂಟಾಗಿ ಕೌಂಟರ್ ಮುರಿದು ಬಿದ್ದಿತ್ತು.
ಈ ವೇಳೆ ಪೊಲೀಸರು ಹಾಗೂ ಸೆಕ್ಯುರಿಟಿ ಗಾರ್ಡ್‍ಗಳು ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಟ್ಟರು. ಆದರೆ ಜನರ ನೂಕುನುಗ್ಗಲು ಹೆಚ್ಚಾದಂತೆ ಪ್ರಾಣಹಾನಿ ತಪ್ಪಿಸುವ ಉದ್ದೇಶದಿಂದ ಮಾರಾಟ ನಿಲ್ಲಿಸಲಾಗಿತ್ತು. ಇದೀಗ ಮತ್ತೆ ಕೂಪನ್ ಮಾರಾಟ ಆರಂಭಗೊಂಡಿದ್ದು, ಖರೀದಿಗೆ ಭಾರಿ ಸಂಖ್ಯೆಯಲ್ಲಿ ಜನರು ಮುಗಿ ಬೀಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Viral: ಲಿಂಗ ಪರಿವರ್ತನೆ ಸರ್ಜರಿಗೆ ಒಳಗಾಗಿ ಪ್ರೀತಿಸಿದ ಯುವತಿ ಜತೆ ವಿವಾಹವಾದ ಮಹಿಳೆ.!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.