ಪತ್ನಿ ಬಿಟ್ಟರೆ ಎನ್ನಾರೈಗೆ ಆಸ್ತಿ ನಷ್ಟ
Team Udayavani, Feb 14, 2018, 9:12 AM IST
ಹೊಸದಿಲ್ಲಿ: ಭಾರತದಲ್ಲೇ ಪತ್ನಿಯನ್ನು ತೊರೆದು ವಿದೇಶಗಳಿಗೆ ತೆರಳಿ ಇನ್ನು ತಲೆಮರೆಸಿಕೊಳ್ಳುವುದು ಸಾಧ್ಯವಿಲ್ಲ. ಹಾಗೊಂದು ವೇಳೆ ಮಾಡಿದರೂ ಭಾರತದಲ್ಲಿರುವ ತನ್ನ ಕುಟುಂಬದ ಎಲ್ಲ ಆಸ್ತಿಯನ್ನೂ ಕಳೆದುಕೊಳ್ಳಬೇಕಾಗುತ್ತದೆ.
ಭಾರತದಲ್ಲಿ ಪತ್ನಿ ಬಿಟ್ಟು ನಾಪತ್ತೆಯಾಗುವ ಎನ್‌ಆರ್‌ಐ ವಿರುದ್ಧ ಕಠಿನ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿದೆ. ಅಪರಾಧ ಕಾನೂನಿನಲ್ಲಿ (ಸಿಆರ್‌ಪಿಸಿ) ಈ ಸಂಬಂಧ ಸೂಕ್ತ ತಿದ್ದುಪಡಿ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಪ್ರಸ್ತಾವನೆ ಸಲ್ಲಿಸಿದ್ದು, ಇದನ್ನು ವಿದೇಶಾಂಗ ಸಚಿವಾಲ ಯವು ಗೃಹ ಮತ್ತು ಕಾನೂನು ಸಚಿವಾಲ ಯಕ್ಕೆ ಕಳುಹಿಸಿದೆ. ಭಾರತದಲ್ಲೇ ಪತ್ನಿಯನ್ನು ತೊರೆದು ವಿದೇಶಕ್ಕೆ ತೆರಳಿ, ಈ ಸಂಬಂಧದ ಪ್ರಕರಣದಲ್ಲಿ ಮೂರಕ್ಕೂ ಹೆಚ್ಚು ಬಾರಿ ನೋಟಿಸ್ ಕೊಟ್ಟರೂ ಉತ್ತರಿಸದಿದ್ದರೆ ಅವರ ಕುಟುಂಬದವರ ಆಸ್ತಿಯನ್ನು ಮುಟ್ಟುಗೋ ಲು ಹಾಕಿಕೊಳ್ಳಬಹುದು ಎಂಬುದಾಗಿ ಕಾಯ್ದೆ ಯಲ್ಲಿ ತಿದ್ದುಪಡಿ ತರಲು ಪ್ರಸ್ತಾವಿಸಲಾಗಿದೆ.
ಎನ್‌ಆರ್‌ಐಗಳು ಪತ್ನಿಯರ ವಿಷಯಕ್ಕೆ ಕೋರ್ಟ್ ನೀಡುವ ಸಮನ್ಸ್ ಅನ್ನು ನಿರ್ಲಕ್ಷಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಸಿಆರ್‌ಪಿಸಿ ಕಾನೂನು ಬದಲಾದರೆ ಹೀಗೆ ಮಾಡಲಾಗದು. ಮೂರು ಸಮನ್ಸ್ ನೀಡಿದರೂ ಉತ್ತರಿಸದಿದ್ದರೆ, ಅಂಥವರನ್ನು “ತಲೆಮರೆಸಿಕೊಂಡವರು’ ಎಂದು ಪರಿಗಣಿಸ ಲಾಗುತ್ತದೆ ಮತ್ತು ವಿದೇಶಾಂಗ ಇಲಾಖೆಯ ವೆಬ್‌ಸೈಟ್‌ನಲ್ಲಿ ತಲೆಮರೆಸಿಕೊಂಡವರ ವಿವರಗಳನ್ನು ಪ್ರಕಟಿಸಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಹೇಳಿದ್ದಾರೆ.
ಮಹತ್ವದ ಕ್ರಮ: ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಅಪ್ರಾಪ್ತರು ಪ್ರಾಪ್ತ ವಯಸ್ಕರಾದ ನಂತರ ಅಥವಾ ಹಲವು ವರ್ಷಗಳ ನಂತರವೂ ಆರೋಪಿಗಳ ವಿರುದ್ಧ ದೂರು ದಾಖಲಿಸಲು ಅವಕಾಶ ಕಲ್ಪಿಸುವ ಬಗ್ಗೆಯೂ ಸಿಆರ್‌ಪಿಸಿಯಲ್ಲಿ ತಿದ್ದುಪಡಿ ತರಲು ಪ್ರಸ್ತಾವಿ ಸಲಾಗಿದೆ. ಆದರೆ ಇಂಥ ಪ್ರಕರಣಗಳಲ್ಲಿ ಆರೋಪ ಸಾಬೀತಿಗೆ ಸಮಯ ತಗಲುತ್ತದೆ ಎಂದು ಮೇನಕಾ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.