ಜಿಎಸ್ಟಿಗಾಗಿ ಕಾರು ಭಾರೀ ಅಗ್ಗ
Team Udayavani, Jun 17, 2017, 11:36 AM IST
ಹೊಸದಿಲ್ಲಿ: ಜು.1ರಿಂದ ಜಿಎಸ್ಟಿ ಜಾರಿಯಾಗಲಿದ್ದು, ಇದರ ಮುನ್ನವೇ ಆಟೋಮೊಬೈಲ್ ಕ್ಷೇತ್ರದಲ್ಲಿ ಭರ್ಜರಿ ಡಿಸ್ಕೌಂಟ್ ಮೇಳವೇ ಶುರುವಾಗಿದೆ. ದೇಶಾದ್ಯಂತ ಸರಕು ಮತ್ತು ಸೇವೆಗಳ ತೆರಿಗೆ ಜಾರಿಗೆ ಬರಲಿದ್ದು, ಕೆಲವು ವಸ್ತುಗಳ ದರ ಏರಿಕೆಯಾಗಲಿದೆ. ಹೀಗಾಗಿ ಅದಕ್ಕೂ ಮುನ್ನವೇ ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಕಂಪೆನಿಗಳು ಭಾರೀ ಪ್ರಮಾಣದ ರಿಯಾಯಿತಿ ಕೊಡಲು ಮುಂದಾಗಿವೆ.
ಆಟೋಮೊಬೈಲ್ ಕ್ಷೇತ್ರದಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ಹೋಂಡಾ, ನಿಸಾನ್, ಮಹೀಂದ್ರಾ ಮತ್ತು ಮಹೀಂದ್ರಾ ಹಾಗೂ ಫೋರ್ಡ್ ಇಂಡಿಯಾ ಕಂಪೆನಿಗಳು ಡಿಸ್ಕೌಂಟ್ ಘೋಷಿಸಿವೆ. ಮಾರುತಿ ಸುಜುಕಿ ಸಂಸ್ಥೆ 25 ಸಾವಿರ ರೂ.ಗಳಿಂದ 35 ಸಾವಿರ ರೂ.ಗಳವರೆಗೆ ರಿಯಾಯಿತಿ ಘೋಷಿಸಿದೆ. ಹೆಚ್ಚು ಡಿಸ್ಕೌಂಟ್ ಇರುವುದು ಅಲ್ಟೋ ಕಾರಿಗೆ. ಹಾಗೆಯೇ ಮಹೀಂದ್ರಾ ಮತ್ತು ಮಹೀಂದ್ರಾ 27 ಸಾವಿರ ರೂ.ಗಳಿಂದ 90 ಸಾವಿರ ರೂ.ಗಳವರೆಗೆ ರಿಯಾಯಿತಿ ನೀಡುತ್ತಿದೆ. ಹ್ಯುಂಡೈನಲ್ಲಿ 25 ಸಾವಿರ ರೂ.ಗಳಿಂದ 2.5 ಲಕ್ಷದ ವರೆಗೆ ಡಿಸ್ಕೌಂಟ್ ಇದೆ. ಎಲೈಟ್ ಐ20 ಮತ್ತು ಎಕ್ಸೆಂಟ್ಗೆ 25 ಸಾವಿರ ರೂ. ಡಿಸ್ಕೌಂಟ್ ಇದ್ದರೆ, ಪ್ರೀಮಿಯಮ್ ಎಸ್ಯುವಿ ಸಾಂತಾಫೇಗೆ 2.5 ಲಕ್ಷ ರೂ. ಡಿಸ್ಕೌಂಟ್ ಇದೆ. ಹಾಗೆಯೇ ಇಯಾನ್ಗೆ 45 ಸಾವಿರ, ಗ್ರಾಂಡ್ ಐ10ಗೆ 73 ಸಾವಿರ, ವರ್ನಾಗೆ 90 ಸಾವಿರ ರೂ. ರಿಯಾಯಿತಿ ಇದೆ. ಹೋಂಡಾ 14,500 ರೂ.ಗಳಿಂದ 60 ಸಾವಿರ ರೂ.ಗಳ ವರೆಗೆ ಡಿಸ್ಕೌಂಟ್ ನೀಡುತ್ತಿದೆ. ಬ್ರಿಯೋಗೆ 14,500 ರೂ., ಅಮೇಜ್ಗೆ 50 ಸಾವಿರ ರೂ., ಜಾಜ್ಗೆ 17 ಸಾವಿರ, ಬಿ-ಆರ್ವಿಗೆ 60 ಸಾವಿರ ರೂ. ರಿಯಾಯಿತಿ ಇದೆ. ಫೋರ್ಡ್ ಇಂಡಿಯಾ ಎಸ್ಯುವಿ ಎಕೋ ನ್ಪೋರ್ಟ್ಗೆ 30 ಸಾವಿರ ಡಿಸ್ಕೌಂಟ್ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
BJP; ಅಮಿತ್ ಶಾ ಹೇಳಿಕೆ ಪರ ನಿಲ್ಲಲು ಸಂತೋಷ್ ಸೂಚನೆ
INDIA Bloc ಖತಂ?: ದಿಲ್ಲಿ ವಿಧಾನಸಭಾ ಚುನಾವಣೆ ಕಾವೇರಿರುವಾಗಲೇ ಬಿರುಕು
Mahakumbh; ಕುಂಭ ಮೇಳ ಸನಾತನ ಗರ್ವ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Delhi-NCR: ದಟ್ಟ ಮಂಜು ಕವಿದ ವಾತಾವರಣ-ವಿಮಾನ,ವಾಹನ ಸಂಚಾರಕ್ಕೆ ಎಫೆಕ್ಟ್, ಟ್ರಾಫಿಕ್ ಜಾಮ್
Uchila: ಕಾರು ಢಿಕ್ಕಿಯಾಗಿ ಪಾದಚಾರಿ ಸ್ಥಳದಲ್ಲೇ ಸಾವು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.