ಕೇವಲ 10 ನಿಮಿಷದಲ್ಲಿ 12 ಕೋಟಿ ದೋಚಿದ ದರೋಡೆಕೋರರು: ಇತಿಹಾಸದಲ್ಲೇ ಅತೀ ದೊಡ್ಡ ಪ್ರಕರಣ !
Team Udayavani, Nov 19, 2020, 8:33 PM IST
ಒಡಿಶಾ: ಇಲ್ಲಿನ ಕಟಕ್ ಪಟ್ಟಣದ ಐಐಎಫ್ಎಲ್ ಫಿನಾನ್ಷಿಯಲ್ ಲಿಮಿಟೆಡ್ ಬ್ಯಾಂಕೇತರ ಹಣಕಾಸು ಸಂಸ್ಥೆಯಿಂದ ಕೇವಲ 10 ನಿಮಿಷದಲ್ಲಿ ಬರೋಬ್ಬರಿ 12ಕೋಟಿ ಮೌಲ್ಯದ ಚಿನ್ನ ಹಾಗೂ ಹಣ ದರೋಡೆ ಮಾಡಿರುವ ಘಟನೆ ನಡೆದಿದೆ. ಇದು ಒಡಿಶಾದ ಇತಿಹಾಸದಲ್ಲೆ ನಡೆದ ಅತಿ ದೊಡ್ಡ ದರೋಡೆ ಪ್ರಕರಣ ಎನಿಸಿಕೊಂಡಿದೆ.
ನಾಲ್ಕು ಜನ ಸಶಸ್ತ್ರಧಾರಿಗಳು ಹೆಲ್ಮೆಟ್ ಧರಿಸಿ ಐಐಎಫ್ ಎಲ್ ಫಿನಾನ್ಷಿಯಲ್ ಲಿಮಿಟೆಡ್‌ನ ನಾಯಸರಕ್ ಶಾಖೆ ಮೇಲೆ ದಾಳಿ ನಡೆಸಿದ್ದಾರೆ. ಶಾಖೆಯ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಹೆದರಿಸುವ ಮೂಲಕ ಶಾಖೆಯೊಳಗೆ ನುಗ್ಗಿದ್ದಾರೆ. ಹಿಂದಿ ಹಾಗೂ ಒಡಿಸ್ಸಿ ಭಾಷೆಯಲ್ಲಿ ಸಂವಹನ ನಡೆಸುತ್ತಿದ್ದ ಇವರು ಸಂಸ್ಥೆಯ ಮ್ಯಾನೇಜರ್ ಅನ್ನೂ ಒಳಗೊಂಡಂತೆ ಇನ್ನುಳಿದ ಸಿಬ್ಬಂದಿಗಳನ್ನು ಸುತ್ತುವರೆದಿದ್ದಾರೆ, ಬಳಿಕ ಅವರಿಂದ ಲಾಕರ್ ಕೀಯನ್ನು ಕಿತ್ತುಕೊಂಡಿದ್ದಾರೆ. ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಐಐಎಫ್ಎಲ್ ಫಿನಾನ್ಷಿಯಲ್ ಲಿಮಿಟೆಡ್ ಒಂದು ಬ್ಯಾಂಕೇತರ ಹಣಕಾಸು ಸಂಸ್ಥೆಯಾಗಿದ್ದು ಬಂಗಾರದ ಮೇಲೆ ಮತ್ತು ವ್ಯವಹಾರಗಳಿಗಾಗಿ ಸಾಲ ನೀಡುವ ಸಂಸ್ಥೆಯಾಗಿದೆ. ಇಲ್ಲಿಗೆ ದಾಳಿ ನಡೆಸಿದ ದರೋಡೆಕೋರರು, ಕೇವಲ ಹತ್ತು ನಿಮಿಷದ ಅವಧಿಯಲ್ಲಿ 12 ಕೋಟಿ ದೋಚಿದ್ದಾರೆ. ಒಂದೆರಡು ಚಿನ್ನದ ಪೊಟ್ಟಣ ಹೊರತುಪಡಿಸಿ ಇನ್ನುಳಿದ ಸುಮಾರು 12 ಕೋಟಿ ಮೌಲ್ಯದ ಚಿನ್ನ ಹಾಗೂ ಹಣ ದರೋಡೆ ಮಾಡಿದ್ದಾರೆ. ಇವರು ದರೋಡೆ ಮಾಡುತ್ತಿರುವ ಸಮಯದಲ್ಲಿ ಶಾಖೆಯ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ ಎಂದು IIFL ಶಾಖೆ ಕಾರ್ಯನಿರ್ವಾಹಕ ಸತ್ಯ ಪ್ರಧಾನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ಯೂಟ್ಯೂಬರ್ ವಿರುದ್ಧ 500 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಅಕ್ಷಯ್ ಕುಮಾರ್
ಸದ್ಯ ದರೋಡೆಕೋರರನ್ನು ಪತ್ತೆ ಹಚ್ಚಲು ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿದ್ದು, ನಗರದ ಗಡಿಭಾಗವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಪಕ್ಕದ ಜಗತ್ಸಿಂಗ್ ಪುರ, ಜಜ್‌ಪುರ, ಧೆಂಕನಾಲ್ ಮತ್ತು ಕೇಂದ್ರಪಾಲ್ ಪೊಲೀಸರಿಗೆ ಮಾಹಿತಿ ನೀಡಲಾಗಿದೆ ಎಂದು ಕಟಕ್ ಪೊಲೀಸ್ ಉಪ ಆಯುಕ್ತ ಪ್ರತೀಕ್‌ಸಿಂಗ್ ತಿಳಿಸಿದ್ದಾರೆ.
ನವೀನ್ ಪಟ್ನಾಯಕ್ ಸರ್ಕಾರದ ವಿಧಾನಸಭಾ ಚಳಿಗಾಲದ ಅಧಿವೇಶನಕ್ಕಿಂತ ಒಂದು ದಿನ ಮುಂಚೆ ಈ ಘಟನೆ ನಡೆದಿದ್ದು ಸರ್ಕಾರಕ್ಕೆ ಮುಖಭಂಗವಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ನಗರದಲ್ಲಿ ಈಗಾಗಲೇ ಸಶಸ್ತ್ರಧಾರಿಗಳಿಂದ ಹಲವು ಬ್ಯಾಂಕ್ ಮತ್ತು ಎಟಿಎಂ ದರೋಡೆಗಳು ನಡೆದಿದ್ದು ,ಈ ಹಿನ್ನೆಲೆಯಲ್ಲಿ ಕಳೆದ ತಿಂಗಳಷ್ಟೆ ಪೊಲೀಸ್ ಕಮೀಷನರ್ ಇಲ್ಲಿನ ಎಲ್ಲಾ ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಿಗೆ ತಮ್ಮ ತಮ್ಮ ಸಂಸ್ಥೆಗಳ ಶಾಖೆ ಹಾಗೂ ಎಟಿಎಂಗಳಿಗೆ ಸಂಭಂದಿಸಿದ ರಕ್ಷಣಾ ವ್ಯವಸ್ಥೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ:ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರಿಗೆ ಕೋವಿಡ್ ಪಾಸಿಟಿವ್
ಈ ವರ್ಷದ ಫೆಬ್ರವರಿಯಲ್ಲಿ ಐಐಎಫ್‌ಎಲ್‌ನ ಶಾಖೆಯೊಂದರಲ್ಲಿ ಇದೇ ರೀತಿಯ ದರೋಡೆ ನಡೆದಿತ್ತು ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…