GST; ಎಲ್ಲ ಉದ್ದಿಮೆಗಳೂ ಶೀಘ್ರ ಜಿಎಸ್‌ಟಿ ವ್ಯಾಪ್ತಿಗೆ?
ಉದ್ದಿಮೆಗಳೂ ಔಪಚಾರಿಕ ಆರ್ಥಿಕತೆಯ ಭಾಗ ವಾಗಬೇಕು: ನಿರ್ಮಲಾ
Team Udayavani, Nov 8, 2023, 6:00 AM IST
ವಾಪಿ: ಸದ್ಯದಲ್ಲೇ ಎಲ್ಲ ರೀತಿಯ ಉದ್ದಿಮೆಗಳೂ ಜಿಎಸ್‌ಟಿ(ಸರಕು ಮತ್ತು ಸೇವಾ ತೆರಿಗೆ) ವ್ಯಾಪ್ತಿಗೆ ಬರಲಿದೆಯೇ? ಹೌದು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಇಂಥದ್ದೊಂದು ಸುಳಿವು ನೀಡಿದ್ದಾರೆ.
ಹಣಕಾಸು ಸಚಿವಾಲಯ ಕೇವಲ ಜಿಎಸ್‌ಟಿ ಆದಾ ಯ ಹೆಚ್ಚಿಸುವುದರ ಮೇಲೆ ಗಮನ ಕೇಂದ್ರೀಕರಿಸಿಲ್ಲ, ಅದರ ಜತೆಗೆ ಎಲ್ಲ ರೀತಿಯ ಉದ್ದಿಮೆ ಸಂಸ್ಥೆಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವುದು ಕೂಡ ನಮ್ಮ ಉದ್ದೇ ಶವಾಗಿದೆ ಎಂದು ಸಚಿವೆ ನಿರ್ಮಲಾ ಹೇಳಿದ್ದಾರೆ. ಗುಜರಾತ್‌ನಲ್ಲಿ 12 ಜಿಎಸ್‌ಟಿ ಸುವಿಧಾ ಕೇಂದ್ರಗಳ ಉದ್ಘಾಟನೆ ವೇಳೆ ಅವರು ಈ ಮಾತುಗಳನ್ನಾಡಿದ್ದಾರೆ.
ಜಿಎಸ್‌ಟಿ ಸಂಗ್ರಹವು ಪ್ರತೀ ತಿಂಗಳು, ಪ್ರತೀ ವರ್ಷ ಹೆಚ್ಚಾಗುತ್ತಿದೆ. ಜಿಎಸ್‌ಟಿಯಿಂದಾಗಿ ಹಲವು ಸರಕು ಗಳ ತೆರಿಗೆ ದರವು ಹಿಂದಿಗಿಂತಲೂ ಕಡಿಮೆಯಾಗಿದೆ. ಆದರೆ ಹಲವಾರು ಉದ್ದಿಮೆ ಸಂಸ್ಥೆಗಳು ಈಗಲೂ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಉಳಿದಿದ್ದು, ಔಪ ಚಾರಿಕ ಆರ್ಥಿಕತೆಯ ಭಾಗವಾಗಿಲ್ಲ. ಅಂಥ ಸಂಸ್ಥೆ ಗಳು ಏಕೆ ತೆರಿಗೆ ವ್ಯಾಪ್ತಿಗೆ ಬರಬಾರದು? ಆರ್ಥಿಕತೆ ಯಿಂದ ಹೊರಗುಳಿಯುವುದು ದೇಶಕ್ಕೂ ಒಳ್ಳೆಯ ದಲ್ಲ, ವ್ಯಕ್ತಿ ಗಳಿಗೂ ಒಳ್ಳೆಯದಲ್ಲ. ಹೀಗಾಗಿ ಎಲ್ಲ ಉದ್ದಿಮೆ ಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರುವತ್ತ ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.