![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Jan 20, 2022, 7:30 AM IST
ಕೋಲ್ಕತಾ: ಗೂಗಲ್ ಮೀಟ್‌ನಲ್ಲಿ ಮದುವೆ; ಝೊಮ್ಯಾಟೋ ಮೂಲಕ ಸಿಹಿ ಊಟ..
ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತಾದಲ್ಲಿ ಜ.24ರಂದು ನಡೆಯಲಿರುವ ವಿಶೇಷ ತಾಂತ್ರಿಕ ವ್ಯವಸ್ಥೆಯಿಂದ ಕೂಡಿದ ಮದುವೆಯ ಮುನ್ನೋಟ ಇದು.
ದೇಶದಲ್ಲಿ ಕೊರೊನಾ ಹಾವಳಿ ಶುರುವಾದ ಬಳಿಕ ಇಂಥ ಆನ್‌ಲೈನ್ ಮದುವೆಗಳು ಹೆಚ್ಚಿನ ರೀತಿಯಲ್ಲಿ ನಡೆಯುತ್ತಿವೆ. ಪಶ್ಚಿಮ ಬಂಗಾಳದ ಸಂದೀಪನ್ ಸರ್ಕಾರ್ ಮತ್ತು ಅದಿತಿ ದಾಸ್ ಅವರ ಮದುವೆ ಜ.24ರಂದು ನಿಗದಿಯಾಗಿದೆ.
ಕೊರೊನಾ ನಿಯಮಗಳನ್ನು ಮೀರುವಂತೆ ಇಲ್ಲ ಮತ್ತು ಬಂಧು-ಮಿತ್ರರನ್ನು ನಿರ್ಲಕ್ಷಿಸುವಂತೆ ಇಲ್ಲ. ಏಕೆಂದರೆ, ಅವರು ಕಳೆದ ವರ್ಷವೇ ಮದುವೆಯಾಗಬೇಕಾಗಿತ್ತು. ಹೀಗಾಗಿ, ತಲೆ ಓಡಿಸಿದ ಯುವ ಜೋಡಿ ಬಂಧು-ಮಿತ್ರರೆಲ್ಲರಿಗೂ ಗೂಗಲ್ ಮೀಟ್ ಲಿಂಕ್ ಕಳುಹಿಸಿ, ಅವರವರ ಮನೆಯಲ್ಲಿಯೇ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ-ವೀಕ್ಷಿಸುವ ವ್ಯವಸ್ಥೆ ಮಾಡಿದೆ. ಜ.23ಕ್ಕೆ ಬಂಧುಮಿತ್ರರಿಗೆಲ್ಲ ಪಾಸ್‌ವರ್ಡ್-ಐಡಿ ನೀಡಲಾಗುತ್ತದಂತೆ.
ಸಂದೀಪನ್ ಸರ್ಕಾರ ಕೊರೊನಾದಿಂದಾಗಿ ನಾಲ್ಕು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸಾcರ್ಜ್ ಆದ ಬಳಿಕ ಹೊಸ ಚಿಂತನೆ ಮೂಡಿತು ಎಂದು ಹೇಳಿದ್ದಾರೆ.
ಹಾಗಿದ್ದರೆ, ಊಟಕ್ಕೇನು ಮಾಡುವುದು ಎಂಬ ಯೋಚನೆ ಬಂದಾಗ ಮನೆ ಬಾಗಿಲಿಗೆ ಆಹಾರ ಪೂರೈಸುವ ಝೊಮ್ಯಾಟೋ ಮೂಲಕ ಯಾರಿಗೆಲ್ಲ ಆಹ್ವಾನ ನೀಡಲಾಗಿದೆಯೋ ಅವರಿಗೆಲ್ಲ ಮನೆ ಬಾಗಿಲಿಗೇ ಸಿಹಿ ಮತ್ತು ರುಚಿಯಾದ ಊಟ ಪೂರೈಕೆ ಮಾಡಲಾಗುತ್ತದಂತೆ. ಝೊಮ್ಯಾಟೊ ಕಂಪನಿಯ ಅಧಿಕಾರಿಗಳೂ ಈ ವಿನೂತನ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಇದನ್ನೂ ಓದಿ:ಮೆಟ್ರಿಕ್ ನಂತರ : ವಿದ್ಯಾರ್ಥಿನಿಲಯಕ್ಕೆ ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಧಿ ವಿಸ್ತರಣೆ
ಮುಂದಿನ ತಿಂಗಳು ತಮಿಳುನಾಡಿನ ದಿನೇಶ್ ಎಸ್.ಪಿ ಮತ್ತು ಜ್ಞಾನಗಂಧಿನಿ ರಾಮಸ್ವಾಮಿ ಎಂಬ ಯುವ ಜೋಡಿಯ ಮದುವೆಯ ಔತಣಕೂಟವನ್ನು ಮೆಟಾವರ್ಸ್ ಮೂಲಕ ನಡೆಸಲು ಉದ್ದೇಶಿಸಿದೆ. ಅವರ ಮದುವೆ ಶಿವಲಿಂಗಪುರಂ ಗ್ರಾಮದಲ್ಲಿ ನಡೆಯಲಿದೆ. ಮದುವೆಯ ಬಳಿಕ ಬಂಧು-ಮಿತ್ರರೆಲ್ಲ ಲ್ಯಾಪ್‌ಟಾಪ್ ಮೂಲಕ ಮೆಟಾವರ್ಸ್ ಮೂಲಕ ಡಿಜಿಟಲ್ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. ಅಂದ ಹಾಗೆ ದಿನೇಶ್ ಅವರು ಐಐಟಿ ಚೆನ್ನೈನಲ್ಲಿ ಉದ್ಯೋಗಿಯಾಗಿದ್ದಾರೆ. ಇದೇ ಮೊದಲ ಬಾರಿಗೆ ದೇಶದಲ್ಲಿ ಆನ್‌ಲೈನ್ ಔತಣ ಕೂಟ ಎಂದು ಹೇಳಲಾಗುತ್ತಿದೆ.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.