ಉಚಿತ ಗರ್ಭನಿರೋಧಕ ಇಂಜೆಕ್ಷನ್
Team Udayavani, Jul 12, 2017, 2:30 AM IST
ಮುಂಬಯಿ: ಮಹಿಳೆಯರು ಗರ್ಭನಿರೋಧಕ ಇಂಜೆಕ್ಷನ್ ರೂಪದಲ್ಲಿ ಬಳಸುವ ಎಂಪಿಎ (ಮೆಡ್ರಾಸ್ಕಿ ಪ್ರೊಜೆಸ್ಟರನ್ ಅಸಿಟೇಟ್) ಇಂಜೆಕ್ಷನ್ ಇನ್ನು ಸರಕಾರಿ ಆಸ್ಪತ್ರೆಗಳಲ್ಲೂ ದೊರೆಯಲಿದೆ. ಮಹಾರಾಷ್ಟ್ರ ಸರಕಾರವು ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆ ಮತ್ತು ಮಹಿಳಾ ಆಸ್ಪತ್ರೆಗಳಲ್ಲಿ ಈ ಇಂಜೆಕ್ಷನ್ ಅನ್ನು ಉಚಿತವಾಗಿ ನೀಡಲಿದೆ. ಈ ಮೂಲಕ ಮಹಾರಾಷ್ಟ್ರ ಮಹಿಳೆಯರಿಗೆ ಉಚಿತವಾಗಿ ಎಂಪಿಎ ಇಂಜೆಕ್ಷನ್ ಒದಗಿಸುವ ದೇಶದ ಮೊದಲ ರಾಜ್ಯವಾಗಿ ಮಾರ್ಪಟ್ಟಿದೆ.
ವಿಶ್ವ ಜನಸಂಖ್ಯಾ ದಿನಾಚರಣೆಯ ಒಂದು ದಿನ ಮೊದಲು ಅಂದರೆ ಸೋಮವಾರ ರಾಜ್ಯದಲ್ಲಿ ಅಂತರಾ ಯೋಜನೆ ಅಡಿಯಲ್ಲಿ ಎಂಪಿಎ ಇಂಜೆಕ್ಷನ್ ಯೋಜನೆಗೆ ಚಾಲನೆ ನೀಡಲಾಯಿತು. ಈ ಸಂದರ್ಭ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ| ದೀಪಕ್ ಸಾವಂತ್ ಅವರೂ ಉಪಸ್ಥಿತರಿದ್ದರು. ಸದ್ಯಕ್ಕೆ ಮುಂಬಯಿ, ಪುಣೆ, ರಾಯಗಡ್, ರತ್ನಗಿರಿ, ಔರಂಗಾಬಾದ್, ಅಹ್ಮದ್‌ನಗರ, ಬೀಡ್, ನಂದೂರ್‌ಬಾರ್, ಕೊಲ್ಲಾಪುರ ಜಿಲ್ಲೆ ಯಲ್ಲಿ ಎಂಪಿಎ ಇಂಜೆಕ್ಷನ್ ಉಪಲಬ್ಧವಿದ್ದು, ಉಳಿದಿರುವ ಜಿಲ್ಲೆಗಳಿಗೆ 8 ದಿನಗಳಲ್ಲಿ ಇಂಜೆಕ್ಷನ್ ಪೂರೈಸಲಾಗುವುದು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಪ್ರಸ್ತುತ ರಾಜ್ಯಾದ್ಯಂತ 33,000 ಎಂಪಿಎ ಇಂಜೆಕ್ಷನ್‌ಗಳ ದಾಸ್ತಾನು ಇದೆ. ಮಹಿಳೆಯರು ಒಮ್ಮೆ ಎಂಪಿಎ ಇಂಜೆಕ್ಷನ್ ಬಳಸಿದರೆ, ಅದು ಮುಂದಿನ 3 ತಿಂಗಳವರೆಗೆ ಪರಿಣಾಮಕಾರಿಯಾಗಿರುತ್ತದೆ. ಇದು ಮಹಿಳೆಯರಿಗೆ ಗರ್ಭ ನಿರೋಧಕ ಔಷಧಗಳಿಂದ ಮುಕ್ತಿ ನೀಡಲಿದೆ. ಬಾಣಂತಿ ಮಹಿಳೆಯರಿಗೂ ಇದು ಮಹತ್ವವಾದುದೆಂದು ಪರಿಗಣಿಸಲಾಗುತ್ತದೆ. ವಿಶ್ವಾದ್ಯಂತ 130 ದೇಶಗಳಲ್ಲಿ ಇದರ ಬಳಕೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
Jammu and Kashmir: ಕಮರಿಗೆ ಬಿದ್ದ ವಾಹನ; ಕನಿಷ್ಠ ನಾಲ್ವರು ಸಾವು
Vavar Mosque: ಶಬರಿಮಲೆ ಯಾತ್ರಿಗಳು ವಾವರ ಮಸೀದಿಗೆ ಹೋಗಬಾರದು: ಬಿಜೆಪಿ ಶಾಸಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.