ಯುಜಿಸಿ ಬದಲಿಗೆ ಉನ್ನತ ಶಿಕ್ಷಣ ಆಯೋಗ: ಕರಡು ಕಾಯಿದೆ ಪ್ರಕಟ
Team Udayavani, Jun 27, 2018, 7:09 PM IST
ಹೊಸದಿಲ್ಲಿ : ಕೇಂದ್ರ ಸರಕಾರ ಯುಜಿಸಿ ಬದಲಿಗೆ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸಲು ಬಯಸಿದೆ. ಯುಜಿಸಿ ದೇಶದಲ್ಲಿನ ವಿಶ್ವವಿದ್ಯಾಲಯಗಳಿಗೆ ಹಣಕಾಸು ಒದಗಿಸುವ ಪ್ರಧಾನ ಸಂಸ್ಥೆಯಾಗಿದೆ.
ಯುಜಿಸಿ ಯನ್ನು ಬದಲಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಇಂದು ಬುಧವಾರ ಹೊಸ ಕಾಯಿದೆಯ ಕರಡನ್ನು ಪ್ರಸ್ತಾಪಿಸಿದೆ. 1956ರ ಯುಜಿಸಿ ಕಾಯಿದೆಯನ್ನು ಅನೂರ್ಜಿತಗೊಳಿಸುವ ಹೊಸ ಕಾಯಿದೆಯ ಕರಡನ್ನು ಇಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಪ್ರಕಟಿಸಿದರು.
2018ರ ಜುಲೈ 7ರ ಒಳಗಾಗಿ ಈ ಪ್ರಸ್ತಾವಿತ ಕಾಯಿದೆಗೆ ತಮ್ಮ ಶಿಫಾರಸುಗಳನ್ನು ಕಳುಹಿಸುವಂತೆ ಅವರು ಎಲ್ಲ ಹಿತಾಸಕ್ತಿದಾರರನ್ನು ಕೋರಿದರು.
ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಹೆಚ್ಚಿನ ಸ್ವಾಯತ್ತೆ ಒದಗಿಸುವುದು, ದೇಶದ ಶಿಕ್ಷಣ ವ್ಯವಸ್ಥೆಯ ಸಮಗ್ರ ಬೆಳವಣಿಗೆಗೆ ಅವಕಾಶ ಕಲ್ಪಿಸುವುದು ಮತ್ತು ಶಿಕ್ಷಣದಲ್ಲಿ ವಿಶ್ವ ಮಟ್ಟದ ಉತ್ಕೃಷ್ಟತೆಯನ್ನು ಸಾಧಿಸುವುದು ಹೊಸ ಕಾಯಿದೆಯ ಪ್ರಧಾನ ಆಶಯಗಳಾಗಿವೆ ಎಂದು ಸಚಿವ ಜಾವಡೇಕರ್ ಹೇಳಿದರು.
ನೂತನ ಪ್ರಸ್ತಾವಿತ “2018ರ ಭಾರತದ ಉನ್ನತ ಶಿಕ್ಷಣ ಆಯೋಗ ಕಾಯಿದೆ’ಯು ದೇಶದಲ್ಲಿ ಯಾವುದೇ ಇತರ ಕಾಯಿದೆಗಳಡಿ ಸ್ಥಾಪಿಸಲ್ಪಟ್ಟಿರುವ ಎಲ್ಲ ಉನ್ನತ ಶಿಕ್ಷಣಾಲಯಗಳಿಗೆ ಅನ್ವಯವಾಗುತ್ತದೆ ಎಂದು ಸಚಿವ ಜಾವಡೇಕರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.