
“ಗೋಲ್ಡನ್ ಸ್ಕ್ವಾಡ್ರನ್’ ಇನ್ನು ಮುಂದೆ “ರಫೇಲ್ ಸ್ಕ್ವಾಡ್ರನ್’
Team Udayavani, Sep 11, 2019, 5:50 AM IST

ಹೊಸದಿಲ್ಲಿ: ಕಾರ್ಗಿಲ್ ಕಾರ್ಯಾಚರಣೆಯಲ್ಲಿ ಪ್ರಮುಖ ಭೂಮಿಕೆ ನಿಭಾಯಿಸಿದ್ದ “ನಂ.17 ಗೋಲ್ಡನ್ ಸ್ಕ್ವಾಡ್ರನ್’ ಅನ್ನು ಮತ್ತೆ ಪುನಾರಂಭಿಸಲಾಗಿದೆ. ಅದನ್ನು ದೇಶದ ಮೊದಲ “ರಫೇಲ್ ಸ್ಕ್ವಾಡ್ರನ್’ ಆಗಿ ಗುರುತಿಸಲಾಗುತ್ತದೆ. ಹರ್ಯಾಣದ ಅಂಬಾಲದಲ್ಲಿರುವ ವಾಯುಪಡೆಯ ನೆಲೆಯಲ್ಲಿ ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಮಂಗಳವಾರ ಅದನ್ನು ಉದ್ಘಾಟಿಸಿದ್ದಾರೆ.
ಪುನರಾರಂಭಗೊಂಡಿರುವ ಈ ಸ್ಕ್ವಾಡ್ರನ್ ಅನ್ನು ಅ.8ರಂದು ಭಾರತಕ್ಕೆ ಅಧಿಕೃತವಾಗಿ ಹಸ್ತಾಂತರ ಗೊಳ್ಳಲಿರುವ ರಫೇಲ್ ಯುದ್ಧ ವಿಮಾನದ ನಿರ್ವಹಣೆ ಮತ್ತು ಬಳಕೆಯ ಉಸ್ತುವಾರಿಗಾಗಿ ಬಳಸಿಕೊಳ್ಳಲಾಗುತ್ತದೆ. 1951ರ ಅ.1ರಂದು “ನಂ.17 ಗೋಲ್ಡನ್ ಸ್ಕ್ವಾಡ್ರನ್’ ಅನ್ನು ಶುರು ಮಾಡಲಾಗಿತ್ತು. ಆರಂಭದಲ್ಲಿ ಹಾರ್ವರ್ಡ್ 2ಬಿ ಟ್ರೈನರ್ ಅನ್ನು ಬಳಕೆ ಮಾಡಲಾಗುತ್ತಿತ್ತು.
ಅನಂತರದ ವರ್ಷದಲ್ಲಿ ಬ್ರಿಟನ್ ನಿರ್ಮಿತ ಹಾಕರ್ ಹಂಟರ್ ಮತ್ತು ರಷ್ಯಾ ನಿರ್ಮಿತ ಮಿಗ್ 21 ಯುದ್ಧ ವಿಮಾನಗಳ ಬಳಕೆ ಮಾಡಲು ಶುರು ಮಾಡಲಾಯಿತು. ಬದಲಾದ ಕಾಲಘಟ್ಟದಲ್ಲಿ ಮಿಗ್21 ಯುದ್ಧ ವಿಮಾನಗಳನ್ನು ಹಂತ ಹಂತವಾಗಿ ಹಿಂಪಡೆದುಕೊಳ್ಳಲು ಆರಂಭಿಸಿದ್ದರಿಂದ 2016ರಲ್ಲಿ ಅದನ್ನು ರದ್ದು ಮಾಡಲಾಯಿತು. ಅ.8ರಂದು ದಸರೆಯ ದಿನದಂದು ಫ್ರಾನ್ಸ್‌ನಲ್ಲಿ ರಫೇಲ್ ಯುದ್ಧ ವಿಮಾನವನ್ನು ಭಾರತಕ್ಕೆ ಹಸ್ತಾಂತರ ಮಾಡಲಾಗುತ್ತದೆ. ಅವುಗಳ ನಿರ್ವಹಣೆ ಮತ್ತು ಬಳಕೆಗಾಗಿ 24
ಮಂದಿ ಐಎಎಫ್ನ ಪೈಲಟ್‌ಗಳ ತಂಡವನ್ನು ಆಯ್ಕೆ ಮಾಡಲಾಗಿದೆ. ಹೊಸ ಮಾದರಿಯ ಯುದ್ಧ ವಿಮಾನಗಳ ಬಳಕೆಗೆ 24 ಮಂದಿ ಪೈಲಟ್‌ಗಳಿಗೆ ಸೂಕ್ತ ತರಬೇತಿಯನ್ನೂ ನೀಡಲಾಗುತ್ತದೆ.
ಅ.8ರಂದು ಫ್ರಾನ್ಸ್‌ಗೆ ರಾಜನಾಥ್
ಮುಂದಿನ ತಿಂಗಳ ಎಂಟರಂದು ಫ್ರಾನ್ಸ್‌ನಲ್ಲಿ ಮೊದಲ ಹಂತದಲ್ಲಿ ರಫೇಲ್ ಯುದ್ಧ ವಿಮಾನಗಳ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ. ಅದರಲ್ಲಿ ಭಾಗವಹಿಸುವ ನಿಟ್ಟಿನಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪ್ಯಾರಿಸ್‌ಗೆ ತೆರಳಲಿದ್ದಾರೆ. ಐಎಎಫ್ ಮುಖ್ಯಸ್ಥ ಬಿ.ಎಸ್.ಧನೋವಾ ಸೆ.19-20ರ ಅವಧಿಯಲ್ಲಿ ತೆರಳಬೇಕಾಗಿತ್ತಾದರೂ, ಇದೀಗ ಅವರು ರಕ್ಷಣಾ ಸಚಿವರ ಪ್ರವಾಸದ ವೇಳೆಯಲ್ಲಿಯೇ ಫ್ರಾನ್ಸ್‌ಗೆ ತೆರಳಲಿದ್ದಾರೆ. ಕೆಲವೊಂದು ದಾಖಲೆಗಳಿಗೆ ಸಹಿ ಹಾಕುವ ನಿಟ್ಟಿನಲ್ಲಿ ಧನೋವಾ ಮತ್ತು ಹಿರಿಯ ಅಧಿಕಾರಿಗಳು ತೆರಳಲಿದ್ದಾರೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.