ಮಧ್ಯಮ ಗಾತ್ರದ ಕಾರುಗಳು ದುಬಾರಿ
Team Udayavani, Aug 31, 2017, 7:15 AM IST
ಹೊಸದಿಲ್ಲಿ: ಕಾರು ಕೊಳ್ಳಬೇಕೆನ್ನುವ ಕನಸು ಕಾಣುತ್ತಿರುವವರಿಗೆ ಇದು ಕಹಿ ಸುದ್ದಿ! ಹೌದು, ಕಾರು ದುಬಾರಿಯಾ ಗಲಿದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಜಾರಿಯ ಬಳಿಕ ಇದೀಗ ಕೇಂದ್ರ ಸರಕಾರ ಶೇ. 25 ಸೆಸ್ ಹೇರಲು ಮುಂದಾಗಿದೆ. ಸದ್ಯ ಶೇ. 15ರಷ್ಟು ಸೆಸ್ ಇದೆ. ಈ ನಿರ್ಧಾರಕ್ಕೆ ಕೇಂದ್ರ ಸಂಪುಟ ಈಗಾಗಲೇ ಒಪ್ಪಿಗೆ ನೀಡಿದ್ದು, ಪರಿಣಾಮ ಮಧ್ಯಮ ಹಾಗೂ ದೊಡ್ಡ ಗಾತ್ರದ, ಐಷಾರಾಮಿ ಹಾಗೂ ಹೈಬ್ರಿಡ್ ಸೇರಿ ಎಸ್ಯುವಿ ಮಾದರಿಯ ಕಾರುಗಳ ಬೆಲೆಯಲ್ಲಿ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ.
ಜಿಎಸ್ಟಿ ಜಾರಿಗೆ ಬಂದು, ಕಳೆದ ಜುಲೈ 1ರ ಅನಂತರ ಕಾರು ಮಾರು ಕಟ್ಟೆಯ ಮೇಲೆ ಭಾರೀ ಪ್ರಮಾಣದ ಪರಿಣಾಮ ಬೀರಿತ್ತು. ಸಣ್ಣ ಹಾಗೂ ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ ಅಂದಾಜು ಮೂರು ಲಕ್ಷ ರೂ.ನಷ್ಟು ಕಡಿತವಾಗಿತ್ತು. ಜತೆ ಜತೆಗೇ ಲಕ್ಸುರಿ ಕಾರುಗಳ ಬೆಲೆ ಇನ್ನಷ್ಟು ದುಬಾರಿ ಯಾಗಿತ್ತು. ಆದರೆ ಇದೀಗ ಸೆಸ್ ಏರಿಕೆ ಎಲ್ಲ ಕಾರುಗಳ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ. ಕಾರು ತಯಾರಿಕಾ ಕಂಪೆನಿಗಳು ಈ ಏರಿಕೆಯ ಮೊತ್ತವನ್ನು ಗ್ರಾಹಕರ ಮೇಲೆ ಹಾಕಬೇಕಾದ ಸ್ಥಿತಿ ಎದುರಿಸಲಿವೆ ಎಂದು ವಿಶ್ಲೇಷಿಸ ಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ವಿತ್ತ ಸಚಿವ ಅರುಣ್ ಜೇಟ್ಲಿ, “ಬೇರೆ ಬೇರೆ ದರ್ಜೆಯ ಕಾರುಗಳ ಮೇಲಿನ ಸೆಸ್ ಬೇರೆ ಬೇರೆ ಆಗಿರಲಿದೆ. ಯಾವ ದಿನದಿಂದ ಜಾರಿಗೆ ಬರಲಿದೆ ಎನ್ನುವುದನ್ನು ಜಿಎಸ್ಟಿ ಕೌನ್ಸಿಲ್ ಸೆ.9ರಂದು ಹೈದರಾಬಾದ್ನಲ್ಲಿ ನಡೆಯಲಿರುವ ಸಭೆಯಲ್ಲಿ ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi pollution:ಪ್ರಾಣಿಗಳಲ್ಲಿ ಹೆಚ್ಚಿದ ಶ್ವಾಸ ಸಂಬಂಧಿ ಕಾಯಿಲೆ
BJP; ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದೇ ಗೆಲ್ಲುತ್ತದೆ: ಜಯಕ್ಕೆ ಪ್ರಧಾನಿ ಬಣ್ಣನೆ
Adani; 2,200 ಕೋಟಿ ರೂ. ಲಂಚ: ಅಮೆರಿಕ ಸಮನ್ಸ್
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್ಡಿಎ ಮೇಲುಗೈ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.