![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Nov 11, 2017, 6:00 AM IST
ಗುವಾಹಟಿ/ಹೊಸದಿಲ್ಲಿ: ಇನ್ನು ಹೊಟೇಲ್, ರೆಸ್ಟಾರೆಂಟ್‌ಗೆ ಹೋಗುವಾಗ ಎಸಿಯೋ, ನಾನ್-ಎಸಿಯೋ, ಜಿಎಸ್‌ಟಿ ಎಷ್ಟಿರುತ್ತೋ ಎಂದು ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ, ಹವಾನಿಯಂತ್ರಿತ ಸೌಲಭ್ಯವಿರುವ ಮತ್ತು ಇರದ ರೆಸ್ಟಾರೆಂಟ್‌ಗಳಲ್ಲೂ ನೀವಿನ್ನು ಶೇ. 5 ಜಿಎಸ್‌ಟಿ ಪಾವತಿಸಿದರೆ ಸಾಕು. ಈವರೆಗೆ ಶೇ. 12 ಹಾಗೂ ಶೇ. 18ರಷ್ಟಿದ್ದ ಸರಕು ಮತ್ತು ಸೇವಾ ತೆರಿಗೆಯನ್ನು ಈಗ ಶೇ. 5ಕ್ಕೆ ಇಳಿಸಲಾಗಿದೆ. ಅಷ್ಟೇ ಅಲ್ಲ, ಚಾಕ್ಲೆಟ್‌ನಿಂದ ಚೂÂಯಿಂಗ್ ಗಮ್‌ವರೆಗೆ, ಸೌಂದರ್ಯವರ್ಧಕ ಉತ್ಪನ್ನಗಳಿಂದ ರಿಸ್ಟ್ ವಾಚ್‌ಗಳವರೆಗೆ ಸುಮಾರು 200ರಷ್ಟು ದಿನಬಳಕೆ ಸರಕುಗಳ ತೆರಿಗೆ ದರವನ್ನು ಕಡಿತಗೊಳಿಸಲಾಗಿದೆ.
ಅಸ್ಸಾಂನ ಗುವಾಹಟಿಯಲ್ಲಿ ನಡೆದ ಜಿಎಸ್‌ಟಿ ಮಂಡಳಿಯ 23ನೇ ಸಭೆಯಲ್ಲಿ ಇಂಥದ್ದೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಇದು ಜಿಎಸ್‌ಟಿಗೆ ಸಂಬಂಧಿಸಿ ಈವರೆಗೆ ನಡೆದ ಎಲ್ಲ ಬದಲಾವಣೆಗಳಿಗಿಂತಲೂ ಹೆಚ್ಚಿನ ರಿಲೀಫ್ ನೀಡುವಂಥ ಕ್ರಮವಾಗಿದೆ. ಶುಕ್ರವಾರದ ಈ ನಿರ್ಧಾರದಿಂದಾಗಿ ವ್ಯಾಪಾರಿಗಳು ಹಾಗೂ ಗ್ರಾಹಕರು ನಿಟ್ಟುಸಿರು ಬಿಡುವಂತಾ ಗಿದೆ. ಪಂಚತಾರಾ ಹೊಟೇಲ್‌ಗಳು ಹೊರತುಪಡಿಸಿ ಇತರ ಎಲ್ಲ ಹೊಟೇಲ್, ರೆಸ್ಟಾರೆಂಟ್‌ಗಳ ಆಹಾರದ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ. 5ಕ್ಕಿಳಿಸಲಾಗಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ತೆರಿಗೆ ದರವನ್ನೂ ಶೇ. 5ಕ್ಕಿಳಿಸಲಾಗಿದೆ ಎಂದು ಸಭೆಯ ಬಳಿಕ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಪತ್ರಕರ್ತರಲ್ಲಿ ತಿಳಿಸಿದ್ದಾರೆ.
7,500 ರೂ.ಗಿಂತ ಹೆಚ್ಚಿನ ಕೊಠಡಿ ಬಾಡಿಗೆ ಇರುವಂಥ ಹೊಟೇಲ್‌ಗಳು ಹಾಗೂ ಸ್ಟಾರ್ ಹೊಟೇಲ್‌ಗಳು ಶೇ. 18 ಐಟಿಸಿ ಪಡೆಯಲಿದ್ದಾರೆ.
ಇನ್ನೂ ಹಲವು ವಸ್ತುಗಳು ಅಗ್ಗ: ಜನಸಾಮಾನ್ಯರಿಗೆ ಅತಿದೊಡ್ಡ ರಿಲೀಫ್ ಎಂಬಂತೆ ಶೇ. 28ರ ತೆರಿಗೆ ವ್ಯಾಪ್ತಿಯಲ್ಲಿದ್ದ ಒಟ್ಟು 228 ಸರಕುಗಳ ಪೈಕಿ ಬಹುತೇಕ ಸರಕುಗಳ ತೆರಿಗೆ ಇಳಿಸಲಾಗಿದೆ. ಇನ್ನು ಅತ್ಯಂತ ಐಷಾರಾಮಿ ಎನ್ನುವಂಥ 50 ಸರಕುಗಳಷ್ಟೇ ಇದರ ವ್ಯಾಪ್ತಿಯಲ್ಲಿ ಇರಲಿವೆ.
ದಂಡದ ಮೊತ್ತವೂ ಭಾರೀ ಇಳಿಕೆ: ತೆರಿಗೆ ರಿಟರ್ನ್ಸ್ ಸಲ್ಲಿಕೆ ವಿಳಂಬ ವಾದರೆ ಹೇರಲಾಗುತ್ತಿದ್ದ ದಂಡವನ್ನೂ ಭಾರೀ ಪ್ರಮಾಣದಲ್ಲಿ ಇಳಿಸ ಲಾಗಿದೆ. ಈ ಹಿಂದೆ ರಿಟರ್ನ್ಸ್ ಸಲ್ಲಿಕೆ ವಿಳಂಬವಾದರೆ ದಿನಕ್ಕೆ 200 ರೂ. ನಂತೆ ದಂಡ ವಿಧಿಸಲಾಗುತ್ತಿತ್ತು. ಇದನ್ನು ಈಗ ಕೇವಲ 20 ರೂ.ಗೆ ಇಳಿಸಲಾಗಿದೆ.
ಅಗ್ಗವಾದ ಸರಕುಗಳು
ಶಾಂಪೂ, ಡಿಯೋಡ್ರೆಂಟ್, ಟೂಥ್‌ಪೇಸ್ಟ್, ಶೇವಿಂಗ್ ಕ್ರೀಂ, ಆಫ್ಟರ್‌ಶೇವ್ ಲೋಷನ್, ಶೂ ಪಾಲಿಶ್, ಚಾಕ್ಲೆಟ್, ಚೂÂಯಿಂಗ್ ಗಮ್, ಪೌಷ್ಟಿಕಾಂಶ ಯುಕ್ತ ಪಾನೀಯ, ವಾಷಿಂಗ್ ಪೌಡರ್, ಡಿಟರ್ಜೆಂಟ್, ಗ್ರಾನೈಟ್ ಮತ್ತು ಮಾರ್ಬಲ್, ರಿಸ್ಟ್ ವಾಚ್, ವಿಗ್, ಕಾಫಿ, ಕಸ್ಟರ್ಡ್ ಪೌಡರ್, ದಂತ ನೈರ್ಮಲ್ಯ ಉತ್ಪನ್ನಗಳು, ಚರ್ಮದ ಉಡುಪುಗಳು, ಸ್ಟವ್, ಕುಕ್ಕರ್ ಇತ್ಯಾದಿ
ತುಟ್ಟಿಯಾಗಿಯೇ ಉಳಿದಿದ್ದು
ವಾಷಿಂಗ್ ಮಷೀನ್, ಏರ್ ಕಂಡಿಷನರ್, ಸಿಮೆಂಟ್, ಪೈಂಟ್, ಸಿಗಾರ್, ಪಾನ್ ಮಸಾಲಾ, ಆಟೋ ಮೊಬೈಲ್, ವ್ಯಾಕ್ಯೂಂ ಕ್ಲೀನರ್, ದ್ವಿಚಕ್ರ ವಾಹನ ಗಳು, ಕಾರುಗಳು, ತಂಬಾಕು ಉತ್ಪನ್ನಗಳು ಇತ್ಯಾದಿ
ಶೇ.28 ಸ್ಲ್ಯಾಬ್ ರದ್ದಾಗುತ್ತಾ?
ಶೇ.28ರ ಸ್ಲ್ಯಾಬ್ ಅನ್ನೇ ರದ್ದು ಮಾಡಿ, ಅದರ ವ್ಯಾಪ್ತಿಗೆ ಬರುವ ಎಲ್ಲ ಸರಕುಗಳನ್ನೂ ಶೇ.18ರ ಸ್ಲ್ಯಾಬ್ಗ ತರಬೇಕು ಎಂಬಂಥ ಸಲಹೆಗಳೂ ಕೇಳಿಬಂದಿವೆ. ಆದರೆ, ಈ ಕುರಿತು ನಿಧಾನವಾಗಿ ಕ್ರಮ ಕೈಗೊಳ್ಳಲು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸದ್ಯಕ್ಕಂತೂ ಈ ಸ್ಲಾéಬ್ ರದ್ದಾಗುವುದಿಲ್ಲ. ಏಕೆಂದರೆ, ದಿಢೀರನೆ ತೆಗೆದುಹಾಕಿದರೆ, ಸರಕಾರದ ಬೊಕ್ಕಸಕ್ಕೆ ಹೆಚ್ಚು ಆದಾಯ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದಿದ್ದಾರೆ ಸುಶೀಲ್ ಮೋದಿ. ಈ ಹಿನ್ನೆಲೆಯಲ್ಲಿ ಕೇವಲ 50 ಐಷಾರಾಮಿ ಮತ್ತು ತಂಬಾಕು ವಸ್ತುಗಳನ್ನು ಶೇ.28ರಲ್ಲಿಯೇ ಇರಿಸಲಾಗಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.