Monsoon Session;ಸಂಸತ್‌ಗೆ “ಮಣಿಪುರ ಗಲಭೆ’ ಬಿಸಿ? ಮುಂಗಾರು ಅಧಿವೇಶನ ಇಂದಿನಿಂದ ಆರಂಭ
Team Udayavani, Jul 20, 2023, 7:25 AM IST
ಹೊಸದಿಲ್ಲಿ: ಗುರುವಾರದಿಂದ ಸಂಸತ್‌ನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಮಣಿಪುರ ಗಲಭೆಯ ಕುರಿತು ಚರ್ಚೆಗೆ ಅವಕಾಶ ಕಲ್ಪಿಸಲೇಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಹೀಗಾಗಿ ಮಣಿಪುರದ ಬೆಂಕಿಯ ಬಿಸಿ ಉಭಯ ಸದನಗಳ ಕಲಾಪಗಳನ್ನು ತಟ್ಟುವ ಸಾಧ್ಯತೆ ಅಧಿಕವಾಗಿದೆ.
ಸುಗಮ ಕಲಾಪಕ್ಕೆ ಸಹಕರಿಸುವಂತೆ ಕೋ ರುವ ಸಲುವಾಗಿ ಬುಧ ವಾರ ಸರ್ವಪಕ್ಷಗಳ ಸಭೆ ನಡೆದಿದ್ದು, ಈ ವೇಳೆ ವಿಪಕ್ಷ ಕಾಂಗ್ರೆಸ್ ಮಣಿಪುರದ ವಿಚಾರ ಚರ್ಚೆಯಾಗಬೇಕು ಎಂದು ಆಗ್ರಹಿಸಿದೆ. ಕಲಾಪ ಸರಾಗವಾಗಿ ಸಾಗ ಬೇಕೆಂದರೆ ವಿಪಕ್ಷಗಳ ಧ್ವನಿ ಗೂ ಅವಕಾಶ ಸಿಗಬೇಕು. ಎರಡು ಕೈ ತಟ್ಟಿದರಷ್ಟೇಚಪ್ಪಾಳೆ ಎಂದು ಲೋಕಸಭೆ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಹೇಳಿದ್ದಾರೆ. ಇದೇ ವೇಳೆ, ಮಣಿಪುರ ವಿಚಾರದ ಚರ್ಚೆಗೆ ಸರಕಾರ ಸಿದ್ಧವಿದೆ ಎಂದು ಬಿಜೆಪಿ ಹೇಳಿದೆ. ಇದೇ ವೇಳೆ, ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ಅಂಗೀಕರಿಸಬೇಕು ಎಂದು ಬಿಜೆಡಿ, ವೈಎಸ್ಸಾರ್ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಆಗ್ರಹಿಸಿವೆ.
ಮತ್ತೊಂದು ಭೀಕರ ಕೃತ್ಯ
ಗುಂಪೊಂದು ಇಬ್ಬರು ಮಹಿಳೆಯರನ್ನು ರಸ್ತೆಯಲ್ಲಿ ಬೆತ್ತಲೆ ಮೆರವಣಿಗೆ ನಡೆಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಣಿಪುರದಲ್ಲಿ ಈ ಮಹಿಳೆಯರ ಮೇಲೆ ಹೊಲದಲ್ಲಿ ಸಾಮೂಹಿಕ ಅತ್ಯಾಚಾರಗೈದು, ಬೆತ್ತಲೆ ಮೆರವಣಿಗೆ ಮಾಡಿಸಲಾಗಿದೆ ಎಂದು ಬುಡ ಕಟ್ಟು ಸಮುದಾಯ ಆರೋಪಿಸಿದೆ. ಮೇ 4ರಂದು ನಡೆದಿದೆ ಎನ್ನಲಾದ ಘಟನೆಯ ವೀಡಿಯೋ ಈಗ ಹೊರಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ, ಇನ್ನೂ 6 ಲಕ್ಷ ಬುಲೆಟ್‌ಗಳು ಹಾಗೂ 3 ಸಾವಿರ ಶಸ್ತ್ರಾಸ್ತ್ರಗಳು ಇನ್ನೂ ಮಣಿಪುರದ ಬಂಡು ಕೋರರ ಕೈಯ್ಯಲ್ಲೇ ಇವೆ ಎಂದು ಅಧಿಕಾ ರಿಗಳು ಮಾಹಿತಿ ನೀಡಿದ್ದಾರೆ. ಸಂಘರ್ಷ ಆರಂಭವಾದಾಗಿನಿಂದ ಪೊಲೀಸರ ಬಳಿ ಯಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಬಂಡುಕೋರರು ಲೂಟಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.