ಗಿರ್ ಅಭಯಾರಣ್ಯ: ಸಿಂಹಗಳನ್ನು ಬೆನ್ನಟ್ಟಿ ಕಿರುಕುಳ ನೀಡಿದ ಮೂವರ ಬಂಧನ
Team Udayavani, Jan 7, 2023, 7:58 PM IST
ಜುನಾಗಢ್ : ಗುಜರಾತ್‌ನ ಜುನಾಗಢ್ ಜಿಲ್ಲೆಯ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಸಿಂಹಗಳನ್ನು ತಮ್ಮ ವಾಹನಗಳಲ್ಲಿ ಹಿಂಬಾಲಿಸುವ ಮೂಲಕ ಮತ್ತು ಮೊಬೈಲ್ ಫೋನ್‌ಗಳನ್ನು ಬಳಸಿ ವಿಡಿಯೋಗಳನ್ನು ಚಿತ್ರೀಕರಿಸುವ ಮೂಲಕ ಕಿರುಕುಳ ನೀಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿರುವ ಆರು ಜನರಲ್ಲಿ, ಸಾಮಾಜಿಕ ಮಾಧ್ಯಮದಲ್ಲಿ ಬೆನ್ನಟ್ಟುವಿಕೆಯ ವಿಡಿಯೋಗಳು ಕಾಣಿಸಿಕೊಂಡ ನಂತರ ಅಧಿಕಾರಿಗಳು ಶುಕ್ರವಾರ ರಾಜಸ್ಥಾನದಿಂದ ಪ್ರವಾಸಕ್ಕೆ ಬಂದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅರಣ್ಯ ಅಧಿಕಾರಿಗಳ ಪ್ರಕಾರ, ಜುನಾಗಢ್ ಜಿಲ್ಲೆಯ ಸಸನ್ ಗಿರ್ ಬಳಿಯ ಗಿರ್ ವನ್ಯಜೀವಿ ಅಭಯಾರಣ್ಯದಲ್ಲಿ ಎರಡು ವಾರಗಳ ಹಿಂದೆ ವಿಡಿಯೋಗಳನ್ನು ರೆಕಾರ್ಡ್ ಮಾಡಲಾಗಿದೆ.
ವಿಡಿಯೋವೊಂದರಲ್ಲಿ, ವ್ಯಕ್ತಿಗಳು ಎರಡು ವಾಹನಗಳ ಮೇಲೆ ಸಿಂಹಗಳನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು, ಅವರಲ್ಲಿ ಒಬ್ಬ ಬಾನೆಟ್ ಮೇಲೆ ಕುಳಿತಿದ್ದು. ಕೆಲವರು ಹಳ್ಳಿಯ ರಸ್ತೆಯಲ್ಲಿ ಸಿಂಹಗಳ ಹತ್ತಿರ ಅಪಾಯಕಾರಿಯಾಗಿ ವಾಹನ ಚಲಾಯಿಸುವಾಗ ತಮ್ಮ ಮೊಬೈಲ್ ಫೋನ್‌ಗಳಲ್ಲಿ ವಿಡಿಯೋಗಳನ್ನು ಚಿತ್ರೀಕರಿಸಿ ದುಸ್ಸಾಹಸ ತೋರಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಸಿಂಹಗಳನ್ನು ಅತಿಕ್ರಮಣ ಮತ್ತು ಬೆನ್ನಟ್ಟಿದ ಆರು ಜನರ ವಿರುದ್ಧ ಅಪರಾಧಗಳನ್ನು ದಾಖಲಿಸಲಾಗಿದೆ ಎಂದು ಜುನಾಗಢ ವನ್ಯಜೀವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರಾಧನಾ ಸಾಹು ತಿಳಿಸಿದ್ದಾರೆ.
ಸಿಂಹಗಳಿಗೆ ಕಿರುಕುಳ ನೀಡುವುದು ಜಾಮೀನು ರಹಿತ ಅಪರಾಧವಾಗಿರುವುದರಿಂದ ಮೂವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾವಿಗೆ ಬಿದ್ದು 2 ಸಿಂಹ ಸಾವು
ಅಮ್ರೇಲಿ: ತೆರೆದ ಬಾವಿಯೊಂದಕ್ಕೆ ಬಿದ್ದ ಗಂಡು, ಹೆಣ್ಣು ಸಿಂಹಗಳು ಗುಜರಾತ್‌ನ ಗಿರ್ ಅರಣ್ಯ ವಲಯದಲ್ಲಿ ಸಾವನ್ನಪ್ಪಿವೆ. ಅಮ್ರೇಲಿ ಜಿಲ್ಲೆಯ ಖಂಭ ತಾಲೂಕಿನ ಕೋಟಾx ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿದ ಕೂಡಲೇ ಬಾವಿಯ ಮಾಲೀಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ರಕ್ಷಣಾ ತಂಡ ಸ್ಥಳಕ್ಕೆ ತಲುಪುವ ಹೊತ್ತಿಗೆ ಸಿಂಹಗಳು ಮುಳುಗಿ ಸತ್ತಿದ್ದವು. ಈ ರೀತಿಯ ಸಾವುಗಳನ್ನು ತಪ್ಪಿಸಲು ಗಿರ್ ವಲಯದಲ್ಲಿ 11,748 ಬಾವಿಗಳಿಗೆ ಮೋಟು ಗೋಡೆಗಳನ್ನು ಕಟ್ಟಿಸಲಾಗಿದೆ. ಆದರೆ ಹೊಸಹೊಸ ಬಾವಿಗಳನ್ನು ತೋಡುತ್ತಲೇ ಇರುವುದರಿಂದ ಇಂಥ ಘಟನೆಗಳು ನಡೆಯುತ್ತಿವೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.