Goa ಮಾನಕುರಾದ್ ಮಾವಿನ ಹಣ್ಣು ಡಜನ್‍ಗೆ 2,500 ರೂ.!!
Team Udayavani, Apr 9, 2023, 6:34 PM IST
ಪಣಜಿ: ಗೋವಾದ ಮಾವಿನ ಹಣ್ಣುಗಳ ರಾಜ ಮಾನಕುರಾದ್ ಮಾರುಕಟ್ಟೆಗೆ ಬಂದು ಎರಡು ತಿಂಗಳು ಕಳೆದರೂ ಬೆಲೆ ಮಾತ್ರ ಇನ್ನೂ ಇಳಿಕೆಯಾಗಿಲ್ಲ. ಪ್ರತಿ ಡಜನ್‍ಗೆ ಕಳೆದ ಒಂದು ತಿಂಗಳ ಹಿಂದೆ 5,000 ರೂಗಳಿತ್ತು, ಆದರೆ ಇಂದು 2,500 ರೂ. ಬಂದು ತಲುಪಿದೆ. ಸಕ್ಕರೆಯಷ್ಟೇ ಸಿಹಿಯಾದ ಮಾನಕುರಾದ್ ಮಾವಿನ ಹಣ್ಣು ಇದುವರೆಗೂ ಜನಸಾಮಾನ್ಯರ ಕೈಗೆಟುಕದಿರುವಂತಾಗಿಯೇ ಉಳಿದಿದೆ.
ಸದ್ಯ ಗೋವಾದ ಮಾರುಕಟ್ಟೆಗೆ ಮಾನಕುರಾದ್ ಮಾವಿನ ಹಣ್ಣಿನ ಜೊತೆಗೆ ಆಪೂರ್, ಪಾಯರಿ, ಶೆಂದೂರಿ, ಹೀಗೆ ನಾನಾ ಬಗೆಯ ಮಾವು ಮಾರುಕಟ್ಟೆ ಪ್ರವೇಶಿಸಿದ್ದು, ಈ ಮಾವಿನ ಹಣ್ಣುಗಳು ಡಜನ್ ಗೆ ಸರಾಸರಿ ಸುಮಾರು 2000 ರೂ.ನಂತೆ ಮಾರಾಟವಾಗುತ್ತಿದೆ. ಇಷ್ಟು ಹಣ ಕೊಟ್ಟು ಮಾವಿನ ಹಣ್ಣಿನ ರುಚಿಯನ್ನು ಸಾಮಾನ್ಯ ನಾಗರಿಕರು ಸವಿಯಲಾಗದೆ ಮಾವಿನ ಹಣ್ಣಿನ ಬೆಲೆ ಕುಸಿತಕ್ಕೆ ಕಾಯುತ್ತಿರುವಂತಾಗಿದೆ.
ಮುಂದಿನ ತಿಂಗಳುಗಳಲ್ಲಿ ಮಾವು ಉತ್ಪಾದನೆ ಹೆಚ್ಚಾಗಲಿದ್ದು, ಬೆಲೆ ಎಲ್ಲರಿಗೂ ಕೈಗೆಟಕಲಿದೆ ಎನ್ನುತ್ತಾರೆ ಮಾರಾಟಗಾರರು. ರಾಜ್ಯದಲ್ಲಿ ಪ್ರಸಕ್ತ ವರ್ಷ ಮಾವಿನ ಬೆಳೆಯ ಕೊರತೆಯಿರುವ ಕಾರಣ ಮತ್ತು ಮಾವಿನ ಹಣ್ಣಿನ ಬೆಲೆ ಕೈಗೆಟುಕದ ಕಾರಣ ಹಲವು ಗ್ರಾಹಕರು ಸೇಬು, ದ್ರಾಕ್ಷಿ , ಮೋಸಂಬಿ ಮತ್ತಿತರ ರಸಭರಿತ ಹಣ್ಣುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದ್ದಾರೆ. ಆದ್ದರಿಂದ, ಇತರ ಹಣ್ಣುಗಳಿಗೆ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹಣ್ಣು ಮಾರಾಟಗಾರರು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
Encounter: ಬೆಳ್ಳಂಬೆಳಗ್ಗೆ ಜಮ್ಮು ಕಾಶ್ಮೀರದಲ್ಲಿ ಗುಂಡಿನ ದಾಳಿ; 5 ಭಯೋತ್ಪಾದಕರು ಹತ
22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.