ಪ್ರವೇಶಕ್ಕೆ ಮುಖವೇ ಗುರುತು
Team Udayavani, Oct 5, 2018, 8:35 AM IST
ನವದೆಹಲಿ: ಇನ್ನು ಮುಂದೆ ವಿಮಾನ ನಿಲ್ದಾಣಗಳಲ್ಲಿ ಬೋರ್ಡಿಂಗ್ ಪಾಸ್ ಅನ್ನು ಪ್ರತ್ಯೇಕವಾಗಿ ಪಡೆಯಬೇಕಾಗಿಲ್ಲ. ಪ್ರಯಾಣಿಕರ ಮುಖವೇ ಗುರುತಿನ ವ್ಯವಸ್ಥೆಯಾಗಿ ಬದಲಾಗಲಿದೆ. ಬೆಂಗಳೂರು, ಹೈದರಾಬಾದ್ ಏರ್ಪೋರ್ಟ್ಗಳಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಗೆ ಸಿದ್ಧತೆ ಪೂರ್ಣಗೊಂಡಿದೆ. 2019ರ ಫೆಬ್ರವರಿ ವೇಳೆಗೆ ಈ ಯೋಜನೆ ಜಾರಿಯಾಗುವ ನಿರೀಕ್ಷೆಯಿದೆ. ಕೇಂದ್ರ ಸರ್ಕಾರದ ‘ಡಿಜಿ ಯಾತ್ರಾ’ ಅಡಿಯಲ್ಲಿ ಜಾರಿಗೊಳಿಸಲಿರುವ ಯೋಜನೆ ಇದಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಗುರುವಾರ ತಿಳಿಸಿದ್ದಾರೆ. ಶೀಘ್ರ ಇದು ಅನುಷ್ಠಾನಗೊಳ್ಳಲಿದ್ದು, ಇದೊಂದು ಬಯೋಮೆಟ್ರಿಕ್ ಆಧಾರಿತ ಡಿಜಿಟಲ್ ವ್ಯವಸ್ಥೆಯಾಗಿದೆ. ಅದರ ಮೂಲಕ ವಿಮಾನ ನಿಲ್ದಾಣದ ಒಳಕ್ಕೆ ಪ್ರವೇಶಿಸಬಹುದು ಎಂದು ತಿಳಿಸಿದ್ದಾರೆ. ಕೋಲ್ಕತಾ, ವಾರಾಣಸಿ, ಪುಣೆ ಮತ್ತು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಮುಂದಿನ ವರ್ಷದ ಏಪ್ರಿಲ್ನಲ್ಲಿ ಯೋಜನೆ ಜಾರಿ ಮಾಡಲು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಮುಂದಾಗಿದೆ ಎಂದು ಸುರೇಶ್ ಪ್ರಭು ಹೇಳಿದ್ದಾರೆ.
ಡಿಜಿ ಯಾತ್ರಾದಲ್ಲಿ ಕೇಂದ್ರೀಕೃತ ನೋಂದಣಿ ವ್ಯವಸ್ಥೆ ಇರುತ್ತದೆ. ಅದರಿಂದಾಗಿ ಪ್ರಯಾಣಿಕರಿಗೆ ವಿಶೇಷ ಐಡಿ ನೀಡಲಾ ಗುತ್ತದೆ. ಅದನ್ನು ಟಿಕೆಟ್ ಕಾಯ್ದಿರಿಸುವ ವೇಳೆ ನೀಡಲಾಗುತ್ತದೆ. ಆಧಾರ್, ಇ-ಮೇಲ್, ಹೆಸರು, ಅಥವಾ ಮೊಬೈಲ್ ನಂಬರ್ ನೀಡುವ ಮೂಲಕ ವಿಶೇಷ ಐಡಿಯನ್ನು ರಚಿಸಲು ಸಾಧ್ಯವಿದೆ. ಮೊದಲ ಬಾರಿಗೆ ಈ ಐಡಿ ಬಳಸಿ ಪ್ರಯಾಣಿಸುವುದಿದ್ದರೆ ಏರ್ಪೋರ್ಟ್ನಲ್ಲಿ ಒನ್-ಟೈಮ್ ವೆರಿಫಿಕೇಷನ್ ಮಾಡಲಾಗುತ್ತದೆ. ನಂತರ, ಮುಖ ಗುರುತು ಬಯೋಮೆಟ್ರಿಕ್ ಮಾಹಿತಿಯು ‘ಡಿಜಿ ಯಾತ್ರಾ ಐಡಿ’ಯಲ್ಲಿ ಸ್ಟೋರ್ ಆಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.