ನ.27ಕ್ಕೆ ಕರ್ನಾಟಕ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಜಿಎಸ್‌ಟಿ ಸಭೆ
Team Udayavani, Nov 23, 2021, 9:45 PM IST
ನವದೆಹಲಿ: ಜಿಎಸ್‌ಟಿಯ ಹಾಲಿ ಇರುವ ಹಂತಗಳ (ಸ್ಲ್ಯಾಬ್ ) ಬಗ್ಗೆ ಪರಿಶೀಲಿಸುವ ನಿಟ್ಟಿನಲ್ಲಿ ಸಚಿವರ ಗುಂಪಿನ ಸಭೆ (ಜಿಒಎಂ) ನ.27ರಂದು ನಡೆಯಲಿದೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.
ಜಿಎಸ್‌ಟಿ ವ್ಯವಸ್ಥೆಯನ್ನು ಇನ್ನಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಹಾಲಿ ಇರುವ ತೆರಿಗೆ ಸ್ಲ್ಯಾಬ್ ಗಳ ಬಗ್ಗೆ ಮತ್ತು ಇತರ ವಿಚಾರಗಳ ಬಗ್ಗೆ ಪರಾಮರ್ಶೆ ನಡೆಸಲಿದೆ. ಇದರ ಜತೆಗೆ ಹಾಲಿ ಇರುವ ಶೇ.12 ಮತ್ತು ಶೇ.18ರ ತೆರಿಗೆ ಹಂತಗಳನ್ನು ವಿಲೀನಗೊಳಿಸುವ ಬಗ್ಗೆಯೂ ಚರ್ಚೆ ನಡೆಸಿ, ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ.
ಇದನ್ನೂ ಓದಿ:ಮಣಿಪಾಲದಲ್ಲಿ ಅಕ್ರಮ ಚಟುವಟಿಕೆ ತಡೆಗೆ ಆಪರೇಶನ್ ಸನ್‌ಸೆಟ್ : ಎಸ್‌ಪಿ ವಿಷ್ಣುವರ್ಧನ್
ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಹಲವು ವಸ್ತುಗಳಿಗೆ ತೆರಿಗೆ ಪ್ರಮಾಣ ಹಾಲಿ ಇರುವ ಶೇ.3ರಿಂದ ಶೇ.5ರ ವರೆಗೆ ಏರಿಕೆ ಮಾಡುವ ನಿಟ್ಟಿನಲ್ಲಿಯೂ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳಿವೆ. ಸಭೆಯ ಶಿಫಾರಸುಗಳನ್ನು ಜಿಎಸ್‌ಟಿ ಮಂಡಳಿಗೆ ಸಲ್ಲಿಸಲಾಗುತ್ತದೆ. ಮುಂದಿನ ತಿಂಗಳು ನಡೆಯಲಿರುವ ಮಂಡಳಿ ಸಭೆಯಲ್ಲಿ ಶಿಫಾರಸುಗಳಿಗೆ ಸಮ್ಮತಿ ಸೂಚಿಸಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.