ರಾಷ್ಟ್ರಪತಿಯಿಂದ ಸಮ್ಮಾನ ಪಡೆದವ ನಕಲಿ ಡಾಕ್ಟರ್!
Team Udayavani, Jun 13, 2017, 1:37 AM IST
ಕೋಲ್ಕತಾ: ಆತ ಹೌರಾದ ರಾಮರಾಜತಲ್ಲಾ ಕೇದಾರ್ನಾಥ್ ಭಟ್ಟಾಚಾರ್ಯ ಬೀದಿಯ ಪ್ರಸಿದ್ಧ ಡಾಕ್ಟರ್. ಡಾಕ್ಟರ್ ಬಾಬು ಎಂದೇ ಪ್ರಸಿದ್ಧ. ಹೆಸರು ಡಾ ಸುರೇಂದ್ರ ಬಾಬು ಭಟ್ಟಾಚಾರ್ಯ. ಕಡಿಮೆ ಶುಲ್ಕ ಪಡೆದು ರೋಗಿಗಳ ಆಪದ್ಭಾಂಧವ ಎಂದೇ ಪ್ರಸಿದ್ಧ. ಇದಕ್ಕಾಗಿ ರಾಷ್ಟ್ರಪತಿಗಳಿಂದಲೂ ಸಮ್ಮಾನ ಗಿಟ್ಟಿಸಿಕೊಂಡಿದ್ದ. ಇಂಗ್ಲೆಂಡ್ನ ಪ್ರಸಿದ್ಧ ರಾಯಲ್ ಕಾಲೇಜ್ ಆಫ್ ಫಿಸೀಶಿಯನ್ಸ್ನಲ್ಲಿ ಕಲಿತಿದ್ದಾಗಿ, ಸಣ್ಣ ಪ್ರಾಯದಲ್ಲಿ ಈ ಸಾಧನೆ ಮಾಡಿ ಗಿನ್ನೆಸ್ ದಾಖಲೆ ಪುಸ್ತಕಕ್ಕೆ ಸೇರಿದ್ದಾಗಿಯೂ ಹೇಳಿದ್ದ. ಆದರೆ ಇದೆಲ್ಲ ನಕಲಿ ಅಂತ ಈಗ ಗೊತ್ತಾಗಿದೆ. ಕೆಲ ದಿನಗಳಿಂದ ಪಶ್ಚಿಮ ಬಂಗಾಲದಲ್ಲಿ ನಕಲಿ ಡಾಕ್ಟರ್ಗಳ ವಿರುದ್ಧ ದಾಳಿ ನಡೆಸಲಾಗುತ್ತಿದ್ದು ಈ ವೇಳೆ ಸಿಕ್ಕಿಬಿದ್ದಿದ್ದಾನೆ.
ಹೌರಾದ ವೈದ್ಯ ಆಯನ್ ಭಟ್ಟಾಚಾರ್ಯ ಎಂಬವರು ತಮ್ಮ ರಿಜಿಸ್ಟ್ರೇಷನ್ ನಂಬರ್ ಬಳಸಿ ಸುರೇಂದ್ರ ಆಸ್ಪತ್ರೆ ನಡೆಸುತ್ತಿರುವುದಾಗಿ ಆರೋಪಿಸಿದ್ದರು. ತನಿಖೆ ವೇಳೆ ಆತ ನಕಲಿ ಡಾಕ್ಟರ್ ಎಂದು ತಿಳಿದುಬಂದಿದೆ. ಜನರನ್ನು ವಂಚಿಸಲು ಆತ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿ ಕಲಿತು, ಪ್ರಮಾಣ ಪತ್ರ ಪಡೆದಿದ್ದಾಗಿ ಹೇಳಿಕೊಳ್ಳು ತ್ತಿದ್ದ. ಇದೆಲ್ಲ ನಕಲಿ ಎಂದು ಪೊಲೀಸರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.