![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Dec 27, 2021, 6:30 AM IST
ಹೊಸದಿಲ್ಲಿ: ಉಡುಪು ಹಾಗೂ ಪಾದರಕ್ಷೆಗಳನ್ನು ಖರೀದಿಸಲು ಹೊಸ ವರ್ಷದಿಂದಲೇ ದೇಶದ ಬಡ ಹಾಗೂ ಮಧ್ಯಮ ವರ್ಗದವರು ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ. ಜ.1ರಿಂದ ಈ ಉತ್ಪನ್ನಗಳ ಜಿಎಸ್‌ಟಿಯನ್ನು ಈಗಿರುವ ಶೇ.5ರಿಂದ ಶೇ.12ಕ್ಕೇರಿಸಲು ನಿರ್ಧರಿಸಲಾಗಿದೆ.
ಕೇಂದ್ರ ಸರಕಾರವು ಒಂದು ಸಾವಿರ ರೂ. ಗಳಿಗಿಂತ ಕಡಿಮೆ ಬೆಲೆಯ ಎಲ್ಲ ಉಡುಗೆಗಳು ಹಾಗೂ ಪಾದರಕ್ಷೆಗಳ ಮೇಲಿನ ಜಿಎಸ್ಟಿಯನ್ನು ಶೇ.12ಕ್ಕೇರಿಸಿದೆ. ಹೀಗಾಗಿ, ಇವುಗಳ ದರದಲ್ಲಿ ಏರಿಕೆಯಾಗಲಿದೆ. ಸರಕಾರದ ಈ ನಿರ್ಧಾರದಿಂದಾಗಿ ನಾವು ತೀವ್ರ ಸಂಕಷ್ಟಕ್ಕೆ ಸಿಲುಕಲಿದ್ದೇವೆ ಎಂದು ಸಣ್ಣ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ. ಈಗೀಗ ಜಿಎಸ್ಟಿ ಮಂಡಳಿಯು ವ್ಯಾಪಾರಿಗಳೊಂದಿಗೆ ಮಾತುಕತೆ ನಡೆಸುವುದನ್ನೇ ಬಿಟ್ಟುಬಿಟ್ಟಿದೆ. ನಿರಂಕುಶ ನಿರ್ಧಾರ ಕೈಗೊಳ್ಳುತ್ತಿದೆ ಎಂದಿದ್ದಾರೆ.
ಇದೇ ವೇಳೆ, ಕೂಡಲೇ ಜಿಎಸ್‌ಟಿ ಮಂಡಳಿಯ ತುರ್ತು ಸಭೆ ಕರೆದು, ಈ ಉತ್ಪನ್ನಗಳ ಜಿಎಸ್‌ಟಿ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪಶ್ಚಿಮ ಬಂಗಾಲದ ಮಾಜಿ ಹಣಕಾಸು ಸಚಿವ ಅಮಿತ್ ಮಿತ್ರಾ ಆಗ್ರಹಿಸಿದ್ದಾರೆ. ಜಿಎಸ್ಟಿ ಹೆಚ್ಚಳ ಜಾರಿಗೆ ಬಂದರೆ, ದೇಶಾದ್ಯಂತ ಒಂದು ಲಕ್ಷ ಜವಳಿ ಘಟಕಗಳು ಮುಚ್ಚಲಿದ್ದು, ಸುಮಾರು 15 ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳಲಿದ್ದಾರೆ. ಹಾಗಾಗದಂತೆ ತಡೆಯಿರಿ ಎಂದು ಮಿತ್ರಾ ಮನವಿ ಮಾಡಿದ್ದಾರೆ.
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.