ಮುಂದೆ ವಿನಾಯಿತಿ ರಹಿತ ತೆರಿಗೆ ವ್ಯವಸ್ಥೆ ಖಚಿತ
Team Udayavani, Feb 3, 2023, 7:10 AM IST
ಹೊಸದಿಲ್ಲಿ: “ಮುಂದಿನ ದಿನಗಳಲ್ಲಿ ವಿನಾಯಿತಿ ರಹಿತ ಆದಾಯ ತೆರಿಗೆ ವ್ಯವಸ್ಥೆ ಇರಬೇಕು ಎನ್ನುವುದನ್ನು ಸರಕಾರ ಬಯಸುತ್ತಿದೆ. ಜತೆಗೆ ತೆರಿಗೆಯ ಪ್ರಮಾಣವೂ ಕಡಿಮೆ ಮಟ್ಟದಲ್ಲಿಯೇ ಇರಬೇಕು’
– ಹೀಗೆಂದು ಹೇಳಿದ್ದು ಕೇಂದ್ರ ಕಂದಾಯ ಕಾರ್ಯದರ್ಶಿ ಸಂಜಯ ಮಲ್ಹೋತ್ರಾ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ನಿಧಾನವಾಗಿ ವಿನಾಯಿತಿ ರಹಿತ ತೆರಿಗೆ ವ್ಯವಸ್ಥೆ ಇರಲಿದೆ ಎಂಬುದನ್ನೂ ಸೂಚ್ಯವಾಗಿ ಹೇಳಿದ್ದಾರೆ. ಕೇಂದ್ರ ಸರಕಾರದ ಮುಂದೆ ಅದನ್ನು ಜಾರಿಗೊಳಿಸುವುದರ ಬಗ್ಗೆ ನಿಗದಿತ ಸಮಯದ ಮಿತಿ ಇಲ್ಲ ಎಂದರು.
ಹೊಸ ತೆರಿಗೆ ವ್ಯವಸ್ಥೆಯ ಅನ್ವಯ ವಾರ್ಷಿಕವಾಗಿ 7 ಲಕ್ಷ ರೂ. ವರೆಗೆ ಆದಾಯ ಇರುವವರಿಗೆ ತೆರಿಗೆ ಪಾವತಿ ಮಾಡಬೇಕಾದ ಅಗತ್ಯ ಇಲ್ಲ. ಜತೆಗೆ ಸ್ಟಾಂಡರ್ಡ್ ಡಿಡಕ್ಷನ್ 50 ಸಾವಿರ ರೂ. ಅನ್ನು ಕ್ಲೇಮು ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಮಲ್ಹೋತ್ರಾ ಹೇಳಿದ್ದಾರೆ. ಇದುವರೆಗೆ ಹಳೆಯ ತೆರಿಗೆ ವ್ಯವಸ್ಥೆಯಲ್ಲಿ ಮಾತ್ರ ಸ್ಟಾಂಡರ್ಡ್ ಡಿಡಕ್ಷನ್ ಇತ್ತು.
ಅನುಕೂಲ: ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಹೊಸ ತೆರಿಗೆ ಪದ್ಧತಿ ತೆರಿಗೆ ಪಾವತಿದಾರರಿಗೆ ಅನುಕೂಲವಾ ಗಲಿದೆ. ಇದರಿಂದ ಹೆಚ್ಚಿನ ಉಳಿತಾಯ ಉಂಟಾಗಲಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಅಧ್ಯಕ್ಷ ನಿತಿನ್ ಗುಪ್ತಾ ಹೇಳಿದ್ದಾರೆ.
ತೆರಿಗೆದಾರರಿಗೆ ಇದೆ ಸ್ವಾತಂತ್ರ್ಯ: ತೆರಿಗೆದಾರರು ಹೊಸತು ಮತ್ತು ಹಳೆಯ ತೆರಿಗೆ ವ್ಯವಸ್ಥೆ ಆಯ್ದುಕೊಳ್ಳುವ ಬಗ್ಗೆ ಅವರಿಗೆ ಸ್ವಾತಂತ್ರ್ಯ ಇದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಬಜೆಟ್ ಮಂಡನೆ ವೇಳೆ ಹೊಸ ತೆರಿಗೆ ಪದ್ಧತಿಯೇ ಡಿಫಾಲ್ಟ್ ಆಗಿ ಅನುಷ್ಠಾನಗೊಳ್ಳಲಿದೆ ಎಂದು ಹೇಳಿದ್ದಕ್ಕೆ ಗುಪ್ತಾ ಈ ಮಾತು ಗಳನ್ನಾಡಿದ್ದಾರೆ. ಇ-ಫೈಲಿಂಗ್ ಮಾಡುವ ವೇಳೆ ಸ್ಕ್ರೀನ್‌ನಲ್ಲಿ ಅದು ಪ್ರಧಾನವಾಗುತ್ತದೆ. ಹಾಗೆಂದು ಅಲ್ಲಿ ಹಳೆಯ ವ್ಯವಸ್ಥೆಯೂ ಇರಲಿದೆ ಎಂದಿದ್ದಾರೆ.
ಸ್ಟಾಂಡರ್ಡ್ ಡಿಡಕ್ಷನ್ ಇದೆ: 7 ಲಕ್ಷ ರೂ. ವರೆಗೆ ತೆರಿಗೆ ವ್ಯಾಪ್ತಿ ವಿಸ್ತರಣೆ ಮಾಡುವ ವೇಳೆ ಬಜೆಟ್‌ನಲ್ಲಿ ಸ್ಟಾಂಡರ್ಡ್ ಡಿಡಕ್ಷನ್ 50 ಸಾವಿರ ರೂ. ಅನ್ನೂ ಸೇರಿಸಲಾಗಿದೆ. ಹೀಗಾಗಿ ತೆರಿಗೆ ವ್ಯಾಪ್ತಿ ಮೌಲ್ಯ ಒಟ್ಟು 7,50 ಲಕ್ಷ ರೂ. ಆಗಲಿದೆ.
ವಿಶ್ವ ಸ್ವಾಗತಿಸಬೇಕು; ಜೈಶಂಕರ್:
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2023-24ನೇ ಸಾಲಿನ ಬಜೆಟ್ ಅನ್ನು ವಿಶ್ವವು ಸ್ವಾಗತಿಸಬೇಕು ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ಬಂಡವಾಳ ಹೂಡಿಕೆ ವೆಚ್ಚವು ಶೇ.33ರಷ್ಟು ಅಂದರೆ 10 ಲಕ್ಷ ಕೋಟಿ ರೂ. ಆಗಿದೆ ಎಂದರು.
ವಿದೇಶಾಂಗಕ್ಕೆ 18,050 ಕೋಟಿ :
2023-24ನೇ ಬಜೆಟ್‌ನಲ್ಲಿ ವಿದೇ ಶಾಂಗ ಸಚಿವಾಲಯಕ್ಕೆ 18,050 ಕೋಟಿ ರೂ. ಮೀಸಲಾಗಿ ಇರಿಸ ಲಾಗಿದೆ. 2022-23ನೇ ಸಾಲಿನಲ್ಲಿ 17,250 ಕೋಟಿ ರೂ. ನೀಡಲಾ ಗಿತ್ತು. ಭಾರತ ಪ್ರಸಕ್ತ ಸಾಲಿನಲ್ಲಿ ಜಿ20 ರಾಷ್ಟ್ರಗಳ ಅಧ್ಯಕ್ಷತೆಯನ್ನೂ ಹೊಂದಿರುವುದರಿಂದ ಆ ನಿಟ್ಟಿ ನಲ್ಲಿ ಖರ್ಚು ವೆಚ್ಚಕ್ಕಾಗಿ 990 ಕೋಟಿ ರೂ. ನೀಡಲಾಗಿದೆ. ವಿವಿಧ ದೇಶಗಳಿಗೆ ಅಭಿವೃದ್ಧಿಯ ನೆರವು ನೀಡುವ ನಿಟ್ಟಿನಲ್ಲಿ 5,408 ಕೋಟಿ ರೂ. ನೀಡಲಾಗಿದೆ. ಈ ಪೈಕಿ ಭೂತಾನ್‌ಗೆ 2,400 ಕೋಟಿ ರೂ., ಅಫ್ಘಾನಿಸ್ಥಾನಕ್ಕೆ 200 ಕೋಟಿ ರೂ. ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Supreme Court: ಬಹುಸಂಖ್ಯಾತರಂತೆ ದೇಶ ನಡೀಬೇಕು ಎಂದಿದ್ದ ಜಡ್ಜ್ಗೆ ಕೊಲಿಜಿಯಂ ಛೀಮಾರಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.