ಗುಜರಿ ನೀತಿಯಡಿ ತೆರಿಗೆ ಕಮ್ಮಿ
ನೋಯ್ಡಾದಲ್ಲಿ ಹಳೆಯ ಕಾರು ವಿಲೇ ಘಟಕ ಉದ್ಘಾಟಿಸಿ ಸಚಿವ ಗಡ್ಕರಿ ಪ್ರಸ್ತಾವ
Team Udayavani, Nov 24, 2021, 6:50 AM IST
ಹೊಸದಿಲ್ಲಿ/ನೋಯ್ಡಾ: ವಿದ್ಯುತ್ ವಾಹನಗಳ ಉತ್ತೇ ಜನಕ್ಕಾಗಿ ಪೆಟ್ರೋಲ್, ಡೀಸೆಲ್ ವಾಹನಗಳ ಮೇಲೆ ನಿಷೇಧವಿಲ್ಲ. ಇದರ ಜತೆಗೆ ಹಳೆಯ ವಾಹನಗಳನ್ನು ಗುಜರಿ ನೀತಿಯಡಿ ನೀಡಿ ಹೊಸ ವಾಹನಗಳನ್ನು ಖರೀದಿಸುವ ಪ್ರಸ್ತಾಪಕ್ಕೆ ಮತ್ತಷ್ಟು ತೆರಿಗೆ ವಿನಾಯಿತಿ ನೀಡುವ ಪ್ರಸ್ತಾವಗಳಿವೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನೋಯ್ಡಾದಲ್ಲಿ ಮಾರುತಿ ಸುಜುಕಿ ಮತ್ತು ಟೊಯೋಟಾ ತುಷೋ ಜಂಟಿ ಸಹಭಾಗಿತ್ವದಲ್ಲಿ ಹಳೆಯ ಕಾರು ವಿಲೇವಾರಿ ಕೇಂದ್ರ ಉದ್ಘಾಟನೆಯ ಸಂದರ್ಭದಲ್ಲಿ ಗಡ್ಕರಿ ಮಾತ ನಾಡಿದರು. ಎರಡೂ ಸಂಸ್ಥೆಗಳು ಜತೆಯಾಗಿ ಸಿದ್ಧಗೊಳಿಸಿದ ಮತ್ತು ಕೇಂದ್ರ ಸರಕಾರದಿಂದ ಅನುಮೋದನೆ ಪಡೆದ ಮೊದಲ ವಾಹನ ಗುಜರಿ ಕೇಂದ್ರ ಇದಾಗಿದೆ.
ಶೇ.25ರಷ್ಟು ತೆರಿಗೆ ವಿನಾಯಿತಿ: ಇತ್ತೀಚೆಗೆ ಕೇಂದ್ರ ಸರಕಾರ ಬಿಡುಗಡೆ ಮಾಡಿದ ಹೊಸ ಗುಜರಿ ನೀತಿಯ ಪ್ರಕಾರ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಳೆ ವಾಹನಗಳ ಮಾರಾಟ ಮಾಡಿ ಹೊಸ ವಾಹನ ಖರೀದಿಸಿದರೆ, ಶೇ.25ರ ವರೆಗೆ ತೆರಿಗೆ ವಿನಾಯಿತಿ ನೀಡಬೇಕು.
ನಿಷೇಧವಿಲ್ಲ: ವಿದ್ಯುತ್ ವಾಹನಗಳ ಮಾರಾಟ, ಬಳಕೆ ಉತ್ತೇಜಿಸುವ ನಿಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ಮೇಲೆ ನಿಷೇಧ ಹೇರುವ ಪ್ರಸ್ತಾವ ಇಲ್ಲ. ಜನರು ಶೇ.50ರಷ್ಟು ಪ್ರಮಾಣದಲ್ಲಿಯಾದರೂ ಇಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸಬೇಕು. ವಿದ್ಯುತ್ ಚಾಲಿತ ವಾಹನಗಳ ಮಾರಾಟ ಸಹಜವಾಗಿಯೇ ಹೆಚ್ಚುತ್ತಿದೆ. ಬದಲಿ ಇಂಧನ ಗಳಾಗಿರುವ ಬಯೋ ಎಲ್‌ಎನ್‌ಜಿ, ಗ್ರೀನ್ ಹೈಡ್ರೋಜನ್ ಸಹಿತ ಹಲವು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ. ಇ-ಚಾಲಿತ ವಾಹನಗಳ ಅಭಿವೃದ್ಧಿ ನಿಟ್ಟಿನಲ್ಲಿ 250 ಸ್ಟಾರ್ಟ್ ಅಪ್‌ಗ್ಳು ಕೆಲಸ ಮಾಡುತ್ತಿವೆ ಎಂದರು ಗಡ್ಕರಿ.
ಮಾರುತಿ ಸುಜುಕಿ ಇಂಡಿಯಾ ಮತ್ತು ಟೊಯೋಟಾ ಸಂಸ್ಥೆಯ ಅಧಿಕೃತ ಕಾರು ಗುಜರಿ ಕೇಂದ್ರ ವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರ ನೋಯ್ಡಾದಲ್ಲಿ ಉದ್ಘಾಟಿಸಿದರು.
ಇದನ್ನೂ ಓದಿ:“ಆಯುಷ್ಮಾನ್’ಗೆ ಖಾಸಗಿ ಆಸ್ಪತ್ರೆಗಳನ್ನು ಆಕರ್ಷಿಸಲು ಕ್ರಮ
ಹೊಸ ಕೇಂದ್ರದ ವಿಶೇಷ?
ಮಾರುತಿ ಸುಜುಕಿ ಇಂಡಿಯಾ ಮತ್ತು ಟೊಯೋಟಾ ತುಷೋ ನೋಯ್ಡಾದಲ್ಲಿ ಈ ಘಟಕವನ್ನು ಸ್ಥಾಪಿಸಿದೆ. ರಾಷ್ಟ್ರೀಯ ವಾಹನ ಗುಜರಿ ನೀತಿ ಪ್ರಕಟಿಸಿದ್ದ ಸಂದರ್ಭದಲ್ಲಿ ಕೇಂದ್ರ ಸರಕಾರ ಬೆಂಗಳೂರು ಸೇರಿ ದೇಶದ 26 ನಗರಗಳಲ್ಲಿ ಸ್ಕ್ರಾಪಿಂಗ್ ಘಟಕ ಆರಂಭಿಸಲು ಅನುಮತಿ ನೀಡಲಾಗಿತ್ತು.
ನಿಮಗೇನು ಲಾಭ?
ಸ್ಕ್ರಾಪ್ ಮಾಡಿಸಿದ ಬಳಿಕ ನಿಮಗೆ ಸಂಸ್ಥೆ ಒಂದಿಷ್ಟು ಹಣವನ್ನು ನೀಡಲಿದೆ. ಹಾಗೆಯೇ ಅದರ ಜತೆಯಲ್ಲಿ ಗಾಡಿಯ “ವಿನಾಶ ಪ್ರಮಾಣ ಪತ್ರ’ ನೀಡಲಾಗುವುದು.
ಸ್ವಯಂ ಪ್ರೇರಿತವಾಗಿ ಹಳೆ ವಾಹನಗಳನ್ನು ಸ್ಕ್ರಾಪ್ ಮಾಡಿಸುವವರಿಗೆ ಸರಕಾರ ವಿವಿಧ ಸೌಲಭ್ಯ ನೀಡಲಿದೆ. ಹೊಸ ವಾಹನ ಖರೀದಿಸುವಾಗ ರಸ್ತೆ ತೆರಿಗೆಯಲ್ಲಿ ಶೇ. 25 ರಿಯಾಯಿತಿ, ಉಚಿತ ನೋಂದಣಿ ನೀಡಲಾಗುವುದು. ಹಾಗೆಯೇ ಹಳೆ ವಾಹನ ಸ್ಕ್ರಾಪ್ ಮಾಡಿ ಹೊಸ ವಾಹನ ಖರೀದಿಸುವವರಿಗೆ ಶೇ. 5 ರಿಯಾಯಿತಿ ನೀಡಲು ವಾಹನ ಉತ್ಪಾದಕ ಸಂಸ್ಥೆಗಳಿಗೂ ಸೂಚನೆ ನೀಡಲಾಗಿದೆ.
ಸ್ಕ್ರಾಪಿಂಗ್ ಹೇಗೆ?
-ಮೊದಲು ವಾಹನದ ಕೀಲೆಣ್ಣೆ, ಇಂಧನ, ಕೂಲರ್‌ಗಳನ್ನು ತೆಗೆಯಲಾಗುವುದು.
– ಎರಡನೇ ಹಂತದಲ್ಲಿ ಕಾರಿನ ಬಾಗಿಲು, ಬಾನೆಟ್, ಸೀಟು, ಡ್ಯಾಶ್‌ಬೋರ್ಡ್‌ಗಳನ್ನು ತೆಗೆದು ಹಾಕಲಾಗುವುದು.
-ಮುಖ್ಯ ಮೆಕಾನಿಕಲ್ ಭಾಗಗಳಾದ ಎಂಜಿನ್, ಸಸ್ಪೆನ್ಶನ್ ತೆಗೆದು, ಚಾಸಿಸ್ ನಂಬರ್ ತೆಗೆಯಲಾಗುತ್ತದೆ.
-ಕೊನೆಯದಾಗಿ ಉಳಿಯುವ ಬಾಡಿಯನ್ನು ಕುಗ್ಗಿಸಿ, ಕಬ್ಬಿಣ ಕರಗಿಸುವವರಿಗೆ ಮಾರಾಟ ಮಾಡಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Sambhal Violence: ಮೃತರ ಸಂಖ್ಯೆ ನಾಲ್ಕಕ್ಕೆ, ಇಂಟರ್ನೆಟ್ ಸ್ಥಗಿತ, ನಿಷೇಧಾಜ್ಞೆ ಜಾರಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.