ಆನ್‌ಲೈನ್ ಪಾಠಕ್ಕೂ ಮಾರ್ಗಸೂಚಿ
Team Udayavani, Jun 17, 2020, 11:39 AM IST
ಹೊಸದಿಲ್ಲಿ: ಮಕ್ಕಳು ಪಾಠ ಕೇಳುವ ನೆಪದಲ್ಲಿ ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕೂರದಂತೆ ಹಾಗೂ ಫೋನ್ ಬಳಸದೆಯೇ, ತಾವಿರುವ ಸ್ಥಳದಿಂದಲೇ ಆನ್‌ಲೈನ್ ಪಾಠ ಕೇಳುವಂತೆ ಮಾಡಲು ಇರುವ ಆಯ್ಕೆಗಳಿಗಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹುಡುಕಾಟ ನಡೆಸಿದೆ.ಜತೆಗೆ ಆನ್‌ಲೈನ್ ಶಿಕ್ಷಣ ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತಿದೆ.
ಕೊರೊನಾ ಕಾರಣದಿಂದ ತರಗತಿಗಳು ಆನ್‌ಲೈನ್‌ಗೆ ಶಿಫ್ಟ್ ಆಗಿವೆ. ಇದರಿಂದ ಮಕ್ಕಳು ಹೆಚ್ಚು ಹೊತ್ತು ಕಂಪ್ಯೂಟರ್, ಫೋನ್ ಸ್ಕ್ರೀನ್ ನೋಡುವಂತಾಗಿದೆ. ಹಾಗೇ ಮನೆಯಲ್ಲಿ ಇಬ್ಬರು ಅಥವಾ ಮೂವರು ಮಕ್ಕಳಿದ್ದಾರೆ. ಆದರೆ, ಆನ್‌ಲೆ„ನ್ ಪಾಠಕ್ಕೆ ಬೆಂಬಲಿಸುವ ಸಾಧನ ಇರುವುದು ಒಂದೇ. ಹೀಗಿರುವಾಗ ಏನು ಮಾಡಬೇಕು ಎಂದು ಹಲವು ಪೋಷಕರು ದೂರುತ್ತಿರುವ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗಗಳ ಬಗ್ಗೆ ಎಚ್‌ಆರ್‌ಡಿ ತಲೆ ಕೆಡಿಸಿಕೊಂಡಿದೆ. ವಿದ್ಯಾರ್ಥಿಗಳು ಹೆಚ್ಚು ಹೊತ್ತು ಸ್ಕ್ರೀನ್ ಮುಂದೆ ಕುಳಿತುಕೊಳ್ಳುವುದನ್ನು ತಡೆಯುವ ನಿಟ್ಟಿನಲ್ಲಿ ಆನ್‌ಲೆ„ನ್ ತರಗತಿಗಳ ಅವಧಿ ನಿಗದಿ ಪಡಿಸಲಾಗುವುದು. ಇಲೆಕ್ಟ್ರಾನಿಕ್ ಉಪಕರಣಗಳ ಸೌಲಭ್ಯ ಹೊಂದಿರುವವರು ಹಾಗೂ ಈಗಷ್ಟೇ ರೇಡಿಯೋ ಸಂಪರ್ಕಕ್ಕೆ ಬಂದವರು ಮತ್ತು ಅದೂ ಇಲ್ಲದವರಿಗೆ ಅನುಕೂಲವಾಗುವ ರೀತಿಯಲ್ಲಿ ವಿವಿಧ ಮಾದರಿಗಳನ್ನು ಮಾರ್ಗಸೂಚಿ ಮೂಲಕ ಪರಿಚಯಿಸಲಾಗುತ್ತಿದೆ. ಇದರೊಂದಿಗೆ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಸೆ„ಬರ್ ಸುರಕ್ಷತೆ ಒದಗಿಸುವತ್ತಲೂ ಗಮನಹರಿಸುವುದಾಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಕ್ಕಳು ಹೆಚ್ಚು ಹೊತ್ತು ಸ್ಕ್ರೀನ್ ನೋಡದಂತೆ ಕ್ರಮ
ಸೌಲಭ್ಯ ವಂಚಿತರಿಗೂ ಅನುಕೂಲ ಕಲ್ಪಿಸಲು ಚಿಂತನೆ
ಹೆಚ್ಚು ಹೊತ್ತು ಸ್ಕ್ರೀನ್ ನೋಡದಂತೆ ಆನ್‌ಲೈನ್ ತರಗತಿಗಳ ಅವಧಿ ನಿಗದಿ
ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಸೈಬರ್ ಸುರಕ್ಷತೆಗೂ ಗಮನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Aaram Aravinda Swamy: ಸ್ವಾಮಿ ನಂಬಿ ಬಂದ ಅನೀಶ್; ಪ್ರೇಕ್ಷಕ ಕೈ ಹಿಡಿಯೋ ನಿರೀಕ್ಷೆ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.