BYPOLL: ಗೋವೆಯ ಎರಡೂ ಕ್ಷೇತ್ರ ಬಿಜೆಪಿಗೆ, ದಿಲ್ಲಿ ಗೆದ್ದ ಆಪ್
Team Udayavani, Aug 28, 2017, 11:48 AM IST
ಪಣಜಿ : ಗೋವೆಯಲ್ಲಿನ ಆಡಳಿತರೂಢ ಬಿಜೆಪಿ ಕಳೆದ ಆ.23ರಂದು ರಾಜ್ಯದಲ್ಲಿನ ಎರಡು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಎರಡನ್ನೂ ಜಯಿಸಿದೆ.
ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರು ಪಣಜಿ ಕ್ಷೇತ್ರದಿಂದಲೂ ಆರೋಗ್ಯ ಸಚಿವ ವಿಶ್ವಜಿತ್ ರಾಣೆಅವರು ವಾಲಪೋಯಿ ಕ್ಷೇತ್ರದಿಂದಲೂ ಗೆಲವು ಸಾಧಿಸಿದ್ದಾರೆ.
ಪರ್ರೀಕರ್ (9,862 ಮತ) ತಮ್ಮ ನಿಕಟ ಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ಗಿರೀಶ್ ಛೋಡಣ್‌ಕರ್ (5,059 ಮತ) ಅವರನ್ನು 4,803 ಮತಗಳಿಂದ ಸೋಲಿಸಿದ್ದಾರೆ.
ವಾಲಪೋಯಿ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಅವರು ತಮ್ಮ ನಿಕಟ ಸ್ಪರ್ಧಿ ಕಾಂಗ್ರೆಸ್‌ನ ರಾಯ್ ನಾಯಕ್ ಅವರನ್ನು 10,066 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.
ಮೂರನೇ ಹಾಗೂ ಅಂತಿಮ ಸುತ್ತಿನ ಮತ ಎಣಿಕೆ ಮುಗಿದಿದ್ದಾಗ ರಾಣೆ ಅವರಿಗೆ 16,167 ಮತಗಳು ಪ್ರಾಪ್ತವಾಗಿದ್ದವು. ರಾಯ್ ನಾಯಕ್ ಅವರಿಗೆ 6,101 ಮತಗಳು ಮಾತ್ರವೇ ಸಿಕ್ಕಿದ್ದವು.
ಪಕ್ಷೇತರ ಅಭ್ಯರ್ಥಿ ರೋಹಿದಾಸ್ ಗಾಂವಕರ್‌ಗೆ 316 ಮತಗಳು ಸಿಕ್ಕಿವೆ. 454 ಮತಗಳು ನೋಟಾ ಪಾಲಾಗಿವೆ.
ದಿಲ್ಲಿ ಗೆದ್ದ ಆಪ್
ದಿಲ್ಲಿಯ ಬವಾನಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಪ್ ಅಭ್ಯರ್ಥಿ ರಾಮ್ ಚಂದರ್ ಜಯ ಸಾಧಿಸಿದ್ದಾರೆ. ಅವರು 12ನೇ ಸುತ್ತಿನ ಮತ ಎಣಿಕೆ ಮುಗಿದಾಗ ಕಾಂಗ್ರೆಸ್ ಅಭ್ಯರ್ಥಿ ಸುರೇಂದರ್ ಕುಮಾರ್ ಅವರಿಗಿಂತ ಮುಂದಿದ್ದರು.
12ನೇ ಸುತ್ತಿನ ಮತ ಎಣಿಕೆಯ ಅಂತ್ಯದಲ್ಲಿ ಆಪ್ ಅಭ್ಯರ್ಥಿಗೆ 23,216 ಮತಗಳು ಸಿಕ್ಕಿವೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಕುಮಾರ್‌ಗೆ 21,848 ಮತಗಳು ದೊರಕಿವೆ.
ಮೂರನೇ ಸ್ಥಾನದಲ್ಲಿರುವ ಬಿಜೆಪಿ ಅಭ್ಯರ್ಥಿ ವೇದ ಪ್ರಕಾಶ್‌ಗೆ 16,561 ಮತಗಳು ಸಿಕ್ಕಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
ಮನುಷ್ಯ ನೀನು ದಂಡ, ಸತ್ತು ಹೋಗು!: ಎಐ ಚಾಟ್‌ಬಾಟ್ ಹೇಳಿಕೆ
Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.