ಗೋರಖ್‌ಪುರ: ಆಸ್ಪತ್ರೆಯ ಅರಳಿ ಮರ ಆಪದ್ಬಾಂಧವ!
Team Udayavani, Aug 17, 2017, 6:45 AM IST
ಗೋರಖ್‌ಪುರ: “ವೈದ್ಯೋ ನಾರಾಯಣೋ ಹರಿ’ ಎಂದು ನಂಬಿದವರ ಎದುರು ಸಾಕ್ಷಾತ್ ಡಾಕ್ಟರೇ ಪ್ರತ್ಯಕ್ಷನಾಗಿ, “ನಮ್ಮ ಪ್ರಯತ್ನ ನಾವು ಮಾಡಿದ್ದೇವೆ. ಇನ್ನೇನಿದ್ರು ಆ ದೇವರೇ ಕಾಪಾಡಬೇಕು’ ಎನ್ನುತ್ತಾ ಆಸ್ಪತ್ರೆಯ ಛಾವಣಿಯತ್ತ ಬೆರಳು ಮಾಡಿ ತೋರಿಸಿದಾಗಲೇ ಎಷ್ಟೋ ಜನರಿಗೆ, ಈ ವೈದ್ಯನಿಗಿಂತಲೂ ದೊಡ್ಡ ದೇವರೊಬ್ಬ ಮೇಲಿದ್ದಾನೆ ಎಂಬುದು ನೆನಪಾಗುತ್ತದೆ. ಹಾಗೆ ನೆನಪಾದಾಗ, ರೋಗಿಯ ಕಾಪಾಡು ತಂದೆ/ತಾಯಿ ಎಂದು ವ್ರತ, ಪೂಜೆ, ಅರ್ಚನೆ, ಆರತಿ, ನೈವೇದ್ಯಾದಿಗಳನ್ನು ಮಾಡುವುದು ಸಹಜ.
ಧಾರ್ಮಿಕ ನಂಬಿಕೆಗಳೇ ಸಮಾಜದ ತಳಹದಿ ಯಾಗಿರುವ ಭಾರತದ ಹಲವು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ದೇವಾಲಯಗಳಿರುವುದು ಗೊತ್ತೇ ಇದೆ. ಅಲ್ಲಿಗೆ ಬರುವ ರೋಗಿಗಳ ಕಾಯಿಲೆ ಬೇಗ ವಾಸಿಯಾಗಲೆಂದು ಕುಟುಂಬದವರು ಆ ಆಲಯಗಳಲ್ಲಿ ಹರಕೆ ಹೊರುತ್ತಾರೆ. ಹಲವು ಆಸ್ಪತ್ರೆಗಳಲ್ಲಿ ದೇವಾಲಯಗಳಿರುವಂತೆಯೇ ಗೋರಖ್‌ಪುರದ ಬಾಬಾ ರಾಘವ ದಾಸ್ ವೈದ್ಯ ಕಾಲೇಜಿನಲ್ಲಿ ಒಂದು ಅರಳಿ ಮರವಿದೆ !
ವಾರದಿಂದೀಚೆಗೆ 70 ಮಕ್ಕಳ ಸಾವಿಗೆ ವೇದಿಕೆಯಾಗುವ ಮೂಲಕ ದೇಶಾದ್ಯಂತ ಹೆಚ್ಚು ಸುದ್ದಿಯಾಗಿರುವ ಗೋರಖ್‌ಪುರದ ಬಿಆರ್‌ಡಿ ವೈದ್ಯ ಕಾಲೇಜು ಈಗ ಅರಳಿ ಮರ (ಅಶ್ವತ್ಥ ವೃಕ್ಷ)ದ ಕಾರಣದಿಂದಾಗಿ ದೇಶದ ಗಮನ ಸೆಳೆಯುತ್ತಿದೆ. ಆಮ್ಲಜನಕದ ಕೊರತೆಯಿಂದ ಮಕ್ಕಳನ್ನು ಕಳೆದುಕೊಂಡು ನೊಂದಿರುವ ಕುಟುಂಬದವರು ಹಾಗೂ ಪ್ರಸ್ತುತ ಆಸ್ಪತ್ರೆಯಲ್ಲಿ ಮಕ್ಕಳು, ಸಂಬಂಧಿಗಳನ್ನು ದಾಖಲಿಸಿರುವವರು ಈ ಅರಳಿ ಮರದ ಮೊರೆ ಹೋಗುತ್ತಿದ್ದಾರೆ. ತಮ್ಮವರನ್ನು ಉಳಿಸಿ ಕೊಡು ಎಂದು ಅಶ್ವತ್ಥ ವೃಕ್ಷದ ಎದುರು ಅಂಗಲಾಚುತ್ತಿದ್ದಾರೆ.
ಅರಳಿ ಮರದ ಮಹಿಮೆ: ಈಗ ರೋಗಿಗಳ ಪಾಲಿಗೆ ಆಪದಾºಂಧವನಾಗಿರುವ ಅರಳಿ ಮರ ಇರುವುದು ಬಿಆರ್‌ಡಿ ವೈದ್ಯ ಕಾಲೇಜಿನ ಆವರಣದಲ್ಲಿರುವ ಕ್ಯಾಂಟೀನ್ ಎದುರು. ಇಲ್ಲಿ ಯಾರೂ ಸಸಿ ತಂದು ನೆಟ್ಟು ಈ ಮರವನ್ನು ಬೆಳೆಸಿಲ್ಲ. ಬದಲಿಗೆ ವರ್ಷದ ಹಿಂದೆ ತನ್ನಷ್ಟಕ್ಕೇ ಹುಟ್ಟಿದ ಅರಳಿ ಸಸಿ, ತಂತಾನೆ ಬೆಳೆಯು ತ್ತಿರುವುದೇ ವಿಸ್ಮಯ. ಮೊದಲೇ ದೇಶದ ಧಾರ್ಮಿಕ ವಲಯದಲ್ಲಿ ಅರಳಿ ಮರಕ್ಕೆ ಶ್ರೇಷ್ಠ ಸ್ಥಾನವಿದೆ. ಹೀಗಿರುವಾಗ ತಂತಾನೆ ಹುಟ್ಟಿ, ಬೆಳೆದಿರುವ ಈ ಮರ ರೋಗಿಗಳನ್ನು ಗುಣಪಡಿ ಸುವ ಅಗೋಚರ ಶಕ್ತಿಯಾಗಿ ಪರಿಣಮಿಸಿದೆ.
ಗುಣವಾದ ನಿದರ್ಶನಗಳಿವೆ: ಆಸ್ಪತ್ರೆಗೆ ಬರುವವರು ತಮ್ಮವರ ಆರೋಗ್ಯ ಸುಧಾರಿಸ ಲೆಂದು ಅರಳಿ ಮರದ ಮೊರೆ ಹೋಗುವುದು ಒಂದು ಮೂಢ ನಂಬಿಕೆ ಎಂದೆನಿಸಿದರೂ ಹೀಗೆ ಈ ವೃಕ್ಷದ ಮೊರೆ ಹೋದ ಹಲವರಿಗೆ ಪ್ರತಿಫಲ ಸಿಕ್ಕಿದೆ ಎನ್ನುತ್ತಾರೆ ಸ್ಥಳೀಯರು. “ನನ್ನ 5 ವರ್ಷದ ಸೊಸೆಗೆ ಮೆದುಳಿನ ಉರಿಯೂತದ ಲಕ್ಷಣಗಳಿದ್ದವು. 18 ದಿನ ಆಸ್ಪತ್ರೆಯಲ್ಲಿದ್ದರೂ ಪ್ರಯೋಜನ ವಾಗಿರಲಿಲ್ಲ. ಆಗ ನಾನು ಅರಳಿ ಮರದ ಮೊರೆ ಹೋದೆ. ಅಚ್ಚರಿ ಎಂಬಂತೆ ಒಂದೆರಡು ದಿನದಲ್ಲೇ ಸೊಸೆ ಸಂಪೂರ್ಣ ಗುಣವಾದಳು. ಆಕೆಗೆ ಉರಿಯೂತವಿಲ್ಲ ಎಂದು ವೈದ್ಯರು ತಿಳಿಸಿದರು’ ಎನ್ನುತ್ತಾರೆ ಪ್ರಭು ಕುಮಾರ್.
ಜನಿವಾರ, ಮರದ ಪಾದುಕೆ: ಇಲ್ಲಿ ಹರಕೆ ಹೊರುವವರು ಅರಳಿಮರಕ್ಕೆ ಜನಿವಾರ ದಾರ ಹಾಗೂ ಮರದ ಪಾದುಕೆ ಅರ್ಪಿಸಿ ಹರಕೆ ತೀರಿಸುತ್ತಾರೆ. ಹೀಗಾಗಿ ವರ್ಷದಿಂದೀಚೆಗೆ 5000ದಷ್ಟು ಜನಿವಾರ ದಾರದ ಉಂಡೆಗಳು ಹಾಗೂ ಪಾದುಕೆಗಳು ಸಲ್ಲಿಕೆಯಾಗಿವೆ. ಇದರೊಂದಿಗೆ ಊದುಬತ್ತಿ, ಕರ್ಪೂರ ಅರ್ಪಿಸುವ ಭಕ್ತರು, ದೀಪೋತ್ಸವವನ್ನೂ ನಡೆಸುತ್ತಾರೆ ಎಂದು ವೈದ್ಯ ಕಾಲೇಜಿನ ಕ್ಯಾಂಟೀನ್ ಸಿಬಂದಿ ಹೇಳಿದ್ದಾರೆ.
ಆಕ್ಸಿಜನ್ ಕೊರತೆ ಕಾರಣವಲ್ಲ: ಗೋರಖ್‌ಪುರದ ಆಸ್ಪತ್ರೆಗೆ ಭೇಟಿ ನೀಡಿದ್ದ ಕೇಂದ್ರದ ತಂಡ ಕ್ಲೀನ್‌ಚಿಟ್ ನೀಡಿದೆ. 72 ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಲ್ಲ ಎಂದೂ ಹೇಳಿದೆ. ಅಲ್ಲದೆ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ, ಈ ತಿಂಗಳ ಮಕ್ಕಳ ಸಾವು ಕಡಿಮೆ ಇದೆ ಎಂಬ ಆಘಾತಕಾರಿ ಮಾಹಿತಿಯನ್ನೂ ಈ ತಂಡ ನೀಡಿದೆ. ಈ ನಡುವೆ ಬಿಹಾರದ ವ್ಯಕ್ತಿಯೊಬ್ಬರು ತಮ್ಮ ಮಗುವಿನ ಸಾವಿಗೆ ಆಸ್ಪತ್ರೆ ಮತ್ತು ಉತ್ತರ ಪ್ರದೇಶ ಸರಕಾರದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆರೋಗ್ಯ ಸಚಿವರು ಮತ್ತು ಆಸ್ಪತ್ರೆ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa: ಕ್ಯಾಲಂಗುಟ್ ಬೀಚ್‌ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Uttar Pradesh: 6 ಪುರುಷರ ವರಿಸಿ ವಂಚಿಸಿದ ಯುವತಿಯ ಗ್ಯಾಂಗ್ ಜೈಲಿಗೆ
Road Project: ಶಿರಾಡಿ ಘಾಟ್ ಸುರಂಗ ಯೋಜನೆಗೆ ಡಿಪಿಆರ್ ರಚಿಸಿ: ಕೇಂದ್ರ ಸೂಚನೆ
Hosur ವಿಮಾನ ನಿಲ್ದಾಣಕ್ಕೆ 2 ಸ್ಥಳ ನಿಗದಿಪಡಿಸಿದ ತಮಿಳುನಾಡು
GST: ಖರೀದಿ, ಮಾರಾಟ ದರದ ವ್ಯತ್ಯಾಸಕ್ಕಷ್ಟೇ 18% ಜಿಎಸ್‌ಟಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
Max Movie: ಸಖತ್ ರೆಸ್ಪಾನ್ಸ್ ಪಡೆದ ಕಿಚ್ಚನ ʼಮ್ಯಾಕ್ಸ್ʼ ಮೊದಲ ದಿನ ಗಳಿಸಿದ್ದೆಷ್ಟು?
Updated: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.