ನ್ಯಾ| ಜೋಸೆಫ್ ನೇಮಕ ತಡೆಗೆ ಆಕ್ಷೇಪ
Team Udayavani, Apr 27, 2018, 6:00 AM IST
ಹೊಸದಿಲ್ಲಿ: ನ್ಯಾಯಾಂಗ ನೇಮಕ ವಿಚಾರ ಮತ್ತೂಮ್ಮೆ ಬಹಿರಂಗ ರಂಪಾಟಕ್ಕೆ ಕಾರಣವಾಗಿದೆ. ಸುಪ್ರೀಂ ನ್ಯಾಯಮೂರ್ತಿ ಹುದ್ದೆಗೆ ಉತ್ತರಾಖಂಡ ಹೈಕೋರ್ಟ್ ಮುಖ್ಯ ನ್ಯಾ| ಕೆ.ಎಂ. ಜೋಸೆಫ್ ಹೆಸರನ್ನು ತಿರಸ್ಕರಿಸಿರುವ ಕೇಂದ್ರ ಸರಕಾರವು ಪುನರ್‌ಪರಿಶೀಲನೆ ಮಾಡುವಂತೆ ಕೊಲೀಜಿಯಂಗೆ ಮನವಿ ಮಾಡಿದೆ.
ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ಪ್ರತಿಕ್ರಿಯೆ ನೀಡಿದ್ದು, ಸರಕಾರವು ನಿಯಮಕ್ಕೆ ಅನುಗುಣವಾಗಿಯೇ ನ್ಯಾ|ಜೋಸೆಫ್ ಹೆಸರನ್ನು ಮರು ಪರಿಶೀಲಿಸುವಂತೆ ಕೋರಿದೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ವಿವಾದ ಇತ್ಯರ್ಥ ಆಗುವವರೆಗೆ ನ್ಯಾ| ಇಂದು ಮಲ್ಹೋತ್ರಾ ನೇಮಕಕ್ಕೆ ತಡೆ ತರಬೇಕು ಎಂಬ ಕೆಲವರ ಕೋರಿಕೆಯನ್ನು ಒಪ್ಪಲಾಗದು ಎಂದೂ ಸಿಜೆಐ ಹೇಳಿದ್ದಾರೆ.
ಈ ಬೆಳವಣಿಗೆ ಕೇಂದ್ರ ಹಾಗೂ ವಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಸುಪ್ರೀಂ ನ್ಯಾಯಮೂರ್ತಿಯಾಗಿ ನ್ಯಾ| ಇಂದು ಮಲ್ಹೋತ್ರಾ ಹೆಸರನ್ನು ಅಂತಿಮಗೊಳಿಸಿದ್ದ ಕೇಂದ್ರ ಸರಕಾರ, ನ್ಯಾ| ಕೆ.ಎಂ. ಜೋಸೆಫ್ ಹೆಸರನ್ನು ಅಂತಿಮಗೊಳಿಸದೆ ವಾಪಸ್ ಕಳುಹಿಸಿದೆ. ಈ ಕುರಿತಂತೆ ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಸಿಜೆಐಗೆ ಗುರುವಾರ 6
ಪುಟಗಳ ಪತ್ರ ಬರೆದಿದ್ದಾರೆ. ಅವರಿಗಿಂತ ಹಿರಿಯ ನ್ಯಾಯಮೂರ್ತಿಗಳು ಇರುವಾಗ ಕೊಲೀಜಿಯಂ ಶಿಫಾರಸು ಸಮಂಜಸ ವಲ್ಲ. ಈ ಬಗ್ಗೆ ಕಾರಣ ಕೊಡಬೇಕು ಎಂದಿದೆ.
ಕಾಂಗ್ರೆಸ್ ಆಕ್ಷೇಪ
ಕಾಂಗ್ರೆಸ್ ನಾಯಕ, ಹಿರಿಯ ವಕೀಲ ಕಪಿಲ್ ಸಿಬಲ್ ಮಾತನಾಡಿ, ನ್ಯಾಯಾಂಗದ ಸ್ವಾತಂತ್ರ್ಯವೇ ಅಪಾಯದಲ್ಲಿದೆ ಎಂದು ಟೀಕಿಸಿದ್ದಾರೆ. ನಮ್ಮ ನ್ಯಾಯಾಂಗ ಒಟ್ಟಾಗಿ ನಿಲ್ಲದೇ ಇದ್ದರೆ ಪ್ರಜಾ ಪ್ರಭುತ್ವಕ್ಕೇ ಅಪಾಯ ಬಂದೀತು ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್ ತರಾಟೆ
Rajasthan:ಪೊಲೀಸ್ ಭದ್ರತೆಗೆ ಆದ 9 ಲಕ್ಷ ರೂ.ಬಿಲ್ ಪಾವತಿಸಿ: ರಾಜಸ್ಥಾನ ರೈತನಿಗೆ ನೋಟಿಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ
New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ
Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ
Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ
Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.