ಶತಾಬ್ದಿಗೆ ವಿದಾಯ; ಜೂ.18ರೊಳಗೆ ವಿಶ್ವ ದರ್ಜೆಯ ಮೊದಲ ರೈಲು
Team Udayavani, Jan 23, 2018, 11:24 AM IST
ಹೊಸದಿಲ್ಲಿ : ಭಾರತೀಯ ರೈಲ್ವೇ ಇದೇ ವರ್ಷ ಜೂನ್ 18ರಿಂದ ದೇಶದಲ್ಲಿ ವಿಶ್ವ ದರ್ಜೆಯ ರೈಲೊಂದನ್ನು ಪರಿಚಯಿಸಲಿದೆ. ಅಂತೆಯೇ 2020ರೊಳಗೆ ಇನ್ನೊಂದು ವಿಶ್ವ ದರ್ಜೆ ರೈಲನ್ನು ಪರಿಚಯಿಸಲಿದೆ.
ಈ ಎರಡು ವಿಶ್ವ ದರ್ಜೆ ರೈಲುಗಳಿಂದ ಪ್ರಯಾಣಾವಧಿಯು ಶೇ.20ರಷ್ಟು ಕಡಿಮೆಯಾಗಲಿದೆ. ಜತೆಗೆ ಪ್ರಯಾಣಿಕರಿಗೆ ವಿಶಿಷ್ಟ ಸುಖ ಪ್ರಯಾಣದ ಅನುಭವವೂ ಆಗಲಿದೆ.
ವರದಿಗಳ ಪ್ರಕಾರ ಈ ಎರಡು ರೈಲುಗಳು ಟ್ರೈನ್ ನಂಬರ್ 18 ಮತ್ತು ಟ್ರೈನ್ ನಂಬರ್ 20 ಎಂದು ಕರೆಯಲ್ಪಡಲಿವೆ. ಇವುಗಳು ಅನುಕ್ರಮವಾಇ ಈಗ ಸೇವೆಯಲ್ಲಿರುವ ಶತಾಬ್ದಿ ಮತ್ತು ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಸ್ಥಾನವನ್ನು ಪಡೆದುಕೊಳ್ಳಲಿವೆ.
ವಿಶ್ವ ದರ್ಜೆಯ ಈ ಎರಡು ರೈಲುಗಳನ್ನು ರೈಲ್ವೆಯ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ವಿನ್ಯಾಸಗೊಳಿಸಿ ನಿರ್ಮಿಸಲಾಗುತ್ತಿದೆ. ಇದೇ ವರ್ಷ ಜೂನ್ ಒಳಗಾಗಿ 16 ಕೋಚ್‌ಗಳ ಮೊದಲ ರೈಲನ್ನು ಹೊರ ತರುವ ನಿರೀಕ್ಷೆ ಐಸಿಎಫ್ ಗೆ ಇದೆ.
ಟ್ರೈನ್ ನಂಬರ್ 18ರ ಹೊರಮೈ ಸಂಪೂರ್ಣವಾಗಿ ಉಕ್ಕಿನಿಂದ ನಿರ್ಮಾಣವಾಗಿದೆ. ಟ್ರೈನ್ ನಂಬರ್ 20ರ ಹೊರಮೈ ಸಂಪೂರ್ಣವಾಗಿ ಅಲ್ಯುಮಿನಿಯಂ ನದ್ದಾಗಿರುತ್ತದೆ.
ವಿಶ್ವ ದರ್ಜೆಯ ಈ ರೈಲುಗಳು ಗಂಟೆಗೆ 160 ಕಿ.ಮೀ. ವೇಗದಲ್ಲಿ ಓಡುವ ಸಾಮರ್ಥ್ಯ ಹೊಂದಿದೆ. ಇವುಗಳ ಏರೋಡೈನಾಮಿಕ್ ಮೂಗು ಕಡಿಮೆ ವಾಯು ಒತ್ತಡಕ್ಕೆ ಕಾರಣವಾಗಲಿದೆ.
ಈಚಗೆ ನಡೆಸಲಾದ ಅಧ್ಯಯನದ ಪ್ರಕಾರ 1,440 ಕಿ.ಮೀ. ದೂರದ ದಿಲ್ಲಿ – ಹೌರಾ ಮಾರ್ಗವನ್ನು ಕ್ರಮಿಸುವ ಅವಧಿಯು ಈ ರೈಲುಗಳಿಗೆ 180 ನಿಮಿಷಗಳನ್ನು ಕಡಿಮೆ ಇರುತ್ತದೆ. ಶತಾಬ್ದಿ ಮತ್ತು ರಾಜಧಾನಿ ರೈಲುಗಳು ಗಂಟೆಗೆ 150 ಕಿ.ಮೀ.ಗಳ ಗರಿಷ್ಠ ವೇಗದಲ್ಲಿ ಓಡಬಲ್ಲವಾದರೂ ಅವುಗಳ ಸರಾಸರಿ ವೇಗ ಗಂಟೆಗೆ 90 ಕಿ.ಮೀ. ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು
Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.