![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 9, 2024, 3:04 PM IST
ಪಣಜಿ: ಮಿರಾಮರ್ ಸೀಫುಡ್ ಫೆಸ್ಟಿವಲ್ ಪ್ರಕರಣದಲ್ಲಿ, ಗೋವಾ ಸರ್ಕಾರವು ಸಮುದ್ರಾಹಾರ ಉತ್ಸವವನ್ನು ಸೂಕ್ತ ದಿನಾಂಕಕ್ಕೆ ಮುಂದೂಡಲು ಸಿದ್ಧ ಎಂದು ಹೈಕೋರ್ಟ್‍ಗೆ ತಿಳಿಸಿದೆ. ಸರ್ಕಾರದ ಈ ಹೇಳಿಕೆಯನ್ನು ಹೈಕೋರ್ಟ್ ಒಪ್ಪಿಕೊಂಡಿದ್ದು, ಮುಂದಿನ ವಿಚಾರಣೆಯನ್ನು ಮಾರ್ಚ್ 26ಕ್ಕೆ ಮುಂದೂಡಿದೆ.
ಗುರುವಾರ ಹೈಕೋರ್ಟ್‍ನಲ್ಲಿ ಮಿರಾಮಾರ್ ಸೀಫುಡ್ ಫೆಸ್ಟಿವಲ್ ಕುರಿತು ವಿಚಾರಣೆ ನಡೆದಿತ್ತು. ಈ ಸಮಯದಲ್ಲಿ, ಗೋವಾ ಸರ್ಕಾರವು ಈ ಸಮುದ್ರಾಹಾರ ಉತ್ಸವವನ್ನು ಮತ್ತೊಂದು ಸೂಕ್ತ ದಿನಾಂಕಕ್ಕೆ ಮುಂದೂಡಲು ಹೈಕೋರ್ಟ್ ಸೂಚಿಸಿದೆ. ಪ್ರವಾಸೋದ್ಯಮ ಇಲಾಖೆಯು ಫೆ.9ರಿಂದ 11 ರವರೆಗೆ ಆಯೋಜಿಸಲಿರುವ ಪ್ರಸಿದ್ಧ ಸಮುದ್ರಾಹಾರ ಉತ್ಸವವನ್ನು ಮುಂದೂಡುವುದು ಅಸಾಧ್ಯ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಬುಧವಾರ ಉತ್ತರ ನೀಡಿತ್ತು. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಗುರುವಾರಕ್ಕೆ ನಿಗದಿಪಡಿಸಲಾಗಿತ್ತು.
ಉತ್ಸವ ಆರಂಭಕ್ಕೆ ಎರಡ್ಮೂರು ದಿನ ಮುಂಚಿತವಾಗಿ ಉತ್ಸವದ ದಾಖಲೆಗಳನ್ನು ಸರ್ಕಾರ ಸಲ್ಲಿಸಿರುವ ಬಗ್ಗೆ ಬುಧವಾರವೂ ಪ್ರತಿಕ್ರಿಯಿಸಿದ ಹೈಕೋರ್ಟ್, ಸನ್ ಬರ್ನ್ ಉತ್ಸವದ ವೇಳೆ ಸರ್ಕಾರ ಎರಡು ದಿನ ಮುಂಚಿತವಾಗಿ ಅನುಮತಿ ನೀಡುವುದು ಅಲಿಖಿತ ನಿಯಮವಾಗಿದೆ. ಈ ಮೂಲಕ ಸರಕಾರವು ನ್ಯಾಯಾಂಗ ಪರಿಶೀಲನೆಯನ್ನು ನಿರಾಕರಿಸಿ ನಾಗರಿಕರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: Little Dragons: ಹೆಚ್ಚು ಮಕ್ಕಳನ್ನು ಹೆರಿ… ಸಿಂಗಾಪುರ ದಂಪತಿಗಳಿಗೆ ಪ್ರಧಾನಿ ಲೀ ಮನವಿ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.