ಅಸಮಾಧಾನ ಶಮನಕ್ಕಾಗಿ ನಿತಿನ್ ಪಟೇಲ್‌ಗೆ ಹಣಕಾಸು ಖಾತೆ
Team Udayavani, Jan 1, 2018, 6:00 AM IST
ಅಹಮದಾಬಾದ್: ಗುಜರಾತ್‌ನ ಹೊಸ ಸರ್ಕಾರದಲ್ಲಿ ನೀಡಿದ್ದ ಖಾತೆಯಿಂದಾಗಿ ಅಸಮಾಧಾನಗೊಂಡಿದ್ದ ಉಪಮುಖ್ಯಮಂತ್ರಿ ನಿತಿನ್ ಪಟೇಲ್‌ಗೆ ಹಣಕಾಸು ಖಾತೆಯನ್ನು ನೀಡಲಾಗಿದ್ದು, ಭಾನುವಾರ ಅಧಿಕಾರ ವಹಿಸಿಕೊಂಡಿದ್ದಾರೆ. ಖಾತೆ ಹಂಚಿಕೆ ಬಗ್ಗೆ ಅಸಮಾಧಾನವಿದ್ದುದರಿಂದ, ಮೂರು ದಿನಗಳಾದರೂ ನಿತಿನ್ ಅಧಿಕಾರ ವಹಿಸಿಕೊಂಡಿರಲಿಲ್ಲ. ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಧ್ಯಪ್ರವೇಶದಿಂದಾಗಿ ಸಮಸ್ಯೆ ಬಗೆಹರಿದಿದೆ. ಈ ಹಿಂದಿನ ಅವಧಿಯಲ್ಲಿ ಉಪಮುಖ್ಯಮಂತ್ರಿ ಹುದ್ದೆಯೆ ಜತೆಗೆ ಇತರ ಮಹತ್ವದ ಖಾತೆಗಳನ್ನೂ ನಿತಿನ್ ಪಟೇಲ್‌ಗೆ ನೀಡಲಾಗಿತ್ತು. ಆದರೆ ಈ ಬಾರಿ ಯಾವುದೇ ಪ್ರಮುಖ ಖಾತೆ ನೀಡಿರಲಿಲ್ಲ.
ಅಸಮಾಧಾನ ಶಮನದ ನಂತರ ಮಾತನಾಡಿದ ನಿತಿನ್ ಪಟೇಲ್, ನನಗೆ ನನ್ನ ಅನುಭವ ಹಾಗೂ ಹುದ್ದೆಗೆ ಸರಿಹೊಂದುವ ಖಾತೆಗಳನ್ನು ನೀಡುವ ಭರವಸೆ ನೀಡಿದ ನಂತರದಲ್ಲಿ ಅಧಿಕಾರ ತೆಗೆದುಕೊಳ್ಳಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಅಧಿಕಾರ ಸ್ವೀಕರಿಸಿದ ನಂತರ ಕಾರ್ಯಕರ್ತರು ಹಾಗೂ ಬೆಂಬಲಿಗರನ್ನು ಭೇಟಿ ಮಾಡಲು ಸ್ವಕ್ಷೇತ್ರ ಮೆಹಸಾನಾಗೆ ನಿತಿನ್ ತೆರಳಿದ್ದಾರೆ. ಇನ್ನೊಂದೆಡೆ ಸಿಎಂ ವಿಜಯ್ ರುಪಾಣಿ ಕೂಡ ನಿತಿನ್ ಪಟೇಲ್‌ಗೆ ಹಣಕಾಸು ಖಾತೆಯನ್ನು ನೀಡಿರುವುದಾಗಿ ಘೋಷಿಸಿದ್ದಾರೆ.
ಶನಿವಾರವಷ್ಟೇ ಪಟೇಲ್ ಅವರು ಮುನಿಸಿಕೊಂಡಿರುವುದು ಸುದ್ದಿಯಾಗಿತ್ತು. ಜತೆಗೆ, ಅವರು ಸಿಎಂ ರೂಪಾಣಿ ಅವರಿಗೆ 3 ದಿನಗಳ ಗಡುವು ನೀಡಿದ್ದಾರೆ ಎಂದೂ ಹೇಳಲಾಗಿತ್ತು. ಇದರ ಲಾಭ ಪಡೆದುಕೊಳ್ಳಲು ಯತ್ನಿಸಿದ್ದ ಪಟೇಲ್ ಮೀಸಲು ಹೋರಾಟಗಾರ ಹಾರ್ದಿಕ್, ಕಾಂಗ್ರೆಸ್‌ಗೆ ಬರುವಂತೆ ನಿತಿನ್‌ಗೆ ಆಫರ್ ಕೂಡ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.