ಹಬ್ಬಗಳಿಗೆ ಮಾರ್ಗಸೂಚಿ: ಸಿನೆಮಾ ನಿಯಮ ಬಿಡುಗಡೆ ; ಆಯುರ್ವೇದ ಅನುಸರಣೆಗೆ ಸಲಹೆ
Team Udayavani, Oct 7, 2020, 6:41 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕೋವಿಡ್ 19 ಸೋಂಕು ಹೆಚ್ಚಳದ ನಡುವೆಯೇ ಅನ್‌ಲಾಕ್ 5ರಲ್ಲಿ ಹೆಚ್ಚು ಹೆಚ್ಚು ವಿನಾಯಿತಿಗಳನ್ನು ಪ್ರಕಟಿಸಿರುವ ಕೇಂದ್ರ ಸರಕಾರವು ಈಗ ಸಿನೆಮಾ ಮಂದಿರ ಆರಂಭ, ಹಬ್ಬ ಹರಿದಿನಗಳ ಆಚರಣೆಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಅಕ್ಟೋಬರ್‌ನಿಂದ ಆರಂಭಗೊಂಡು ಡಿಸೆಂಬರ್ ವರೆಗೆ ಸಾಲು ಸಾಲು ಹಬ್ಬಗಳಿವೆ.
ದಸರಾ, ದೀಪಾವಳಿ, ಕ್ರಿಸ್ಮಸ್, ಈದ್ ಮಿಲಾದ್, ಸಣ್ಣಪುಟ್ಟ ಜಾತ್ರೆಗಳು, ಉತ್ಸವಗಳು… ಹೀಗೆ ಆಚರಣೆಗಳ ಸರಣಿಯೇ ಇದೆ.
ಅಷ್ಟೇ ಅಲ್ಲ, ಕೋವಿಡ್ 19 ಚಿಕಿತ್ಸೆ ಮತ್ತು ಕೋವಿಡೋತ್ತರ ಸಂದರ್ಭದಲ್ಲಿ ಆಯುರ್ವೇದ ಮತ್ತು ಯೋಗವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆಯೂ ಆರೋಗ್ಯ ಇಲಾಖೆ ಮಾರ್ಗಸೂಚಿ ಹೊರಡಿಸಿದೆ.
ಹಬ್ಬಗಳಿಗೆ ಅಂಕುಶ
– ಮೂರ್ತಿ, ಪವಿತ್ರ ಗ್ರಂಥ ಇತ್ಯಾದಿ ಸ್ಪರ್ಶಿಸುವಂತಿಲ್ಲ.
– ಕಂಟೈನ್‌ಮೆಂಟ್ ಝೋನ್ ಹೊರಗಷ್ಟೇ ಹಬ್ಬಗಳಿಗೆ ಅವಕಾಶ.
– ನಿರ್ಬಂಧಿತ ಪ್ರದೇಶಗಳಲ್ಲಿ ಮನೆಯೊಳಗೇ ಹಬ್ಬ ಆಚರಿಸಬೇಕು.
– ಗುಂಪುಗೂಡಿ ಹಾಡು ಹೇಳುವುದರ ಬದಲು ಧ್ವನಿಮುದ್ರಿತ ಹಾಡು/ಸಂಗೀತ ಪ್ಲೇ ಮಾಡಬೇಕು.
– ವಿಶಾಲ ಪ್ರದೇಶಗಳಲ್ಲಿ ಉತ್ಸವ ನಡೆಸಬೇಕು, ಸಾಮಾಜಿಕ ಅಂತರ ಕಾಪಾಡಲು ಮಾರ್ಕಿಂಗ್ ಕಡ್ಡಾಯ.
– ಫೇಸ್ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ.
– ವಾರಗಟ್ಟಲೆ ನಡೆಯುವ ಉತ್ಸವಗಳಲ್ಲಿ ಅಷ್ಟೂ ದಿನ ಜನಸಂದಣಿ ಸೇರಬಾರದು.
– ಮೆರವಣಿಗೆ ನಡೆಸುವ ಉದ್ದೇಶವಿದ್ದರೆ ನಿಗದಿತ ಸಂಖ್ಯೆಗಿಂತ ಹೆಚ್ಚು ಜನ ಸೇರಬಾರದು.
– ಮೆರವಣಿಗೆ ನಡೆಸುವ ದಾರಿಯನ್ನು ಮೊದಲೇ ಗುರುತಿಸಿ ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು.
– ಸಾಮಾಜಿಕ ಅಂತರದ ಮೇಲೆ ಗಮನ ಇರಿಸಲು ಕ್ಲೋಸ್ಡ್ ಸರ್ಕ್ಯೂಟ್ ಕೆಮರಾ ಬಳಸಬೇಕು.
ಆಯುರ್ವೇದಕ್ಕೆ ‘ಯೋಗ’
– ರೋಗ ನಿರೋಧಕವಾಗಿ ಅಶ್ವಗಂಧ, ಅಮೃತಬಳ್ಳಿ ಘನವಟಿ ಅಥವಾ ಚ್ಯವನಪ್ರಾಶ ಬಳಸಬಹುದು.
– ಲಕ್ಷಣರಹಿತ ಸೋಂಕುಪೀಡಿತರಿಗೆ ಅಮೃತಬಳ್ಳಿ ಘನವಟಿ, ಗುಡುಚಿ ಮತ್ತು ಹಿಪ್ಪಲಿ ಅಥವಾ
ಆಯುಷ್ -64 ಮಿಶ್ರ ಮಾಡಿಕೊಡಬಹುದು.
– ಈ ಮೂರನ್ನು ಮಿಶ್ರಣ ಮಾಡಿ ಕೊಡುವುದರಿಂದ ರೋಗದ ತೀವ್ರತೆ ತಡೆಯಬಹುದು.
– ಗುಡುಚಿ, ಹಿಪ್ಪಲಿ, ಆಯುಷ್-64 ಮಾತ್ರೆಗಳನ್ನು ಅಲ್ಪ ರೋಗ ಲಕ್ಷಣ ಇರುವವರಿಗೆ ನೀಡಬಹುದು.
– ಈ ಔಷಧಗಳ ಜತೆ ಆಹಾರಕ್ಕೆ ಸಂಬಂಧಿಸಿದ ಪಥ್ಯಗಳನ್ನೂ ಅನುಸರಿಸಬೇಕು.
– ಕೋವಿಡೋತ್ತರ ಅವಧಿಯಲ್ಲಿ ಅಶ್ವಗಂಧ, ಚ್ಯವನಪ್ರಾಶ ಅಥವಾ ರಸಾಯನ ಚೂರ್ಣವನ್ನು ನೀಡಬೇಕು. ಇದರಿಂದ ಶ್ವಾಸಕೋಶದ ಅನಾರೋಗ್ಯ, ಮಾನಸಿಕ ಒತ್ತಡ ನಿವಾರಣೆಗೆ ಅನುಕೂಲವಾಗುತ್ತದೆ.
– ಉತ್ತಮ ಉಸಿರಾಟ, ಹೃದಯ ಸಾಮರ್ಥ್ಯ ವೃದ್ಧಿ, ಒತ್ತಡ ನಿವಾರಣೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಯೋಗಾಭ್ಯಾಸ ಮಾಡಬೇಕು.
– ಬಿಸಿನೀರಿಗೆ ಅರಿಶಿನ, ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಬೇಕು.
– ಮೂಗಿನ ಹೊಳ್ಳೆಗಳಿಗೆ ದಿನಕ್ಕೆ 1-2 ಬಾರಿ ಅನುತೈಲ ಅಥವಾ ಶದ್‌ಬಿಂದು ತೈಲ, ಹಸುವಿನ ಶುದ್ಧ ತುಪ್ಪ ಹಾಕಬೇಕು.
– ನೀರಿಗೆ ಶುಂಠಿ, ಕೊತ್ತಂಬರಿ, ವೀಳ್ಯದೆಲೆ ಅಥವಾ ಜೀರಿಗೆ ಹಾಕಿ ಕುದಿಸಿ ಕುಡಿಯಬೇಕು. ಬಿಸಿ ಹಾಲಿಗೆ ಅರಿಶಿನ ಹಾಕಿ ರಾತ್ರಿ ಕುಡಿಯಬೇಕು.
ನಿರ್ಬಂಧಿತ ‘ಶೋ’
– ಶೇ.50 ಸಾಮರ್ಥ್ಯದೊಂದಿಗೆ ಸಿನೆಮಾ ಥಿಯೇಟರ್‌ಗಳು ಕಾರ್ಯಾಚರಣೆ ಮಾಡಬೇಕು.
– ಇಬ್ಬರ ಮಧ್ಯೆ ಒಂದು ಸೀಟು ಖಾಲಿ ಬಿಡಬೇಕು.
– ಪ್ರೇಕ್ಷಕರೇ ಮಾಸ್ಕ್, ಸ್ಯಾನಿಟೈಸರ್ ಒಯ್ಯಬೇಕು.
– ಬೇರೆ ಬೇರೆ ಅವಧಿಯಲ್ಲಿ ಶೋ ಸಮಯ ನಿಗದಿ ಮಾಡಬೇಕು.
– ಟಿಕೆಟ್ ಖರೀದಿಗೆ ಡಿಜಿಟಲ್ ಪೇಮೆಂಟ್ ವಿಧಾನ ಬಳಕೆ.
– ಸಿನೆಮಾ ಹಾಲ್‌ನಲ್ಲಿ ಎಸಿ ಉಷ್ಣಾಂಶ 24ರಿಂದ 30 ಡಿಗ್ರಿ ಸೆಲ್ಸಿಯಸ್‌ನಲ್ಲಿ ಇರಬೇಕು.
– ಇಂಟರ್ವಲ್ ಅವಧಿ, ಫುಡ್ ಸ್ಟಾಲ್ ಸಂಖ್ಯೆ ಹೆಚ್ಚಿಸಬೇಕು. ಆನ್‌ಲೈನ್ ಪಾವತಿ, ಖರೀದಿ ಮಾಡಬೇಕು.
– ಇಡೀ ದಿನ ಟಿಕೆಟ್ ಮಾರಾಟ, ಅಡ್ವಾನ್ಸ್ ಬುಕ್ಕಿಂಗ್‌ಗೆ ಅವಕಾಶ.
– ಟಿಕೆಟ್ ಬುಕ್ ಮಾಡುವ ಎಲ್ಲರ ದೂರವಾಣಿ ಸಂಖ್ಯೆ ದಾಖಲಿಸಬೇಕು.
– ಮಿತಸಂಖ್ಯೆಯಲ್ಲಿ ಪ್ರೇಕ್ಷಕರ ಆಗಮನ -ನಿರ್ಗಮನ ನಡೆಸಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.