ಉ.ಪ್ರ: 37 IAS ಅಧಿಕಾರಿಗಳು ವರ್ಗ, ವಿವಾದಿತ ಗೋರಖ್‌ಪುರ DMಗೆ ಭಡ್ತಿ
Team Udayavani, Mar 17, 2018, 5:50 PM IST
ಲಕ್ನೋ : ಅತ್ಯಂತ ಪ್ರತಿಷ್ಠೆಯ ಗೋರಖ್‌ಪುರ, ಫೂಲ್‌ಪುರ ಸಂಸದೀಯ ಉಪ ಚುನಾವಣೆಗಳನ್ನು ಸೋತು ತೀವ್ರ ಮುಖಭಂಗಕ್ಕೆ ಗುರಿಯಾಗಿರುವ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರಕಾರ 16 ಜಿಲ್ಲಾ ಮ್ಯಾಜಿಸ್ಟ್ರೇಟರುಗಳು ಸೇರಿದಂತೆ ಒಟ್ಟು 37 ಐಎಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಆದೇಶ ಹೊರಡಿಸಿದೆ.
ವಿಶೇಷವೆಂದರೆ ಮತ ಎಣಿಕೆ ಕೇಂದ್ರದೊಳಗೆ ಪತ್ರಕರ್ತರನ್ನು ಬರದಂತೆ ತಡೆಯುವ ಮೂಲಕ ವಿವಾದಕ್ಕೆ ಗುರಿಯಾದ ಗೋರಖ್‌ಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೀವ್ ರೌತೇಲ ಅವರಿಗೂ ವರ್ಗಾವಣೆಯಾಗಿದ್ದು ಅವರಿಗೆ ದೇವಿಪಟನ್ ಡಿವಿಜನಲ್ ಕಮಿಷನರ್ ಆಗಿ ಭಡ್ತಿಯನ್ನೂ ನೀಡಲಾಗಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ತೆರವಾಗಿದ್ದ ಗೋರಖ್‌ಪುರ ಸಂಸದೀಯ ಕ್ಷೇತ್ರವನ್ನು ಹಲವು ದಶಕಗಳ ಬಳಿಕ ಬಿಜೆಪಿ ಕೈಯಿಂದ ಸಮಾಜವಾದಿ ಪಕ್ಷ ಕಿತ್ತುಕೊಂಡಿರುವುದು ಬಿಜೆಪಿಗೆ ಭಾರೀ ಮುಖಭಂಗವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.