ಆಮೀರ್‌ಪೆಟ್-ಹೈ ಟೆಕ್ ಸಿಟಿ ಮೆಟ್ರೋ : ರಾಜ್ಯಪಾಲರಿಂದ ಚಾಲನೆ
Team Udayavani, Mar 20, 2019, 6:40 AM IST
ಹೈದರಾಬಾದ್ : ಬಹುಕಾಲದಿಂದ ಈ ಮಹಾನಗರದ ಜನರು ಕಾಯುತ್ತಿದ್ದ ಮೆಟ್ರೋ ರೈಲು ಸೇವೆ ಕೊನೆಗೂ ಸಾಕಾರಗೊಂಡಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲರಾಗಿರುವ ಇ ಎಸ್ ಎಲ್ ನರಸಿಂಹನ್ ಅವರಿಂದು ಹತ್ತು ಕಿಲೋ ಮೀಟರ್ ಮಾರ್ಗದ ಆಮೀರ್‌ಪೆಟ್ ನಿಂದ ಹೈ ಟೆಕ್ ಸಿಟಿ ವರೆಗಿನ ಮೆಟ್ರೋ ರೈಲು ಕಾರಿಡಾರ್ 3 ಸೇವೆಗೆ ಚಾಲನೆ ನೀಡಿದರು.
10 ಕಿ.ಮೀ. ಉದ್ದದ ಈ ಮೆಟ್ರೋ ಮಾರ್ಗದಲ್ಲಿ 9 ಸ್ಟೇಶನ್‌ಗಳಿವೆ. ಈ ಮೆಟ್ರೋ ಸೇವೆಯಲ್ಲಿ ಅತ್ಯಂತ ಜನ-ವಾಹನ ದಟ್ಟನೆಯ ಐಟಿ ಮತ್ತು ಐಟಿಇಎಸ್ ಸೇವೆಗಳ ಹೈಟೆಕ್ ಸಿಟಿ ಪ್ರದೇಶ, ಮಾಧಾಪುರ, ಗಚ್ಚೀಬೌಲೀ, ಜುಬಿಲಿ ಹಿಲ್ಸ್ ಪ್ರದೇಶಗಳನ್ನು ಪರಸ್ಪರ ಜೋಡಿಸಲಿದೆ. ಇಂದು ಬುಧವಾರ ಸಂಜೆ 4 ಗಂಟೆಯಿಂದ ಕ್ರಮಬದ್ಧ ಮೆಟ್ರೋ ರೈಲು ಸೇವೆ ಆರಂಭವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.