Goa; ವಾಳಪೈ-ಬೆಳಗಾವಿ ಹೊಸ ರಸ್ತೆ ಉದ್ಘಾಟನೆ
Team Udayavani, Jun 29, 2023, 4:35 PM IST
ಪಣಜಿ: ಗೋವಾದ ವಾಳಪೈ ಮಾರ್ಗವಾಗಿ ಕರ್ನಾಟಕದ ಬೆಳಗಾವಿಯನ್ನು ಸಂಪರ್ಕಿಸುವ ಹೊಸ ರಸ್ತೆಯನ್ನು ಉದ್ಘಾಟಿಸಲಾಗಿದೆ. ಹೊಸ ಮಾರ್ಗವು ವಾಳಪೈ ಮತ್ತು ಬೆಳಗಾವಿ ನಡುವಿನ ಅಂತರವನ್ನು 30 ಕಿಲೋ ಮೀಟರ್ಗಳಷ್ಟು ಕಡಿಮೆಗೊಳಿಸಿದೆ ಮತ್ತು ಪ್ರಯಾಣದ ಸಮಯವನ್ನು 1.5 ಗಂಟೆಗಳವರೆಗೆ ಕಡಿಮೆ ಮಾಡಲಿದೆ ಎನ್ನಲಾಗಿದೆ.
ಪ್ರಾರಂಭದಲ್ಲಿ ವಾಳಪೈಯಿಂದ ಬೆಳಗಾವಿಗೆ 70 ಕಿ.ಮೀ ದೂರ ಕ್ರಮಿಸಲು ಸುಮಾರು ಮೂರು ಗಂಟೆ ತಗುಲುತ್ತಿತ್ತು. ಹೊಸ ಮಾರ್ಗದಿಂದ ಪ್ರವಾಸೋದ್ಯಮವನ್ನು ಆನಂದಿಸಲು ಸಾಧ್ಯವಾಗುತ್ತದೆ. ಈ ಹೊಸ ರಸ್ತೆಯು ಥಾಣೆ ಗ್ರಾಮದ ಪಾಲಿಯಿಂದ ಹೋಗುತ್ತದೆ. ಲಘು ವಾಹನಗಳಿಗೆ ರಸ್ತೆ ಮುಕ್ತಗೊಳಿಸಲಾಗಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಹೊಸ ರಸ್ತೆಯಲ್ಲಿ ಭಾರೀ ವಾಹನಗಳು ಓಡಾಟಕ್ಕೆ ಅವಕಾಶ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹದಾಯಿ ವನ್ಯಜೀವಿ ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ಈ ರಸ್ತೆಯು ಸುರ್ಲಾ ಗ್ರಾಮದೊಂದಿಗೆ ಉತ್ತಮ ಸಂಪರ್ಕವನ್ನು ಸೃಷ್ಟಿಸಿದೆ. ಈ ಹಿಂದೆ ಪಾಳಿಯಿಂದ ಸುರ್ಲಾ ಗ್ರಾಮಕ್ಕೆ ತೆರಳಲು ಜನರು ಕೇರಿಯ ಮೂಲಕ ಸಂಚರಿಸಬೇಕಿತ್ತು. ಮತ್ತು ಈ ದೂರ ಸುಮಾರು 35 ಕಿ.ಮೀ ಆಗಿತ್ತು. ವಾಳಪೈಯಲ್ಲಿ ಹೊಸ ರಸ್ತೆಯು ಈ ಪ್ರದೇಶದ ಅಭಿವೃದ್ಧಿಗೆ ಉತ್ತೇಜನವನ್ನು ನೀಡುತ್ತದೆ, ಜೊತೆಗೆ ಸುರ್ಲಾ ಗ್ರಾಮಕ್ಕೆ ಉತ್ತಮ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದು ಪರ್ಯೆ ಕ್ಷೇತ್ರದ ಶಾಸಕಿ ದಿವ್ಯಾ ರಾಣೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹೊಸ ಮಾರ್ಗದಿಂದ ತೆರಳುವ ಪ್ರವಾಸಿಗರಿಗೆ ಸುರ್ಲಾ ಗ್ರಾಮದ ಸುತ್ತಮುತ್ತಲಿನ ವಿವಿಧ ಜಲಪಾತಗಳನ್ನು ವೀಕ್ಷಿಸಲು ಅವಕಾಶವಿದೆ. ಅಲ್ಲದೆ, ಹಚ್ಚ ಹಸುರಿನ ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವಿರಿ ಎಂದು ಅರಣ್ಯ ಸಚಿವ ವಿಶ್ವಜೀತ್ ರಾಣೆ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.