ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
Team Udayavani, Apr 24, 2024, 2:58 PM IST
ರಾಜಸ್ಥಾನ: ಇನ್ನೇನು ಕೆಲವೇ ಗಂಟೆಯಲ್ಲಿ ಹಸೆಮಣೆ ಏರಬೇಕಿದ್ದ ವರನೋರ್ವ ಮದುವೆಯ ಮೊದಲ ಶಾಸ್ತ್ರ ನಡೆಯುವ ವೇಳೆ ವಿದ್ಯುತ್ ಸ್ಪರ್ಶಿಸಿ ಇಹಲೋಕ ತ್ಯಜಿಸಿದ ಆಘಾತಕಾರಿ ಘಟನೆ ರಾಜಸ್ಥಾನದ ಕೋಟಾ ನಗರದ ನಂಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಮೂಲತಃ ಕೋಟಾ ನಗರದ ಕೇಶವಪುರ ನಿವಾಸಿಯಾದ ಸೂರಜ್ ಸಕ್ಸೇನಾ (30) ಎಂದು ಗುರುತಿಸಲಾಗಿದೆ.
ಏನಿದು ಪ್ರಕರಣ:
ಕೋಟಾ ನಗರದ ಕೇಶವಪುರ ನಿವಾಸಿಯಾದ ಸೂರಜ್ ಸಕ್ಸೇನಾ ಅವರ ವಿವಾಹ ಏಪ್ರಿಲ್ 24 ರಂದು ಮದುವೆ ನಿಶ್ಚಯವಾಗಿತ್ತು ಅದರಂತೆ ಬುಧವಾರ ಬಂಡಿ ರಸ್ತೆಯಲ್ಲಿರುವ ಮೆನಾಲ್ ರೆಸಿಡೆನ್ಸಿ ರೆಸಾರ್ಟ್‌ನಲ್ಲಿ ವಿವಾಹ ಸಮಾರಂಭ ಆಯೋಜಿಸಲಾಗಿತ್ತು, ಈ ಶುಭ ಕಾರ್ಯಕ್ರಮಕ್ಕೆ ಎಲ್ಲ ಸಿದ್ದತೆಗಳು ನಡೆದಿತ್ತು ಅದರಂತೆ ಸೋಮವಾರ ಮದುವೆಯ ಮೊದಲ ಶಾಸ್ತ್ರವಾದ ಹಳದಿ ಶಾಸ್ತ್ರ ನಡೆಯುತ್ತಿತ್ತು ಈ ವೇಳೆ ಹಳದಿ ಸಂಭ್ರಮದಲ್ಲಿದ್ದ ವರ ಅಲ್ಲೇ ಇದ್ದ ಈಜುಕೊಳದ ಬಳಿ ನಡೆದುಕೊಂಡು ಹೋಗಿದ್ದಾನೆ ಅಲ್ಲಿ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಿದ್ದ ಕಬ್ಬಿಣದ ಕಂಬವನ್ನು ಮುಟ್ಟಿದ್ದಾನೆ ಈ ವೇಳೆ ಆತನಿಗೆ ಒಮ್ಮೆಲೇ ವಿದ್ಯುತ್ ಶಾಕ್ ಹೊಡೆದು ಕುಸಿದು ಬಿದ್ದಿದ್ದಾನೆ ಇದನ್ನು ಕಂಡ ಅಲ್ಲಿದ್ದವರು ಓಡಿ ಬಂದು ಸೂರಜ್ ನನ್ನು ಉಪಚರಿಸಿದ್ದಾರೆ ಆದರೆ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಸೂರಜ್ ಪ್ರಜ್ಞೆ ತಪ್ಪಿದ್ದ ಕೂಡಲೇ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿತಾದರೂ ಅಷ್ಟೋತ್ತಿಗಾಗಲೇ ಸೂರಜ್ ಪ್ರಾಣ ಪಕ್ಷಿ ಹಾರಿಹೋಗಿತ್ತು,
ಇತ್ತ ಸೂರಜ್ ಮೃತಪಟ್ಟ ವಿಚಾರ ತಿಳಿಯುತ್ತಲೇ ಕುಟುಂಬದಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ ಅಷ್ಟು ಮಾತ್ರವಲ್ಲದೆ ವಧುವಿನ ಮನೆಯಲ್ಲೂ ನೀರವ ಮೌನ ಆವರಿಸಿದೆ,
ಮದುವೆಯ ಸಂಭ್ರಮದಲ್ಲಿದ್ದ ಎರಡೂ ಮನೆಯಲ್ಲೂ ನೀರವ ಮೌನ, ಬದುಕಿ ಬಾಳಬೇಕಿದ್ದ ಜೀವ ಸಣ್ಣ ವಯಸ್ಸಿನಲ್ಲೇ ಕೊನೆಗೊಂಡಿದ್ದು ವಿಧಿಯ ವಿಪರ್ಯಾಸವೇ ಸರಿ.
ಘಟನೆ ಸಂಬಂಧ ನಂಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Remarks: ಕನಸಲ್ಲೂ ಅಂಬೇಡ್ಕರ್‌ರನ್ನು ಅವಮಾನಿಸಿಲ್ಲ: ಅಮಿತ್ ಶಾ
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.