ಮಹಾರಾಷ್ಟ್ರದಲ್ಲಿ ವಿವಿಯಂತೆ ಕಾರ್ಯ ನಿರ್ವಹಿಸುತ್ತಿರುವ ಗೋಶಾಲೆ: ಪ್ರಭು ಚೌಹಾಣ್
Team Udayavani, Dec 29, 2021, 10:45 PM IST
ಮಹಾರಾಷ್ಟ್ರ : ಮಹಾರಾಷ್ಟ್ರದ ಕೇಶವ ಸೃಷ್ಟಿ ಗೋಶಾಲೆಗೆ ಬುಧವಾರ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಭೇಟಿ ನೀಡಿ ಅಧ್ಯಯನ ನಡೆಸಿದರು. ಸುಮಾರು 40 ವರ್ಷಗಳಿಂದ ಕೇಶವ ಶಾಲೆ ನಡೆಯುತ್ತಿದ್ದು ಗೋಉತ್ಪನ್ನ ತಯಾರಿಕೆಗೆ ಇಲ್ಲಿ ಹೆಚ್ಚು ಒತ್ತು ನೀಡಲಾಗಿದೆ ಎಂದು ಸಚಿವರು ಹೇಳಿದರು.
ಸರ್ಕಾರಿ, ಖಾಸಗಿ, ಹವ್ಯಾಸಿ ಎಲ್ಲರಿಗೂ ಇಲ್ಲಿ ತರಬೇತಿ ನೀಡಲಾಗುತ್ತದೆ. ಸಾವಯವ ಕೃಷಿಗೆ ಪೂರಕವಾಗುವಂತೆ ಸಾವಯವ ಗೊಬ್ಬರದ ಬಳಕೆ, ಕೀಟನಾಶಕಗಳ ಬಳಕೆ ಇಲ್ಲದೇನೆ ಕೇವಲ ಗೋಮೂತ್ರದಿಂದ ತಯಾರಾದ ಜೀವಾಮೃತಗಳ ಬಳಕೆ ಮೂಲಕ ಕೃಷಿಗೆ ಆದ್ಯತೆ ನೀಡುತ್ತಿರುವುದು ಇಲ್ಲಿನ ವಿಶೇಷತೆ. ಅಲ್ಲದೆ ನೀರಿನ ಸದ್ಬಳಕೆ, ನೀರಿನ ಸಂರಕ್ಷಣೆ, ಅಂತರ್ಜಲ ಹೆಚ್ಚಿಸಲು ತೆಗೆದುಕೊಂಡ ಕ್ರಮಗಳು ವಿಶೇಷವಾಗಿವೆ. ಅಲ್ಲದೆ ಕೇಶವ ಸೃಷ್ಟಿ ಗೋಶಾಲೆ ವಿಶ್ವವಿದ್ಯಾಲಯದಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ಸಚಿವರು ಬಣ್ಣಿಸಿದ್ದಾರೆ.
ಕೇಶವ ಸೃಷ್ಟಿ ಗೋಶಾಲೆಯಲ್ಲಿ ವನೌಷಧಿ, ಸಾವಯವ ಆಧಾರಿತ ಕೃಷಿ, ವೃದ್ಧಾಶ್ರಮ ಹಾಗೆ ನಿವಾಸಿ ಶಾಲೆಗಳು ಈ ಪರಿಸರದಲ್ಲಿ ನಡೆಯುತ್ತಿವೆ. ಇಲ್ಲಿ ವಿಶೇಷವಾಗಿ ದೇಶೀಯ ಗೋವುಗಳನ್ನು ಸಾಕಲಾಗಿದ್ದು ಗೀರ್ ತಳಿಯ 250ಕ್ಕೂ ಹೆಚ್ಚು ಗೋವುಗಳನ್ನು ಇಲ್ಲಿ ಪಾಲನೆ ಮಾಡಲಾಗುತ್ತಿದ್ದು ನಿತ್ಯ 2 ಟನ್ ಗೊಬ್ಬರ ಬಳಸಿ 30 ಕೆಜಿ ಬಯೋಗ್ಯಾಸ್ ತಯಾರು ಮಾಡಲಾಗುತ್ತಿದೆ. ಈ ಬಯೋಗ್ಯಾಸ್ ಕೇಶವ ಸೃಷ್ಟಿ ಗೋಶಾಲೆಗೆ ಬೇಕಾಗುವಷ್ಟು ಪ್ರಮಾಣದಲ್ಲಿ ಉತ್ಪಾದನೆ ಮಾಡಿಕೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದನ್ನೂ ಓದಿ:ರಾತ್ರಿ ಕರ್ಫ್ಯೂ ಜಾರಿ: ಪೊಲೀಸ್ ಆಯುಕ್ತ ರವಿಕುಮಾರ ಆದೇಶ
ಗ್ಯಾಸ್ ಉತ್ಪಾದನೆಯಾದ ನಂತರ ಉಳಿಯುವಂತಹ ಸ್ಲೇರಿ ಬಳಸಿಕೊಂಡು ಅನೇಕ ಉಪ ಉತ್ಪನ್ನಗಳನ್ನು ತಯಾರಿ ಮಾಡಲಾಗುತ್ತದೆ .ಗೋಮಯ ಮತ್ತು ಗೋಮೂತ್ರದಿಂದ 20ಕ್ಕೂ ಹೆಚ್ಚು ಉತ್ಪನ್ನಗಳನ್ನು ಕೇಶವ ಸೃಷ್ಟಿ ಗೋಶಾಲೆಯಲ್ಲಿ ತಯಾರು ಮಾಡಲಾಗುತ್ತಿದೆ. ಇಲ್ಲಿ ತಯಾರಾದ ಉತ್ಪನ್ನಗಳು ಅತ್ಯಂತ ಗುಣಮಟ್ಟದಿಂದ ಕೂಡಿದ್ದು ಇದಕ್ಕೆ ಬೇಕಾದ ಮಾರುಕಟ್ಟೆಯನ್ನು ಸಹ ಗೋಶಾಲೆಯವರು ಸಿದ್ಧಪಡಿಸಿಕೊಂಡಿದ್ದಾರೆ. ಇಲ್ಲಿನ ಅಧಿಕಾರಿಗಳ ಅನುಭವದಂತೆ ಗೋವುಗಳನ್ನು ಅದರ ಹಾಲಿಗೆ ಮಾತ್ರ ಬಳಸಿಕೊಳ್ಳದೆ, ಗೋಮಯ, ಗೋಮೂತ್ರ ಬಳಸಿಕೊಂಡು ಗೋಶಾಲೆಗಳನ್ನು ಹೇಗೆ ಸ್ವಾವಲಂಬಿಯಾಗಿ ನಡೆಸಬಹುದು ಎನ್ನುವ ನಿಟ್ಟಿನಲ್ಲಿ ಕೇಶವ ಸೃಷ್ಟಿ ಗೋಶಾಲೆ ಮಾದರಿಯಾಗಿದೆ.
ಕೇಶವ ಸೃಷ್ಟಿ ಪರಿಸರದಲ್ಲಿ ಗ್ರಾಮವಿಕಾಸದ ಪರಿಕಲ್ಪನೆಗಳು, ಮಹಾರಾಷ್ಟ್ರಾದ 75 ಕ್ಕೂ ಹೆಚುÌ ಗ್ರಾಮಗಳಲ್ಲಿ ಗ್ರಾಮವಿಕಾಸದ ಯೋಜನೆಗಳು ಜಾರಿಯಲ್ಲಿವೆ.
ಔಷಧಿ ಗಿಡಮೂಲಿಕೆಗಳ ಉಪಯೋಗ ಮಾಡಿಕೊಂಡು ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವು ವಿಶೇಷ ಔಷಧಗಳಿಗೆ ಪೇಟೆಂಟ್ ಪಡೆದುಕೊಂಡು ಮಾರಾಟ ಸಹ ಮಾಡಲಾಗುತ್ತಿದೆ. ಸುಮಾರು 160 ಎಕರೆ ಪ್ರದೇಶದಲ್ಲಿ ಕೃಷಿ ಹಾಗೂ ಇವುಗಳಿಗೆ ಸಂಬಂಧಿಸಿದಂತೆ ಸಮಗ್ರವಾಗಿ ಕೃಷಿಯನ್ನು ಹಾಗೂ ಅವುಗಳನ್ನು ಬಳಸಿಕೊಂಡು ಸಮೃದ್ಧವಾದ ಗೋಶಾಲೆ ಮತ್ತು ಕೃಷಿ ನಡೆಸಬಹುದಾಗಿದೆ. ಕೇಶವ ಸೃಷ್ಟಿ ಗೋಶಾಲೆಯಲ್ಲಿ ಕೃಷಿ ಹಾಗೂ ಗೋಪಾಲನೆ ಗಳ ಬಗ್ಗೆ ತರಬೇತಿ ಸಹ ನೀಡಲಾಗುತ್ತದೆ. 600ಕ್ಕೂ ಹೆಚ್ಚು ಜನರು ತರಬೇತಿ ಹಾಗೂ ಬೇರೆ ಬೇರೆ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.
ನಮ್ಮ ರಾಜ್ಯದ ಗೋಶಾಲೆಗಲ್ಲಿ ಮಹಾರಾಷ್ಟ್ರ ಮಾದರಿ ಅಳವಡಿಸಿಕೊಂಡರೆ ಪ್ರತಿಯೊಬ್ಬ ರೈತ, ಪಶುಪಾಲಕರು ಹಾಗೂ ಜಾನುವಾರು ಸಾಕಣೆ ಮಾಡುವವರು ಆರ್ಥಿಕವಾಗಿ ಮತ್ತಷ್ಟು ಸಬಲರಾಗಬಲ್ಲರು.
-ಪ್ರಭು ಚೌಹಾಣ್, ಪಶುಸಂಗೋಪನೆ ಸಚಿವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Junior Doctor: ಮಾತನಾಡಲು ಕರೆದು ಕಿರಿಯ ವೈದ್ಯೆಯ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.