ಪೂರಕ ಮಸೂದೆ ಪಾಸ್; ಜಿಎಸ್ಟಿ ಜಾರಿಯತ್ತ ಹೆಜ್ಜೆ
Team Udayavani, Mar 31, 2017, 2:57 AM IST
ಹೊಸದಿಲ್ಲಿ: ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) ಜುಲೈ 1ರಿಂದಲೇ ಅನುಷ್ಠಾನ ಮಾಡಬೇಕೆಂಬ ಕೇಂದ್ರ ಸರಕಾರದ ಬಯಕೆ ಈಡೇರುವ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ, ಜಿಎಸ್‌ಟಿಗೆ ಸಂಬಂಧಿಸಿದ ನಾಲ್ಕು ಪೂರಕ ಮಸೂದೆಗಳಿಗೆ ಬುಧವಾರ ಲೋಕಸಭೆಯ ಒಪ್ಪಿಗೆಯ ಮುದ್ರೆ ಬಿದ್ದಿದೆ. ವಿಪಕ್ಷಗಳು ಸೂಚಿಸಿದ್ದ ತಿದ್ದುಪಡಿಗಳ ಬಳಿಕ ಕೇಂದ್ರ ಜಿಎಸ್‌ಟಿ ಮಸೂದೆ 2017, ಸಮಗ್ರ ಜಿಎಸ್‌ಟಿ ಮಸೂದೆ, ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಎಸ್‌ಟಿ ಮಸೂದೆ ಅಂಗೀಕಾರಗೊಂಡಿದ್ದು, ಇದರ ಫಲವಾಗಿ ಸರಕುಗಳ ಬೆಲೆ ಅಲ್ಪಮಟ್ಟಿಗೆ ತಗ್ಗಲಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಇದೇ ವೇಳೆ ಬುಧವಾರ ನಡೆದ ಚರ್ಚೆಯ ಸಂದರ್ಭದಲ್ಲಿ ಆಧಾರ್ ಯೋಜನೆ ಯುಪಿಎಯ ಬಲುದೊಡ್ಡ ಕೊಡುಗೆ ಎಂದು ಅರುಣ್ ಜೇಟ್ಲಿ ಶ್ಲಾಘಿಸಿದರು.
ಒಂದು ನಿರ್ದಿಷ್ಟ ಸರಕನ್ನು ಜನಸಾಮಾನ್ಯ ಬಳಸುತ್ತಾನಾ ಅಥವಾ ಶ್ರೀಮಂತ ಬಳಸುತ್ತಾನಾ ಎನ್ನುವುದರ ಮೇಲೆ ಜಿಎಸ್‌ಟಿ ದರವನ್ನು ನಿಗದಿಪಡಿಸಲಾಗುವುದು. ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಯಾಗುವ ಕಾರಣ, ವ್ಯಾಪಾರಿಗಳು ಅಧಿಕಾರಿಗಳಿಂದ ಎದುರಿಸುತ್ತಿದ್ದ ಕಿರುಕುಳಗಳೂ ನಿಲ್ಲುತ್ತವೆ ಎಂದಿದ್ದಾರೆ ಜೇಟ್ಲಿ. ಜತೆಗೆ, ರಿಯಲ್ ಎಸ್ಟೇಟ್ ಕ್ಷೇತ್ರವನ್ನೂ ಜಿಎಸ್‌ಟಿ ವ್ಯಾಪ್ತಿಗೆ ತರಬೇಕೇ, ಬೇಡವೇ ಎಂಬ ಬಗ್ಗೆ ಒಂದು ವರ್ಷದೊಳಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.
ಜಿಎಸ್‌ಟಿ, ಒಬಿಸಿ ಆಯೋಗಗಳ ಬಗ್ಗೆ ತಪ್ಪು ಮಾಹಿತಿ
ಜಿಎಸ್‌ಟಿ ಮತ್ತು ಹಿಂದುಳಿದ ವರ್ಗಗಳ ಆಯೋಗದ ಬಗ್ಗೆ ವಿಪಕ್ಷಗಳು ತಪ್ಪು ಮಾಹಿತಿ ನೀಡುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಛತ್ತೀಸ್‌ಗಡದ ಬಿಜೆಪಿ ಲೋಕಸಭಾ ಸದಸ್ಯರ ಜತೆಗೆ ಗುರುವಾರ ಬೆಳಗ್ಗೆ ಉಪಾಹಾರ ಸಭೆಯಲ್ಲಿ ಮಾತನಾಡುವ ವೇಳೆ ಪ್ರಧಾನಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳು ಹೇಳಿಕೊಂಡು ಬರುವ ಮಾತುಗಳನ್ನು ಸುಳ್ಳು ಎಂದು ಸಾಬೀತುಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಬಿಜೆಪಿ ಸಂಸದರು ಜಿಎಸ್‌ಟಿ ಕಾಯ್ದೆ ಮತ್ತು ಇತರ ಹಿಂದುಳಿದ ವರ್ಗಗಳ ಆಯೋಗಕ್ಕೆ ಯಾವ ಕಾರಣಕ್ಕಾಗಿ ನೇಮಕಗಳು ಬಾಕಿ ಉಳಿದಿವೆ ಎಂಬ ವಿಚಾರಗಳನ್ನು ಸಾರ್ವಜನಿಕರಿಗೆ ಮನದಟ್ಟು ಮಾಡಿಕೊಡಬೇಕೆಂದು ಸೂಚಿಸಿದ್ದಾರೆ.
ತಿದ್ದುಪಡಿಗೆ ನಕಾರ; ಹಣಕಾಸು ಮಸೂದೆಗೆ ‘ಲೋಕ’ ಅಂಗೀಕಾರ
ಹಣಕಾಸು ಮಸೂದೆ 2017ಕ್ಕೆ ರಾಜ್ಯಸಭೆ ತಂದಿದ್ದ ತಿದ್ದುಪಡಿಗಳನ್ನು ತಿರಸ್ಕರಿಸಿದ ಲೋಕಸಭೆಯು ಗುರುವಾರ ಮಸೂದೆಗೆ ಅಂಗೀಕಾರ ನೀಡಿದೆ. ತೆರಿಗೆದಾರನಿಗಿರುವ ಹೆಚ್ಚಿನ ಅಧಿಕಾರ ನೀಡುವುದಕ್ಕೆ ಕಡಿವಾಣ, ರಾಜಕೀಯ ಪಕ್ಷಗಳಿಗೆ ಕಂಪನಿಗಳು ನೀಡುವ ದೇಣಿಗೆಗೆ ಮಿತಿ ನಿಗದಿ ಸೇರಿದಂತೆ ಹಣಕಾಸು ಮಸೂದೆಗೆ ರಾಜ್ಯಸಭೆ ತಂದಿದ್ದ 5 ತಿದ್ದುಪಡಿಗಳನ್ನು ಗುರುವಾರ ಧ್ವನಿಮತ ಮೂಲಕ ತಿರಸ್ಕರಿಸಿ, ಮಸೂದೆಗೆ ಅಂಗೀಕಾರ ಪಡೆಯಿತು. ಈ ವೇಳೆ ಮಾತನಾಡಿದ, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ‘ರಾಜ್ಯಸಭೆ ಮಾಡಿರುವ ತಿದ್ದುಪಡಿ ಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆದರೆ, ಚುನಾವಣಾ ದೇಣಿಗೆಯನ್ನು ಹೆಚ್ಚು ಸ್ವಚ್ಛ ಮತ್ತು ಪಾರದರ್ಶಕವಾಗಿಸುವ ನಿಟ್ಟಿನಲ್ಲಿ ವಿಪಕ್ಷಗಳು ಸಲಹೆಗಳನ್ನು ನೀಡಬಹುದು’ ಎಂದರು. ಬುಧವಾರವಷ್ಟೇ ಹಣಕಾಸು ಮಸೂದೆಗೆ ಕಾಂಗ್ರೆಸ್ ಮತ್ತು ಸಿಪಿಎಂ ಪ್ರಸಾವಿಸಿದ ತಿದ್ದುಪಡಿಗಳನ್ನು ರಾಜ್ಯಸಭೆಯಲ್ಲಿ ಮಂಡಿಸಿ, ಅಂಗೀಕಾರ ಪಡೆಯಲಾಗಿತ್ತು. ಇದು ಕೇಂದ್ರ ಸರಕಾರಕ್ಕೆ ತೀವ್ರ ಮುಜುಗರ ಉಂಟುಮಾಡಿತ್ತು.
ಪೂರಕ ಮಸೂದೆಯಂತೆ…
ಭೂಮಿ ಭೋಗ್ಯಕ್ಕೆ ಕೊಡುವುದು, ಕಟ್ಟಡ ಬಾಡಿಗೆಗೆ ಕೊಡುವುದು, ನಿರ್ಮಾಣಹಂತದ ಮನೆ ಖರೀದಿಗೆ ನೀಡಲಾಗುವ ಇಎಂಐಗೂ ತೆರಿಗೆ ಪಾವತಿಸಬೇಕಾಗುತ್ತದೆ ವಾಣಿಜ್ಯ ಉದ್ದೇಶಕ್ಕೆ ಕೈಗಾರಿಕಾ ಅಥವಾ ವಸತಿ ಸಂಕೀರ್ಣವನ್ನು ಸಂಪೂರ್ಣವಾಗಿ ಅಥವಾ ಭಾಗಶಃ ಲೀಸ್‌ಗೆ ಅಥವಾ ಬಾಡಿಗೆಗೆ ಕೊಟ್ಟರೂ ಅದನ್ನು ಸೇವೆಯೆಂದು ಪರಿಗಣಿಸಿ ತೆರಿಗೆ ವಿಧಿಸಲಾಗುತ್ತದೆ
ವಿಶೇಷ ಆರ್ಥಿಕ ವಲಯದಲ್ಲಿ ಉತ್ಪಾದಿಸಲಾದ ಉತ್ಪನ್ನಗಳಿಗೆ ತೆರಿಗೆ ಪಾವತಿಸಬೇಕು
ಜಿಎಸ್‌ಟಿಯು ತನ್ನಿಂತಾನೇ ಡಿಜಿಟಲೀಕರಣವನ್ನು ಉತ್ತೇಜಿಸುತ್ತದೆ. ಪಾರದರ್ಶಕತೆ ತರುತ್ತದೆ ಮತ್ತು ಅಗತ್ಯ ಸಾಮಗ್ರಿಗಳ ದರವನ್ನು ಇಳಿಸುತ್ತದೆ. ಅಷ್ಟೇ ಅಲ್ಲ, ಕಪ್ಪುಹಣ ನಿಯಂತ್ರಣಕ್ಕೂ ಇದು ಸಹಕಾರಿಯಾಗಲಿದೆ. ಜಿಎಸ್‌ಟಿ ಎನ್ನುವುದು ಗೇಮ್ ಚೇಂಜರ್ ಆಗಿ, ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸಲಿದೆ.
– ಉದಿತ್ ರಾಜ್, ಬಿಜೆಪಿ ನಾಯಕ
ಯುಪಿಎ ಸರಕಾರದ ಅವಧಿಯಲ್ಲಿ ಜಿಎಸ್‌ಟಿಗೆ ಬಿಜೆಪಿ ಭಾರೀ ವಿರೋಧ ವ್ಯಕ್ತಪಡಿಸಿದ ಕಾರಣ, ಅದನ್ನು ಅನುಷ್ಠಾನ ಮಾಡಲು ಸಾಧ್ಯವಾಗಲಿಲ್ಲ. ಜಿಎಸ್‌ಟಿ ಜಾರಿಯಲ್ಲಾದ ವಿಳಂಬದಿಂದಾಗಿ ಸರಕಾರದ ಬೊಕ್ಕಸಕ್ಕೆ ಬರೋಬ್ಬರಿ 12 ಲಕ್ಷ ಕೋಟಿ ರೂ. ನಷ್ಟ ಅನುಭವಿಸಬೇಕಾಯಿತು.
– ಎಂ. ವೀರಪ್ಪ ಮೊಯಿಲಿ, ಕಾಂಗ್ರೆಸ್ ನಾಯಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
NIA; ಪ್ರವೀಣ್ ನೆಟ್ಟಾರು ಹ*ತ್ಯೆ ಪ್ರಕರಣದ ಆರೋಪಿ ವಿಮಾನ ನಿಲ್ದಾಣದಲ್ಲೇ ಬಂಧನ
Parcel: ಮನೆಗೆ ಬಂದ ಪಾರ್ಸೆಲ್ ನಲ್ಲಿ ಇದ್ದದ್ದು ವ್ಯಕ್ತಿಯ ಮೃತದೇಹ… ಮಹಿಳೆಗೆ ಶಾಕ್ !
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Om Prakash Chautala: ಹರಿಯಾಣದ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾ ವಿಧಿವಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Aligarh; ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ
ಹೊಸ ವರ್ಷಾಚರಣೆಗೆ ಡ್ರಗ್ಸ್ ಪಾರ್ಟಿ: ಪೊಲೀಸ್ ನಿಗಾ
Mandya:ಹಲವು ರೋಗ ನಿವಾರಕ ವೈದ್ಯನಾಥೇಶ್ವರ ಸ್ವಾಮಿ-ಚರ್ಮದ ರೋಗಕ್ಕೆ ಹುತ್ತದ ಮಣ್ಣು ರಾಮಬಾಣ
C.T. Ravi ಅವರನ್ನು ತತ್ ಕ್ಷಣ ಬಿಡುಗಡೆ ಮಾಡಿ: ಹೈಕೋರ್ಟ್ ಆದೇಶ
Davanagere: ಬಿಜೆಪಿ-ಕಾಂಗ್ರೆಸ್ ಹೊಂದಾಣಿಕೆ ಆರೋಪದ ಬಗ್ಗೆ ರೇಣುಕಾಚಾರ್ಯ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.