ಗೋವಾ ಗ್ರಾ.ಪಂ.ಚುನಾವಣೆ; ಕನ್ನಡ ಅಭ್ಯರ್ಥಿಗಳ ಪ್ಯಾನಲ್ : ವಿವಾದಕ್ಕೆ ಗುರಿ
ನಿಮ್ಮ ತಂದೆಯ ಆಸ್ತಿಯಲ್ಲ ಎಂದ ತುಕಾರಾಂ ಪರಬ್
Team Udayavani, May 15, 2022, 7:21 PM IST
ಸಿದ್ಧಣ್ಣ ಮೇಟಿ, ತುಕಾರಾಂ ಪರಬ್
ಪಣಜಿ: ಜೂನ್ ತಿಂಗಳಲ್ಲಿ ಗೋವಾ ರಾಜ್ಯದ 190 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯಲಿದೆ. ಅಗತ್ಯಬಿದ್ದರೆ ಕನ್ನಡ ಅಭ್ಯರ್ಥಿಗಳ ಪ್ಯಾನಲ್ ರಚಿಸುವುದಾಗಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಸಿದ್ಧಣ್ಣ ಮೇಟಿ ಘೋಷಿಸಿದ್ದಾರೆ.
ಸಿದ್ಧಣ್ಣ ಮೇಟಿ ಹೇಳಿಕೆ ಬೆನ್ನಲ್ಲೆ ಪ್ರಾದೇಶಿಕ ರಾಜಕೀಯ ಪಕ್ಷಗಳಲ್ಲಿ ನಡುಕ ಶುರುವಾಗಿದೆ. ಗೋವಾ ಕನ್ನಡಿಗರನ್ನು ಟೀಕಿಸುವ ಭರದಲ್ಲಿ ರೆವೊಲ್ಯೂಷನ್ ಗೋವನ್ ಪಕ್ಷದ ಅಧ್ಯಕ್ಷ ತುಕಾರಾಂ ಪರಬ್ ವಿವಾದಿತ ಹೇಳಿಕೆ ನೀಡಿದ್ದಾರೆ.
ಗೋವಾ ಸ್ಥಳೀಯ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಗೋವಾ ಕನ್ನಡಿಗರು ನಮ್ಮ ಸಾಂಪ್ರದಾಯಿಕ ಹಬ್ಬಗಳಲ್ಲಿ ಏಕೆ ಪ್ರವೇಶಿಸುತ್ತಾರೆ. ಗೋವಾದಲ್ಲಿ ಕನ್ನಡಿಗರು ದುರ್ಗಾ ಪೂಜೆ ಮಾಡುತ್ತಾರೆ. ಗಣೇಶ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ರಾಜಕೀಯ ಲಾಭಕ್ಕಾಗಿ ಗೋವಾ ಕನ್ನಡಿಗರು. ನಮ್ಮ ಹಬ್ಬಗಳಲ್ಲಿ ಭಾಗಿಯಾಗುತ್ತೀರಿ. ಗೋವಾ ಕನ್ನಡಿಗರು ಗೋವಾವನ್ನು ತಮ್ಮ ತಂದೆಯ ಆಸ್ತಿ ಎಂದು ಭಾವಿಸಿದ್ದಾರೆ. ಗೋವಾದಲ್ಲಿ ಕನ್ನಡಿಗರು ದಾದಾಗಿರಿ ಪ್ರದರ್ಶಿಸುತ್ತಾರೆ. ಇದು ನಿಮ್ಮ ತಂದೆಯ ಆಸ್ತಿಯಲ್ಲ, ನಮ್ಮ ತಂದೆಯ ಆಸ್ತಿ, ನೀವು ನಮ್ಮ ಹಬ್ಬಗಳ ಆಚರಣೆಯಲ್ಲಿಯೂ ಮಧ್ಯಪ್ರವೇಶಿಸುತ್ತೀರಿ ಎಂದು ಹೇಳುವ ಮೂಲಕ ಗೋವಾದಲ್ಲಿ ಹಿಂದೂ ಉತ್ಸವ ಮತ್ತು ಸಮಾರಂಭದಲ್ಲಿ ಕನ್ನಡಿಗರು ಭಾಗವಹಿಸುವುದಕ್ಕೂ ರೆವೊಲ್ಯೂಷನ್ ಗೋವನ್ಸ್ ಪಕ್ಷದ ಅಧ್ಯಕ್ಷ ತುಕಾರಾಮ ಪರಬ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.