ಮೋದಿ ಜೀ, ಗೋದ್ರಾ ಹಿಂಸೆಗೆ ನೀವೇ ಕಾರಣ ಎನ್ನಬಹುದೇ ? ಕ್ಯಾಪ್ಟನ್ ಅಮರೀಂದರ್
Team Udayavani, May 11, 2019, 11:30 AM IST
ಪಟಿಯಾಲಾ : ‘2002ರಲ್ಲಿ ನಡೆದಿದ್ದ ಗುಜರಾತ್ನ ಗೋದ್ರಾ ದೊಂಬಿಗೂ ನಿಮಗೂ ನಂಟಿದೆ ಎಂದು ಯಾರಾದಾರೂ ಆರೋಪಿಸಿದರೆ ನೀವೇನು ಹೇಳುವಿರಿ?’ ಎಂದು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
1984ರ ಸಿಕ್ಖ್ ವಿರೋಧಿ ಹಿಂಸೆಗೆ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವೇ ಕಾರಣ ಎಂದು ಆರೋಪಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಮರೀಂದರ್ ಸಿಂಗ್ ಈ ಪ್ರಶ್ನೆಯನ್ನು ನೇರವಾಗಿ ಎಸೆದರು.
“1984ರ ಸಿಕ್ಖ್ ವಿರೋಧಿ ಹಿಂಸೆಗೆ ಮಾಜಿ ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಕಾರಣರೆಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸುವುದು ತಪ್ಪು. ಇದು ಸರಿ ಎಂದಾದರೆ ಗೋದ್ರಾ ಹಿಂಸೆಗೆ ಮೋದಿಯೇ ಕಾರಣ ಎಂದು ಹೇಳುವುದು ಕೂಡ ಸರಿಯಾದೀತು’ ಎಂದು ಅಮರೀಂದರ್ ಸಿಂಗ್ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
‘ಚುನಾವಣೆಗಳನ್ನು ಗೆಲ್ಲುವ ಸಲುವಾಗಿ ಪ್ರಧಾನಿ ಮೋದಿ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿರುವುದು ದುರದೃಷ್ಟಕರ; ಈ ರೀತಿಯ ವರ್ತನೆ ದೇಶದ ಪ್ರಧಾನಿಗೆ ತಕ್ಕುದಲ್ಲ’ ಎಂದು ಅಮರೀಂದರ್ ಸಿಂಗ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.