ದೇಶಾದ್ಯಂತ ಗೋ ಹತ್ಯೆ ನಿಷೇಧ; ಕೇಂದ್ರದಿಂದ ಹೊಸ ಕಾನೂನು
Team Udayavani, May 26, 2017, 10:54 AM IST
ಹೊಸದಿಲ್ಲಿ : ಕೇಂದ್ರ ಸರಕಾರ ದೇಶಾದ್ಯಂತ ಮಾಂಸಕ್ಕಾಗಿ ಗೋವುಗಳ ಮಾರಾಟವನ್ನು ನಿಷೇಧಿಸಿದೆ ಎಂದು ಹಿಂದುಸ್ಥಾನ್ ಟೈಮ್ಸ್ ವರದಿ ತಿಳಿಸಿದೆ.
ಹೊಲ, ಗದ್ದೆ ಹಾಗೂ ಭೂ ಮಾಲಕರು ಮಾತ್ರವೇ ಗೋವುಗಳ ಖರೀದಿ – ಮಾರಾಟದಲ್ಲಿ ತೊಡಗಬಹುದಾಗಿದೆ ಎಂದು ಕೇಂದ್ರ ಸರಕಾರದ ಹೊಸ ನೀತಿ-ನಿಯಮಾವಳಿ ತಿಳಿಸಿದೆ.
ಪಶು ಕಲ್ಯಾಣದ ಹೆಸರಲ್ಲಿ ಕೇಂದ್ರ ಸರಕಾರವು ತನ್ನ ಮೊತ್ತ ಮೊದಲ ಗೋ ರಕ್ಷಣಾ ನೀತಿ-ನಿಯಮಗಳನ್ನು ನಿನ್ನೆ ಗುರುವಾರ ಮೇ. 25ರಂದು ಪ್ರಕಟಿಸಿರುವುದಾಗಿ ವರದಿಗಳು ತಿಳಿಸಿವೆ.
ಗೋವುಗಳನ್ನು ಕೃಷಿ ಉದ್ದೇಶಗಳಿಗಾಗಿ ಖರೀದಿಸಲಾಗಿದೆಯೇ ವಿನಾ ಹತ್ಯೆಗೈಯಲು ಅಲ್ಲ ಎಂಬ ಮುಚ್ಚಳಿಕೆಯನ್ನು ಬರೆಯಿಸಿಕೊಳ್ಳ ತಕ್ಕದ್ದು ಎಂದು 1960ರ ಪಶು ಹಿಂಸೆ ತಡೆ ಕಾಯಿದೆಯ ನಿಯಮಗಳಡಿ ಪ್ರಕಟಿಸಲಾಗಿರುವ ವಿಶೇಷ ಸೆಕ್ಷನ್ ಹೇಳುತ್ತದೆ.
ಗೋ ರಕ್ಷಣೆಯ ಹೆಸರಿನಲ್ಲಿ ಹೆಚ್ಚುತ್ತಿರುವ ಹಲ್ಲೆ, ಹಿಂಸೆ, ಗಲಭೆಯೇ ಮೊದಲಾದ ಅನಪೇಕ್ಷಿತ ಘಟನೆಗಳಿಗೆ ಸಂಬಂಧಿಸಿ ಕಳೆದ ತಿಂಗಳಲ್ಲಷ್ಟೇ ಸುಪ್ರೀಂ ಕೋರ್ಟ್, ಕೇಂದ್ರ ಹಾಗೂ ಆರು ರಾಜ್ಯ ಸರಕಾರಗಳಿಗೆ ನೊಟೀಸ್ ಜಾರಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.