ಮಿತಿಗಿಂತ ಹೆಚ್ಚು ಚಿನ್ನ ಇಟ್ಟುಕೊಳ್ಳುವವರ ಮೇಲೆ ಸರಕಾರದ ಕಣ್ಣು!
ನೋಟ್ ಬ್ಯಾನ್ ಬಳಿಕ ಕೇಂದ್ರ ಸರಕಾರದಿಂದ ಹೊಸ ಕ್ರಮಕ್ಕೆ ಚಿಂತನೆ
Team Udayavani, Oct 30, 2019, 8:35 PM IST
ಹೊಸದಿಲ್ಲಿ: ಕಳೆದ ವರ್ಷ ಕಪ್ಪು ಹಣ ನಿಗ್ರಹ ಮಾಡುವುದಕ್ಕಾಗಿ ಕೇಂದ್ರ ಸರಕಾರ ನೋಟು ನಿಷೇಧ ಮಾಡಿದಂತೆಯೇ, ಈ ಬಾರಿ ಮತ್ತೂಂದು ಆಪರೇಷನ್‌ಗೆ ಮುಂದಾಗಿದ್ದು, ಚಿನ್ನದ ಮೇಲೆ ಕಣ್ಣು ಹಾಕಿದೆ. ನೋಟ್ ಬ್ಯಾನ್ ಆಗಿ 2 ವರ್ಷ ತುಂಬುತ್ತಿದ್ದು, ಇದೇ ಸಂದರ್ಭ ದೇಶದಲ್ಲಿರುವ ಲೆಕ್ಕವಿಲ್ಲದ ಚಿನ್ನಕ್ಕೆ ಕ್ಷಮಾದಾನ ಯೋಜನೆ (ಅಮ್ನೆಸ್ಟಿ ಸ್ಕೀಂ) ಯನ್ನು ಜಾರಿಗೆ ತರಲು ಯೋಜಿಸುತ್ತಿದೆ. ಈ ಕುರಿತ ನೀತಿ ನಿಯಮಾವಳಿಗಳು ಬಹುತೇಕ ಸಿದ್ಧವಾಗಿದ್ದು, ಪ್ರಧಾನಿ, ಹಣಕಾಸು ಸಚಿವರು ಮತ್ತು ಸಂಪುಟ ಸಮಿತಿಯ ಅಂತಿಮ ಸಮ್ಮತಿಗೆ ಕಾಯುತ್ತಿದೆ ಎನ್ನಲಾಗಿದೆ.
ಕೇಂದ್ರ ಸರಕಾರ ಅಮ್ನೆಸ್ಟಿ ಸ್ಕೀಂ ಅನ್ನು ಮುಂದಿನ ದಿನಗಳಲ್ಲಿ ಜಾರಿಗೆ ತರಲಿದೆ ಎನ್ನಲಾಗಿದೆ. ಅಂದರೆ ಒಂದು ನಿರ್ದಿಷ್ಟ ಮಿತಿಗಿಂತ ಹೆಚ್ಚಿನ ಚಿನ್ನ ಹೊಂದಿರುವವರು ಅದನ್ನು ಘೋಷಣೆ ಮಾಡಿ, ಅದಕ್ಕೆ ದಂಡ ತೆತ್ತು ಬಂಗಾರವನ್ನು ಸಕ್ರಮ ಮಾಡಿಕೊಳ್ಳಬಹುದು. ಸರಕಾರ ಹೇಳಿದ ಮಿತಿಗಿಂತ ಕಡಿಮೆ ಚಿನ್ನ ಇದ್ದವರಿಗೆ ಇದರಿಂದ ಯಾವುದೇ ಸಮಸ್ಯೆ ಇರಲಾರದು.
ಮೂಲಗಳ ಪ್ರಕಾರ ಇಂತಹ ಅಕ್ರಮ ಚಿನ್ನದ ಮೇಲಿನ ತೆರಿಗೆ ದರ ಕೊಂಚ ಹೆಚ್ಚಾಗಿಯೇ ಇರಲಿದೆ ಎಂದು ಹೇಳಲಾಗುತ್ತಿದೆ.
ಯಾಕೆ ಈ ಕ್ರಮ?
ದೇಶದ ವಿದೇಶೀ ವಿನಿಮಯ ಅತಿ ಹೆಚ್ಚು ಬಳಕೆಯಾಗುವುದು ಪೆಟ್ರೋಲಿಯಂ ಉತ್ಪನ್ನಗಳ ಆಮದು ಮತ್ತು ಚಿನ್ನದ ಖರೀದಿಗಾಗಿ. ವಿಶ್ವದಲ್ಲಿ ಅತಿ ಹೆಚ್ಚು ಚಿನ್ನವನ್ನು ಭಾರತ ಖರೀದಿ ಮಾಡುತ್ತಿದೆ. ಇದರಿಂದ ಡಾಲರ್ ಮೇಲಿನ ಅವಲಂಬನೆ ಹೆಚ್ಚಾಗಿದೆ. ಕಪ್ಪು ಹಣ ಹೆಚ್ಚಿರುವುದರಿಂದ ಚಿನ್ನದ ಮೇಲಿನ ಹೂಡಿಕೆಯೂ ಹೆಚ್ಚಿದ್ದು, ಈ ವರೆಗೆ ಇದಕ್ಕೆ ಯಾವುದೇ ಕಡಿವಾಣ ಇರಲಿಲ್ಲ. ಆದ್ದರಿಂದ ಇದು ಆರ್ಥಿಕತೆಯ ಮೇಲೆ ಪೆಟ್ಟುಕೊಡುತ್ತಿದೆ. ಇದಕ್ಕಾಗಿ ಚಿನ್ನದ ಮೇಲಿನ ಅವಲಂಬನೆ, ಆಮದು, ಅಕ್ರಮ ಹೂಡಿಕೆಯನ್ನು ನಿಯಂತ್ರಿಸುವ ಉದ್ದೇಶ ಸರಕಾರದ್ದಾಗಿದೆ.
ಮಿತಿ ಎಷ್ಟಿರಬಹುದು?
ಮೂಲಗಳ ಪ್ರಕಾರ 300ರಿಂದ 400 ಗ್ರಾಂ ವರೆಗೆ ಓರ್ವ ವ್ಯಕ್ತಿ ಚಿನ್ನ ಇಟ್ಟುಕೊಳ್ಳಲು ಅವಕಾಶ ನೀಡಲು ಸಾಧ್ಯತೆ ಇದೆ. ಇನ್ನು ಅವಿಭಕ್ತ ಕುಟುಂಬಕ್ಕಾದರೆ ಈ ನೀತಿಯನ್ನು ಇನ್ನಷ್ಟು ಸಡಿಲಿಸಿ ಇಡುವ ಸಾಧ್ಯತೆಯೂ ಇದೆ. ಈಗಾಗಲೇ ಚಿನ್ನದ ಮೇಲಿನ ಅವಲಂಬನೆ ಕಡಿಮೆ ಮಾಡಲು ಚಿನ್ನದ ಬಾಂಡ್‌ಗಳನ್ನು ಜಾರಿಗೆ ತಂದಿರುವ ಕೇಂದ್ರ ಸರಕಾರ ಇದರಲ್ಲೂ ಮಿತಿ ಹೇರಿತ್ತು. ಆ ಪ್ರಕಾರ, ಒಂದು ವಿತ್ತೀಯ ವರ್ಷದಲ್ಲಿ ಚಿನ್ನದ ಮೇಲಿನ ಹೂಡಿಕೆ ಓರ್ವ ವ್ಯಕ್ತಿಗೆ 500 ಗ್ರಾಂ ಗೆ ಸೀಮಿತ ಮಾಡಿದೆ. ಹಾಗೆಯೇ ಗರಿಷ್ಠ ಹೂಡಿಕೆಯನ್ನು 4 ಕೆ.ಜಿ.ಗೆ ಮತ್ತು ಹಿಂದೂ ಅವಿಭಕ್ತ ಕುಟುಂಬಕ್ಕೆ 4 ಕೆ.ಜಿ. ಮತ್ತು ಟ್ರಸ್ಟ್‌ಗೆ 20 ಕೆ.ಜಿ. ಎಂದು ನಿಗದಿ ಪಡಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
ISRO: ಇಸ್ರೋ ನೂತನ ಅಧ್ಯಕ್ಷರಾಗಿ ವಿ.ನಾರಾಯಣನ್ ನೇಮಕ: ಚಿನ್ನದ ಪದಕ ವಿಜೇತ VN ಪರಿಚಯ…
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Kaikamba: ದೊಡ್ಡಳಿಕೆ ಅಣೆಕಟ್ಟಿನಿಂದ ಎಡನಾಲೆಗೆ ನೀರು
Kinnigoli: ಈಗಲೇ ಕುಡಿಯುವ ನೀರಿನ ಸಮಸ್ಯೆ; ಒಂದೇ ವಾರದಲ್ಲಿ ನಾಲ್ಕು ಬೋರ್‌ವೆಲ್
Bollywood ನಲ್ಲಿ ಹೃತಿಕ್ ರೋಷನ್ 25 ವರ್ಷ; ಸಂಕೋಚ, ಆತಂಕ ಈಗಲೂ ಇದೆ!
Sullia: ಜಾಕ್‌ವೆಲ್ ಹೂಳು ತೆಗೆದ ಬಳಿಕ ನಾಗಪಟ್ಟಣ ಡ್ಯಾಂಗೆ ಗೇಟ್
Arrested: ಪೈಂಟ್ ಕೆಲಸಕ್ಕೆ ಬಂದು ಖ್ಯಾತ ನಟಿಯ ಮನೆಗೆ ಕನ್ನ; ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.