ಆಸ್ಪತ್ರೆಯಲ್ಲಿ ಮಂತ್ರವೇ ಮದ್ದು
Team Udayavani, Aug 5, 2018, 3:02 PM IST
ಬಿಹಾರದ ಆರೋಗ್ಯ ಕೇಂದ್ರವೊಂದರ ಸ್ಥಿತಿಯಿದು!
ಆಸ್ಪತ್ರೆಗೆ ಪ್ರವೇಶಿಸುವ ಮಂತ್ರವಾದಿ ಗಳಿಂದ ರೋಗಿಗಳಿಗೆ ಚಿಕಿತ್ಸೆ
ಸ್ಥಳೀಯರ ನಂಬಿಕೆಯಿಂದ ಆಸ್ಪತ್ರೆಯೀಗ ಮಂತ್ರವಾದಿಗಳ ಅಡ್ಡ
ಭೀತಿಯಿಂದ ತಡೆಯಲು ಮುಂದೆ ಬಾರದ ಆಸ್ಪತ್ರೆ ಆಡಳಿತ ಮಂಡಳಿ
ಪಟ್ನಾ: ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡಲಾಗುವ ಔಷಧಗಳು ಸಕಾಲಕ್ಕೆ ಸಿಗದಿದ್ದರೆ ಜನ ಗಲಾಟೆ ಮಾಡುವುದು ಸಹಜ. ಆದರೆ, ಬಿಹಾರದ ವೈಶಾಲಿ ಜಿಲ್ಲೆಯ ಮನ್ಹಾರ್ ಪ್ರಾಂತ್ಯದ ಲ್ಲೊಂದು ಸಮುದಾಯ ಆರೋಗ್ಯ ಕೇಂದ್ರ ವಿದ್ದು, ಅಲ್ಲಿ ವೈದ್ಯರ ಬದಲಿಗೆ ಮಂತ್ರವಾದಿ ಗಳೇ ರೋಗಿಗಳನ್ನು ವಾಸಿ ಮಾಡುತ್ತಾರೆ! ಜನ ರೋಗಿಗಳನ್ನು ಅಲ್ಲಿಗೆ ದಾಖಲು ಮಾಡಿಸುತ್ತಾರಷ್ಟೇ, ಮುಂದಿನದ್ದೆಲ್ಲ ಮಂತ್ರವಾದಿಗಳೇ ನೋಡಿಕೊಳ್ಳುತ್ತಾರೆ. ಹಾಗಾಗಿ, ಆ ಆಸ್ಪತ್ರೆಯ ಯಾವುದೇ ವಾರ್ಡಿಗೆ ಹೋದರೂ ಹಾಂ… ಹ್ರೀಂ… ಮಂತ್ರ ಅನುರಣಿಸುತ್ತದೆ.
ಇದಕ್ಕೆ ಸಾಕ್ಷಿಯೆಂಬಂತೆ, ಹಾವು ಕಚ್ಚಿದ ಮಹಿಳೆಯೊಬ್ಬರಿಗೆ ಈ ಆಸ್ಪತ್ರೆಯಲ್ಲಿ ಮಂತ್ರವಾದಿಯೊಬ್ಬ ಮಂತ್ರ ಹಾಕುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು, ಇದರಿಂದಾಗಿಯೇ ಈ ವಿಚಾರ ಬೆಳಕಿಗೆ ಬಂದಿದೆ. ಈ ವೀಡಿಯೋದಲ್ಲಿ ಆಸ್ಪತ್ರೆಯ ಮಂಚದ ಮೇಲೆ ಹಾವು ಕಡಿತಕ್ಕೊಳಗಾದ ಮಹಿಳೆಯನ್ನು ಮಲಗಿಸಲಾಗಿದ್ದು, ಆಕೆಯ ಅಕ್ಕಪಕ್ಕದಲ್ಲಿರುವ ಮಂತ್ರವಾದಿಯೊಬ್ಬ ಮಂತ್ರ ಹೇಳುತ್ತಾ, ಬಟ್ಟೆಯೊಂದರಿಂದ ಆಕೆಯ ತಲೆಯಿಂದ ಹಿಡಿದು ಕಾಲಿನವರೆಗೂ ಹೊಡೆಯುತ್ತಾ ಬರುತ್ತಾನೆ.
ಈ ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಸ್ಥಳೀ ಯರೇ ಮಂತ್ರವಾದಿಗಳನ್ನು ಕರೆದುಕೊಂಡು ಬರುತ್ತಿರುವುದು ಸಹಜ ಎಂದು ಹೇಳಲಾ ಗುತ್ತಿದೆ. ಆದರೆ, ಇದನ್ನು ತಡೆಯಲು ಆಸ್ಪತ್ರೆ ಆಡಳಿತ ಮಂಡಳಿಯೂ ಹಿಂದೇಟು ಹಾಕುತ್ತಿದೆ. ಅಧಿಕಾರಿಗಳಿಗೆ ಮಂತ್ರವಾದಿಗಳ ಭಯ ಇರುವುದೇ ಕಾರಣ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.