ಬೆಂಗಳೂರಿನ ‘ಹಳ್ಳಿ ಲ್ಯಾಬ್’ ಗೂಗಲ್ ಜೊತೆ ವಿಲೀನ
Team Udayavani, Jul 13, 2017, 3:50 AM IST
ನವದೆಹಲಿ: ಇಂಟರ್ನೆಟ್ ದೈತ್ಯ ಗೂಗಲ್ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ಕಂಪನಿಯೊಂದನ್ನು ಸ್ವಾಧೀನಪಡಿಸಿಕೊಂಡಿದೆ. ‘ಆರ್ಟಿಫಿಶಿಯಲ್ ಇಂಟೆಲಿಜೆನ್ಸ್’ ಮತ್ತು ‘ಮಶಿನ್ ಲರ್ನಿಂಗ್’ ಮೇಲೆ ಕೆಲಸ ಮಾಡುವ ‘ಹಳ್ಳಿ ಲ್ಯಾಬ್’ ಎಂಬ ಈ ಕಂಪನಿ ಆರಂಭವಾಗಿ ಕೇವಲ 4 ತಿಂಗಳಷ್ಟೇ ಕಳೆದಿದೆ. ‘ನಾವು ಗೂಗಲ್ ನೆಕ್ಸ್ಟ್ ಬಿಲಿಯನ್ ಯೂಸರ್ ಟೀಂ ಅನ್ನು ಸೇರುತ್ತಿದ್ದೇವೆ. ಪ್ರಾದೇಶಿಕ ಭಾಷೆ ಗುರುತು ಮಾಡುವ ಸೇವೆ ಕ್ಷೇತ್ರದಲ್ಲಿ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸಲು ಗೂಗಲ್ ಎದುರು ನೋಡುತ್ತಿತ್ತು. ನಾವು ಗೂಗಲ್ ಜೊತೆ ಸೇರಿ ಈ ಯೋಜನೆ ವಿಸ್ತರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ’ ಎಂದು ಹಳ್ಳಿ ಲ್ಯಾಬ್ ಸದಸ್ಯ ಪಂಕಜ್ ಗುಪ್ತಾ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೂಗಲ್ ವಕ್ತಾರ ಬೆಂಗಳೂರಿನ ಸಂಸ್ಥೆ ನಮ್ಮ ಜತೆ ವಿಲೀನವಾಗಿರುವುದು ಸಂತಸ ತಂದಿದೆ. ಭಾರತವನ್ನು ಕೇಂದ್ರೀಕರಿಸಿ ಆನ್ಲೈನ್ ಬಳಕೆ ಅನುಕೂಲವಾಗುವಂಥ ಉತ್ಪನ್ನಗಳನ್ನು ಸಿದ್ಧಪಡಿಸಲಿದ್ದೇವೆ ಎಂದರು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಕೆಲಸ ಮಾಡುವ 64 ಕಂಪನಿಗಳ ವಿಲೀನ ಹಾಲಿ ಸಾಲಿನಲ್ಲಿ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Central Govt: ಸಂಸದೀಯ ಸಮಿತಿ ಪರೀಕ್ಷಿಸಲಿದೆ ಲ್ಯಾಟರಲ್ ಎಂಟ್ರಿ ನೇಮಕಾತಿ
Kochi: ಲೈಂಗಿಕ ಕಿರುಕುಳ ಕೇಸು ವಾಪಸ್ ಪಡೆಯಲ್ಲ ಎಂದ ಮಲಯಾಳಿ ನಟಿ
Chhattisgarh: ಐಇಡಿ ಸ್ಫೋ*ಟ: ಪೊಲೀಸ್ ಸಿಬ್ಬಂದಿಗೆ ಗಾಯ
Maharashtra Elections: 21 ಮಹಿಳೆಯರು ಆಯ್ಕೆ, ವಿಪಕ್ಷದಿಂದ ಒಬ್ಬರೇ!
Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.