![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Oct 19, 2021, 6:59 PM IST
ಪಣಜಿ: ಪಾರ್ಕಿಂಗ್ ಶುಲ್ಕದ ವಿಚಾರವಾಗಿ ಉಂಟಾದ ಜಗಳವೊಂದರಲ್ಲಿ ಕಳೆದ ಶುಕ್ರವಾರ ಪಾರ್ಕಿಂಗ್ ಹಣ ವಸೂಲಿದಾರ ಸಾಗರ ನಾಯ್ಕ ಈತನ ಕೊಲೆಯಾಗಿತ್ತು. ಈ ಘಟನೆಯ ನಡುವೆ ಅಲ್ಲಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ದೊರೆತಿರುವ ಮಾಹಿತಿ ಪ್ರಕಾರ ಸಾಗರ ನಾಯ್ಕ ನ ಬಳಿ ಕರ್ನಾಟಕ ಮೂಲದ ಅಸಾಯಕ ಮಹಿಳೆಯೋರ್ವಳು ತನ್ನ ಪ್ರಾಣಭಿಕ್ಷೆ ಬೇಡುತ್ತಿರುವ ದೃಶ್ಯ ಬೆಳಕಿಗೆ ಬಂದಿದೆ. ಇದರಿಂದಾಗಿ ಸಾಗರ ನಾಯ್ಕ ಈತನ ಕೊಲೆ ಹೇಗಾಗಿದೆ ಎಂಬುದು ಪೋಲಿಸರಿಗೆ ಪ್ರಶ್ನೆಯಾಗಿಯೇ ಉಳಿದಿದೆ.
ಘಟನೆಯ ವಿವರ: ಗೋವಾದ ಹಣಜುಣ ಬೀಚ್‍ನಲ್ಲಿ ಕಳೆದ ಶುಕ್ರವಾರ ಮಧ್ಯಾಹ್ನ ಪಾರ್ಕಿಂಗ್ ಹಣ ವಸೂಲಿದಾರ ಮತ್ತು ಕರ್ನಾಟಕದ ಪ್ರವಾಸಿಗರ ನಡುವೆ ಮಾರಾಮಾರಿಯಾಗಿತ್ತು. ಈ ಘಟನೆಯಲ್ಲಿ ಸಾಗರ ನಾಯ್ಕ ಮೃತಪಟ್ಟಿದ್ದ. ಈ ಘಟನೆಯ ನಂತರ ಪಲಾಯನಗೈಯ್ಯುತ್ತಿದ್ದ ಕರ್ನಾಟಕದ ಪ್ರವಾಸಿಗರನ್ನು ಕಾಣಕೋಣ ಪೋಲಿಸರು ಬಂಧಿಸಿ ಹಣಜುಣ ಪೋಲಿಸರಿಗೆ ಒಪ್ಪಿಸಿದ್ದರು.
ಇದನ್ನೂ ಓದಿ:ಭೂಕಂಪನ ಪೀಡಿತ ಗಡಿಕೇಶ್ವರ ಗ್ರಾಮಕ್ಕೆ ಕಂದಾಯ ಸಚಿವ ಆರ್.ಅಶೋಕ ಭೇಟಿ
ಆದರೆ ಆ ಘಟನೆಯ ಸಂದರ್ಭದಲ್ಲಿ ಅಸಹಾಯಕ ಕರ್ನಾಟಕದ ಮಹಿಳೆಯೋರ್ವಳು ಸಾಗರ ನಾಯ್ಕನ ಬಳಿ ತನ್ನ ಜೀವಭಿಕ್ಷೆ ಬೇಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇಷ್ಟೇ ಅಲ್ಲದೆಯೇ ಸಾಗರ ನಾಯ್ಕ ನ ಮೇಲೂ ಪೋಲಿಸ್ ಠಾಣೆಯಲ್ಲಿ ಹಲವು ದೂರು ದಾಖಲಾಗಿರುವುದಾಗಿ ಪೋಲಿಸರು ಮಾಹಿತಿ ನೀಡಿದ್ದಾರೆ.
ಪ್ರವಾಸಿಗರ ಮೇಲೆ ಧಮಕಿ ಹಾಕಿ ಹಣ ವಸೂಲಿ ಮಾಡುವುದು, ಹಲ್ಲೆ ನಡೆಸುವುದು ಇಂತಹ ಹಲವು ದೂರುಗಳು ಸಾಗರ ನಾಯ್ಕ ಈತನ ವಿರುದ್ದ ಈ ಹಿಂದೆ ಬಂದಿರುವುದಾಗಿ ಪೋಲಿಸರು ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆಯೇ ಸ್ಥಳೀಯ ಪ್ರತ್ಯಕ್ಷದರ್ಶಿಗಳು ಈ ಪ್ರಕರಣದಲ್ಲಿ ಸಾಗರ ನಾಯ್ಕ ಈತನದ್ದೇ ತಪ್ಪು ಎಂಬ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
Stampede: ಕುಂಭಕ್ಕೆ ಹೊರಟವರು ಕಾಲ್ತುಳಿತಕ್ಕೆ ಬಲಿ! ದೆಹಲಿ ರೈಲುನಿಲ್ದಾಣದಲ್ಲಿ ಆಗಿದ್ದೇನು?
You seem to have an Ad Blocker on.
To continue reading, please turn it off or whitelist Udayavani.