![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Sep 19, 2023, 9:30 AM IST
ಮುಂಬಯಿ: ದೇಶದಲ್ಲಿಯೇ ಅತ್ಯಂತ ಶ್ರೀಮಂತ ಗಣಪತಿ ಎಂದು ಪ್ರಸಿದ್ಧಿಯನ್ನು ಪಡೆದಿರುವ ಇಲ್ಲಿನ ಕಿಂಗ್ ಸರ್ಕಲ್‌ನ ಜಿಎಸ್‌ಬಿ ಸೇವಾ ಮಂಡಲದ 69ನೇ ಗಣೇಶೋತ್ಸವದಲ್ಲಿ ಪೂಜಿತನಾಗುತ್ತಿರುವ ಗಣೇಶನ ವಿಗ್ರಹಕ್ಕೆ 66.5 ಕೆ.ಜಿ. ಚಿನ್ನ ಮತ್ತು 295 ಕೆ.ಜಿ.ಗೂ ಅಧಿಕ ಬೆಳ್ಳಿಯ ಆಭರಣಗಳಿಂದ ಶೃಂಗರಿಸಲಾಗುತ್ತಿದೆ.
ಪ್ರಸಕ್ತ ವರ್ಷ ಗಣೇಶನ ವಿಗ್ರಹ, ಚಿನ್ನ ಮತ್ತು ಬೆಳ್ಳಿ ಆಭರಣಗಳು, ಸೇವಾ ಮಂಡಲದ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು ಮತ್ತು ಭಕ್ತರಿಗೆ 360.40 ಕೋ. ರೂ.ಗಳ ವಿಮೆಯನ್ನು ಮಾಡಲಾಗಿದೆ. ಅಷ್ಟು ಮಾತ್ರವಲ್ಲದೆ ಸುರಕ್ಷ ಕ್ರಮವಾಗಿ ಫೇಶಿಯಲ್ ರೆಕಗ್ನಿಶನ್ ಕೆಮರಾಗಳನ್ನು ಅಳವಡಿಸಲಾಗಿದೆ. ಗಣಪತಿಗೆ ಸೇವೆ ಸಲ್ಲಿಸಲು ಭಕ್ತರಿಗೆ ಅನುಕೂಲವಾಗುವಂತೆ ಕ್ಯುಆರ್ ಕೋಡ್ ವ್ಯವಸ್ಥೆ ಮತ್ತು ಡಿಜಿಟಲ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಈ ಬಾರಿಯ ಗಣೇಶೋತ್ಸವದ ಸಂದರ್ಭದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮ ಮಂದಿರ ಮತ್ತು ಮುಂದಿನ ವರ್ಷದ ಜನವರಿಯಲ್ಲಿ ನಡೆಯಲಿರುವ ಮಂದಿರದ ಉದ್ಘಾಟನೆ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರುವಂತೆ ಪ್ರಾರ್ಥಿಸಿ ಗಣಪತಿಗೆ ವಿಶೇಷ ಹೋಮ, ಪೂಜಾರ್ಚನೆಗಳನ್ನು ನಡೆಸಲಾಗುವುದು ಎಂದು ಜಿಎಸ್‌ಬಿ ಸೇವಾ ಮಂಡಲ ತಿಳಿಸಿದೆ.
ಇದನ್ನೂ ಓದಿ: Khalistani ಉಗ್ರನ ಹತ್ಯೆ ಆರೋಪ: ಭಾರತದ ವಿರುದ್ಧ ಸೇಡು ತೀರಿಸಲು ಮುಂದಾದ ಕೆನಡಾ
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.