ಕೆಸರೆರೆಚುವವರಿಗೆ ಋಣಿ; ಕಮಲ ಅರಳುವುದೇ ಕೆಸರಲ್ಲಿ: ಪ್ರಧಾನಿ ಮೋದಿ
Team Udayavani, Nov 27, 2017, 12:08 PM IST
ಅಹ್ಮದಾಬಾದ್ : ವಿಧಾನಸಭಾ ಚುನಾವಣೆಯತ್ತ ಧಾವಿಸುತ್ತಿರುವ ಗುಜರಾತ್‌ನ ಭುಜ್‌ನಲ್ಲಿ ಇಂದು ಸೋಮವಾರ ಬೃಹತ್ ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಮ್ಮ ಮೇಲೆ ಕೆಸರೆರೆಚಿದವರಿಗೆ ನಾನು ಋಣಿ; ಏಕೆಂದರೆ ಕಮಲ ಅರಳುವುದೇ ಕೆಸರಿನಲ್ಲಿ’ ಎಂದು ಮಾರ್ಮಿಕವಾಗಿ ನುಡಿದರು.
“ಇಷ್ಟೊಂದು ದೊಡ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ನೆರೆದಿರುವ ಕಚ್‌ನ ಜನರಿಗೆ ನಾನು ಆಭಾರಿಯಾಗಿದ್ದೇನೆ; ನೀವು ತೋರಿರುವ ಪ್ರೀತಿ, ವಿಶ್ವಾಸ, ಅಭಿಮಾನಕ್ಕೆ ನಾನು ಚಿರ ಋಣಿಯಾಗಿದ್ದೇನೆ’ ಎಂದು ಮೋದಿ ಹೇಳಿದರು.
“ಜನರೊಂದಿಗೆ ಸಂವಾದದಲ್ಲಿ ತೊಡಗುವುದೆಂದರೆ ನನಗೆ ಪಂಚಪ್ರಾಣ; ಅದರಿಂದ ಸಿಗುವ ಆನಂದ, ಸಂತೋಷ ವರ್ಣನಾತೀತ; ನನ್ನ ಬದುಕಿನ ಪ್ರತೀಯೊಂದು ಕ್ಷಣವೂ ದೇಶದ 125 ಕೋಟಿ ಭಾರತೀಯರ ಕಲ್ಯಾಣಕ್ಕೆ ಮೀಸಲಾಗಿದೆ’ ಎಂದು ಮೋದಿ ಕಿವಿಗಡಚಿಕ್ಕುವ ಕರತಾಡತನದ ನಡುವೆ ಘೋಷಿಸಿದರು.
ಮೋದಿ ಅವರಿಂದ ಇನ್ನೂ ಮೂರು ಸಾರ್ವಜನಿಕ ಭಾಷಣ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ; ಜಸ್‌ದನ್, ಧರೀ, ಮತ್ತು ಕಾಮ್‌ರೇಜ್‌ನಲ್ಲಿ ಈ ರಾಲಿಗಳು ನಡೆಯಲಿವೆ.
ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಾಗರದೋಪಾದಿಯಲ್ಲಿ ನೆರೆದಿರುವ ಜನರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಬೇಕು ಎಂದು ಮೋದಿ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Successful: ರಾಜ್ಯದ 4,873 ಗ್ರಾಮಗಳು ಬಯಲು ಶೌಚ ಮುಕ್ತ: ಕೇಂದ್ರದ ಮೆಚ್ಚುಗೆ
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
MUST WATCH
ಹೊಸ ಸೇರ್ಪಡೆ
Pritish Nandy: ಖ್ಯಾತ ಕವಿ, ಚಲನಚಿತ್ರ ನಿರ್ಮಾಪಕ ಪ್ರಿತೀಶ್ ನಂದಿ ನಿಧನ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.