![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Oct 17, 2021, 6:30 AM IST
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿರುವ ರಾಷ್ಟ್ರೀಯ ವಸ್ತು ಸಂಗ್ರಹಾಲಯದಲ್ಲಿರುವ ಸುಮಾರು 1.95 ಲಕ್ಷ ಪುರಾತನ ವಸ್ತುಗಳನ್ನು ಜಾಗರೂಕವಾಗಿ ಸಂರಕ್ಷಿಸುವಂಥ ವಿಶ್ವದರ್ಜೆಯ ತಂತ್ರಜ್ಞಾನವೊಂದನ್ನು ಅಳವಡಿಸಲು ಕೇಂದ್ರ ಸರ್ಕಾರ ಯೋಜಿಸಿದೆ.
ಹೊಸದಾಗಿ ನಿರ್ಮಾಣವಾಗಲಿರುವ “ನ್ಯೂ ನ್ಯಾಷನಲ್ ಮ್ಯೂಸಿಯಂ ಆಫ್ ಇಂಡಿಯಾ’ದಲ್ಲಿ ಈ ವಿಶೇಷತೆಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ.
ಸ್ಥಳಾಂತರ ಏಕೆ?
ನವ ಸಂಸತ್ ಭವನ, ನೂತನ ಶಕ್ತಿಕೇಂದ್ರ, ಉಪರಾಷ್ಟ್ರಪತಿ ಹಾಗೂ ಪ್ರಧಾನಿಗೆ ನೂತನ ನಿವಾಸ ನಿರ್ಮಾಣ ಸೇರಿದಂತೆ ಬಹುದ್ದೇಶದ “ಸೆಂಟ್ರಲ್ ವಿಸ್ತಾ ಯೋಜನೆ’ಯ ಕಾಮಗಾರಿ ಪ್ರಗತಿಯಲ್ಲಿದೆ. ಈ ಯೋಜನೆ ರಾಷ್ಟ್ರಪತಿ ಭವನದಿಂದ ಜನಪಥ್‌ವರೆಗಿನ ಸುಮಾರು 3 ಕಿ.ಮೀ. ವ್ಯಾಪ್ತಿಯಲ್ಲಿ ಹರಡಿರುವುದರಿಂದ ಜನಪಥ್‌ನಲ್ಲೇ ಇರುವ ರಾಷ್ಟ್ರೀಯ ವಸ್ತುಸಂಗ್ರಹಾಲಯವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಎಲ್ಲಿಗೆ ಸ್ಥಳಾಂತರ?:
ಯೋಜನೆಯ ನೀಲನಕ್ಷೆಯ ಅನುಸಾರ, ಈಗಿರುವ ಸಂಸತ್ ಭವನದ ನೌರ್ತ್ ಮತ್ತು ಸೌತ್ ಬ್ಲಾಕ್‌ಗಳ ನಡುವಿನ 5 ಲಕ್ಷ ಚದುರಡಿ ವಿಸ್ತೀರ್ಣದ ಜಾಗದಲ್ಲಿ ಹೊಸ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಇದನ್ನೂ ಓದಿ:ಮಾಜಿ ಪಿಎಂ ಮನಮೋಹನ ಸಿಂಗ್‌ಗೆ ಡೆಂಗ್ಯೂ,ಆರೋಗ್ಯ ಸ್ಥಿರ
ಹೊಸ ಸಂಗ್ರಹಾಲಯದ ವಿಶೇಷತೆ
– ಈಗಿರುವ 2 ಲಕ್ಷ ಚದುರಡಿ ವಿಸ್ತೀರ್ಣವಿರುವ ವಸ್ತುಸಂಗ್ರಹಾಲಯ ಮುಂದೆ 5 ಲಕ್ಷ ಚದುರಡಿ ವಿಸ್ತೀರ್ಣದ ಕಟ್ಟಡಕ್ಕೆ ಸ್ಥಳಾಂತರ.
– ಮುಂದಿನ ನೂರು ವರ್ಷಗಳಲ್ಲಿ ಸಂಗ್ರಹಿಸಲಾಗುವ ಪುರಾತನ ಅಥವಾ ಚಾರಿತ್ರಿಕವಾಗಿ ಮಹತ್ವವೆನಿಸುವ ವಸ್ತುಗಳಿಗೂ ಸ್ಥಳಾವಕಾಶ
– ಜರ್ಮನಿ, ಫ್ರಾನ್ಸ್, ನೆದರ್ಲೆಂಡ್ ಸೇರಿದಂತೆ ಹಲವು ಮುಂದುವರಿದ ದೇಶಗಳಲ್ಲಿರುವಂಥ ಕೇಂದ್ರೀಕೃತ ಸಂಗ್ರಹಾಗಾರ ತಂತ್ರಜ್ಞಾನ ಅಳವಡಿಕೆ
– ಹೊಸ ಸಂಗ್ರಹಾಲಯದಲ್ಲಿ ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ದ ಆರ್ಟ್ಸ್ ಹಾಗೂ ನ್ಯಾಷನಲ್ ಆಕೈವ್ಸ್‌ನಲ್ಲಿನ ವಸ್ತುಗಳು, ಪುಸ್ತಕಗಳೂ ಹೊಸ ಸಂಗ್ರಹಾಲಯಕ್ಕೆ ಸೇರುವ ಸಾಧ್ಯತೆ.
1.96 ಲಕ್ಷ – ಈಗಿನ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಇರುವ ಪುರಾತನ ವಸ್ತುಗಳು
2 ಲಕ್ಷ ಚದರಡಿ – ಈಗಿರುವ ವಸ್ತುಸಂಗ್ರಹಾಲಯದ ವಿಸ್ತೀರ್ಣ
5 ಲಕ್ಷ ಚದರಡಿ – ಹೊಸ ವಸ್ತುಸಂಗ್ರಹಾಲಯದಲ್ಲಿ ಇರುವ ಸ್ಥಳಾವಕಾಶ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.