ಕರಾವಳಿ ಆರ್ಥಿಕತೆಗೆ ಇನ್ನಷ್ಟು ಉತ್ತೇಜನ
Team Udayavani, Jun 4, 2018, 6:47 AM IST
ಹೊಸದಿಲ್ಲಿ: ದೇಶೀಯ ಜಲಸಾಗಣೆ ನೀತಿಯಲ್ಲಿ ಅತ್ಯಂತ ಮಹತ್ವದ ಬದಲಾವಣೆ ಮಾಡಿರುವ ಕೇಂದ್ರ ಸರಕಾರ, ಕೃಷಿ, ಮೀನುಗಾರಿಕೆ, ತೋಟಗಾರಿಕೆ ಮತ್ತು ಪ್ರಾಣಿ ಉತ್ಪನ್ನಗಳ ಸರಕುಗಳನ್ನು ಸಾಗಿಸಲು ವಿದೇಶಿ ಹಡಗುಗಳಿಗೆ ಅಗತ್ಯ ಅನುಮತಿಯಲ್ಲಿ ವಿನಾಯಿತಿ ನೀಡಿದೆ. ಜೊತೆಗೆ ಭಾರತೀಯ ಹಡಗುಗಳೂ ಈ ಸಾಮಗ್ರಿಗಳನ್ನು ಮುಕ್ತವಾಗಿ ಸಾಗಿಸಬಹುದು. ಸಾಗರಮಾಲಾ ಯೋಜನೆ ಅಡಿಯಲ್ಲಿ ಮೀನುಗಾರಿಕೆ ಮತ್ತು ಮೀನು ಸಂಸ್ಕರಣೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ಮಹತ್ವದ್ದಾಗಿದೆ. ಸಾಮಾನ್ಯವಾಗಿ ಈಗ ಭಾರತದ ಮೀನುಗಳನ್ನು ಸಿಂಗಾಪುರದಲ್ಲಿ ಸಂಸ್ಕರಿಸಿ ಜಪಾನ್‌ನಂಥ ದೇಶಗಳಿಗೆ ರಫ್ತು ಮಾಡಲಾಗುತ್ತದೆ.
ಇದರಿಂದಾಗಿ ರೈತರ ಸರಕು ಸಾಗಣೆ ವೆಚ್ಚ ಕಡಿಮೆಯಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಹಡಗುಗಳಲ್ಲಿ ಸಾಮಗ್ರಿಗಳನ್ನು ಸಾಗಿಸುವಾಗ ಬಂದರು ಪ್ರಧಾನ ನಿರ್ದೇಶಕರಿಂದ ಅನುಮತಿ ಪಡೆಯಬೇಕಾಗುತ್ತದೆ. ಈ ಪ್ರಕ್ರಿಯೆ ಸಂಕೀರ್ಣವಾದ್ದರಿಂದ ಸಕಾಲದಲ್ಲಿ ಸರಕು ಸಾಗಣೆ ಸಾಧ್ಯವಾಗುತ್ತಿಲ್ಲ. ಅಲ್ಲದೆ ಜಲ ಸಾರಿಗೆಗೆ ಉತ್ತೇಜನ ನೀಡುತ್ತಿರುವ ಕೇಂದ್ರ ಸರಕಾರ, ಬಂದರುಗಳ ಅಭಿವೃದ್ಧಿಗೆ 14 ಲಕ್ಷ ಕೋಟಿ ರೂ. ಯೋಜನೆಯಾದ ಸಾಗರಮಾಲಾಗೆ ಹೆಚ್ಚಿನ ಒತ್ತು ನೀಡಿದೆ. ರಸ್ತೆ, ರೈಲು ಮಾರ್ಗದಲ್ಲಿನ ಸರಕು ಸಾಗಣೆಗೆ ಹೋಲಿಸಿದರೆ, ಜಲ ಮಾರ್ಗ ದಲ್ಲಿ ಸರಕು ಸಾಗಣೆಯ ವೆಚ್ಚ ಕಡಿಮೆ ಇದೆ. ಇದು ರೈತರಿಗೆ ನೆರವಾಗಲಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಇದು ದಕ್ಷಿಣ ಭಾರತದ ಜವುಳಿ ಉದ್ಯಮಕ್ಕೆ ಅನುಕೂಲವಾಗಲಿದ್ದು, ಸದ್ಯ ಗುಜರಾತ್‌ನಿಂದ ರಸ್ತೆ ಮೂಲಕ ಹತ್ತಿ ಸಾಗಿಸಲಾಗುತ್ತದೆ. ಇದರ ವೆಚ್ಚ ಹೆಚ್ಚಿರುವು ದರಿಂದಾಗಿ ಹಲವು ಬಾರಿ ತಾಂಜಾನಿ ಯಾದಿಂದ ಜಲ ಮಾರ್ಗದ ಮೂಲಕ ಆಮದು ಮಾಡಿ ಕೊಳ್ಳಲಾಗುತ್ತದೆ. ಗುಜರಾ ತ್‌ನಿಂದ ಜಲ ಸಾರಿಗೆ ಮೂಲಕ ಹತ್ತಿ ಸಾಗಿಸಿದರೆ ವೆಚ್ಚ ಇನ್ನೂ ಕಡಿಮೆಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.