15 ವರ್ಷದಿಂದ ಕೋಣೆಯಲ್ಲಿ ನಗ್ನಳಾಗಿ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ
Team Udayavani, Jul 12, 2017, 12:13 PM IST
ಪಣಜಿ: ಹೆತ್ತವರಿಗೆ ಸೇರಿದ ಮನೆಯಲ್ಲಿ ತನ್ನ ಸಹೋದರನ ಕುಟುಂಬದವರಿಂದಲೇ ಕಳೆದ 15 ವರ್ಷಗಳಿಂದಲೂ ಕೋಣೆಯೊಂದರಲ್ಲಿ ಕೂಡಿ ಹಾಕಲ್ಪಟ್ಟ, ಖನ್ನತೆಯಿಂದ ನರಳುತ್ತಿದ್ದ, ನಗ್ನ ಸ್ಥಿತಿಯಲ್ಲಿದ್ದ 50ರ ಹರೆಯದ ಮಹಿಳೆಯನ್ನು ಉತ್ತರ ಗೋವೆಯ ಕಾಂಡೋಲಿಂ ಗ್ರಾಮದಲ್ಲಿ ಮಹಿಳಾ ಹಕ್ಕು ಕಾರ್ಯಕರ್ತೆಯರು ಪಾರು ಮಾಡಿದ್ದಾರೆ.
“ಬೈಲಾಂಚೋ ಸಾದ್’ ಎಂಬ ಮಹಿಳಾ ಹಕ್ಕುಗಳ ಸರಕಾರೇತರ ಸೇವಾ ಸಂಘಟನೆ (ಎನ್‌ಜಿಓ) ಯ ಕಾರ್ಯಕರ್ತೆಯರು ನಿನ್ನೆ ಮಂಗಳವಾರ ಪೊಲೀಸರ ಸಹಾಯ ಪಡೆದು ಮಹಿಳೆಯನ್ನು ಕೂಡಿ ಹಾಕಲಾಗಿದ್ದ ಕೋಣೆಯನ್ನು ಬಲವಂತದಿಂದ ಪ್ರವೇಶಿಸಿ ಮಹಿಳೆಯನ್ನು ಪಾರುಗೊಳಿಸಿದರು ಎಂದು ಇಂದು ಬುಧವಾರ ಐಎಎನ್‌ಎಸ್ ವರದಿ ಮಾಡಿದೆ.
50ರ ಹರೆಯದ ಸುನೀತಾ ವೇರ್‌ಲೇಕರ್ ಎಂಬ ಮಹಿಳೆಯೇ ಪಾರುಮಾಡಲ್ಪಟ್ಟವಳು.
ಈಕೆಯ ಹೆತ್ತವರ ಮನೆಯನ್ನು ಆಕ್ರಮಿಸಿಕೊಂಡಿದ್ದ ಈಕೆಯ ಸಹೋದರ ಮೋಹನ್‌ದಾಸ್ ನ ಕುಟುಂಬದವರು ಈಕೆಯನ್ನು ಕಳೆದ 15 ವರ್ಷಗಳಿಂದಲೂ “ಖನ್ನತೆಯಿಂದ ನರಳುತ್ತಿದ್ದಾಳೆ’ ಎಂಬ ಕಾರಣಕ್ಕೆ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದರು.
ಕೋಣೆಯ ಬಾಗಿಲಿನ ಒಡೆದ ಸಂದಿಯಿಂದ ಆಕೆಗೆ ಮನೆಯವರು ಆಹಾರ ಕೊಡುತ್ತಿದ್ದರು. ಕೋಣೆಯಲ್ಲಿ ಮೂತ್ರ ಶಂಕೆಯ ಗಬ್ಬು ನಾತವೇ ತುಂಬಿತ್ತು. ಮನೆಯವರು ಆಕೆಗೆ ಉಡಲು ಬಟ್ಟೆಯನ್ನೇ ಕೊಡುತ್ತಿರಲಿಲ್ಲ. ಹಾಗಾಗಿ ಸುನೀತಾ ನಗ್ನವಾಗಿಯೇ ಕೋಣೆಯಲ್ಲಿ ಇರುತ್ತಿದ್ದಳು ಎಂದು ಪೊಲೀಸ್ ಸುಪರಿಂಟೆಂಡೆಂಟ್ (ಕ್ರೈಮ್) ಕಾರ್ತಿಕ್ ಕಶ್ಯಪ್ ಸುದ್ದಿಗಾರರಿಗೆ ತಿಳಿಸಿದರು.
ಪಾರುಗೊಳಿಸಲ್ಪಟ್ಟ ಸುನೀತಾಳನ್ನು ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಬಳಿಕ ಆಕೆಯನ್ನು ಪಣಜಿಯಲ್ಲಿ ಮನೋಚಿಕಿತ್ಸೆ ಮತ್ತು ಮಾನವ-ನಡತೆ-ಸುಧಾರಣಾ ಕೇಂದ್ರಕ್ಕೆ ಸೇರಿಸಲಾಗಿದೆ.
ಸುಜಾತಾಳನ್ನು ಅಕ್ರಮವಾಗಿ ಕೋಣೆಯಲ್ಲಿ 15 ವರ್ಷಗಳಿಂದ ಕೂಡಿಟ್ಟ ಅಪರಾಧಕ್ಕಾಗಿ ಆಕೆಯ ಅಣ್ಣ ಮೋಹನ್‌ದಾಸ್ ಮತ್ತು ಆತನ ಮನೆಯವರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಆದರೆ ಈ ಸಂಬಂಧ ಈಗಿನ್ನೂ ಅವರು ಯಾರನ್ನೂ ಬಂಧಿಸಿಲ್ಲ; ತನಿಖೆ ಇನ್ನೂಪ್ರಾಥಮಿಕ ಹಂತದಲ್ಲೇ ಇದೆ ಎಂದು ಕಶ್ಯಪ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Tragedy: ರೈಲು ಹಳಿ ಮೇಲೆ ಕೂತು PUBG ಆಡುತ್ತಿದ್ದ ಮೂವರು ಯುವಕರ ದೇಹ ಛಿದ್ರ ಛಿದ್ರ…
Fog: ಉತ್ತರ ಭಾರತದಲ್ಲಿ ದಟ್ಟ ಮಂಜು, ಶೂನ್ಯ ಗೋಚರತೆ: ವಿಮಾನ, ರೈಲು ಸಂಚಾರದ ಮೇಲೆ ಪರಿಣಾಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.