ಟಿಕೆಟ್‌ಗೆ ಗುಜರಾತ್‌ ಸೂತ್ರ: ಲೋಕಸಭೆ, 9 ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗ ಖಚಿತ

ಸ್ವಂತ ಬಲದ ಮೇಲೆ ಗೆಲ್ಲುವ ಅಭ್ಯರ್ಥಿಗಳ ಆಯ್ಕೆಗೆ ಆದ್ಯತೆ

Team Udayavani, Nov 27, 2022, 7:30 AM IST

ಟಿಕೆಟ್‌ಗೆ ಗುಜರಾತ್‌ ಸೂತ್ರ: ಲೋಕಸಭೆ, 9 ವಿಧಾನಸಭೆ ಚುನಾವಣೆಯಲ್ಲಿ ಪ್ರಯೋಗ ಖಚಿತ

ಗಾಂಧಿನಗರ/ನವದೆಹಲಿ: ಪ್ರಸಕ್ತ ಸಾಲಿನ ಗುಜರಾತ್‌ ವಿಧಾನಸಭೆ ಚುನಾವಣೆ 2024ರ ಲೋಕಸಭೆ ಮತ್ತು ಅದಕ್ಕಿಂತ ಮೊದಲು ನಡೆಯಲಿರುವ ಕರ್ನಾಟಕ ಸೇರಿದಂತೆ 9 ರಾಜ್ಯಗಳ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹೊಂದಿರುವ ವರ್ಚಸ್ಸು ಕೂಡ ಬಹುವಾಗಿ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ನಲ್ಲಿ ಸೂಕ್ತ ರೀತಿಯ ಅವಕಾಶ ಸಿಗದೆ ಇರುವುದರಿಂದ ಬೇಸತ್ತು ಈಗಾಗಲೇ ಕೆಲವು ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅಂಥ ಸಮರ್ಥ ನಾಯಕರನ್ನು ಬಿಜೆಪಿ ಗುರಿ ಮಾಡಿ, ಅವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನದಲ್ಲಂತೂ ಇರಲಿದೆ.

ಗುಜರಾತ್‌ನ ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಈ ಅಂಶ ವೇದ್ಯವಾಗಿದೆ. ಒಟ್ಟು ಮೂರು ಅಂಶಗಳ ಸೂತ್ರಗಳನ್ನು ಬಿಜೆಪಿ 2002, 2012 ಮತ್ತು ಹಾಲಿ ವರ್ಷದ ಚುನಾವಣೆಯಲ್ಲಿ ಅನುಸರಿಸಿದೆ.

ಆರ್ಥಿಕವಾಗಿ ಆಥವಾ ನೈತಿಕ ಸೇರಿದಂತೆ ಇತರ ಗುರುತರ ಆರೋಪಗಳನ್ನು ಎದುರಿಸುವ ಹಾಲಿ ಶಾಸಕರನ್ನು ಕೈಬಿಟ್ಟು ಹೊಸಬರ ಆಯ್ಕೆಗೆ ಬಿಜೆಪಿ ಕೈ ಹಾಕಿದೆ. ಇಷ್ಟು ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹೊರತಾಗಿ ಸ್ವಂತ ಬಲದಿಂದ ಗೆಲ್ಲುವ ಸಾಮರ್ಥ್ಯ ಇರುವ ಅಭ್ಯರ್ಥಿಗಳ ಆಯ್ಕೆಗೆ ಕೂಡ ವರಿಷ್ಠರು ಮನಸ್ಸು ಮಾಡಿದ್ದಾರೆ. ಇದರ ಜತೆಗೆ ಮಧ್ಯಮ ವರ್ಗ ಮತ್ತು ಯುವ ಸಮುದಾಯವನ್ನು ಸಳೆಯುವ ನಾಯಕರನ್ನೂ ಶೋಧಿಸಲು ಚಿಂತನೆ ನಡೆದಿದೆ. ಇದಕ್ಕೆ ಪುಷ್ಟಿ ನೀಡುವಂತೆ, ಗುಜರಾತ್‌ನಲ್ಲಿ ಟಿಕೆಟ್‌ ವಂಚಿತರಾದ 40 ಹಾಲಿ ಶಾಸಕರ ಪೈಕಿ ಬಹುತೇಕ ಮಂದಿ 75 ವರ್ಷದೊಳಗಿನರೇ ಆಗಿದ್ದಾರೆ. ಟಿಕೆಟ್‌ ಸಿಗದ ಮಾಜಿ ಸಿಎಂ ವಿಜಯ ರೂಪಾಣಿ ಅವರಿಗೂ 66 ವರ್ಷ ವಯಸ್ಸು. ಇದೇ ವೇಳೆ, 76 ವರ್ಷ ವಯಸ್ಸಿನ ಯೋಗೇಶ್‌ ಪಟೇಲ್‌ಗೆ ಟಿಕೆಟ್‌ ನೀಡಲಾಗಿದೆ. ಅಂದರೆ, ಅಭ್ಯರ್ಥಿಗಳ ವರ್ಚಸ್ಸಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಇದೇ ಅಂಶವನ್ನು ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಅನುಸರಿಸುವುದೇ ನಿಜ ಎಂದಾದರೆ ಬಿಜೆಪಿಯ ಕೆಲವು ಹಾಲಿ ಶಾಸಕರು, ಸಂಸದರಿಗೆ ಅತ್ಯಂತ ಸವಾಲಿನ ದಿನಗಳು ಎದುರಾಗಲಿವೆ ಎಂದು ವಿಶ್ಲೇಷಿಸಲಾಗುತ್ತಿದೆ. ಇನ್ನು, ಬಿಜೆಪಿಯ ಚಿಹ್ನೆ ಕಮಲ ಮತ್ತು ಪ್ರಧಾನಿ ಮೋದಿ ನಾಯಕತ್ವದ ಬಗ್ಗೆ ವಿಶ್ವಾಸವಿರುವ ಯುವ ನಾಯಕರನ್ನು ಹುಡುಕಿ, ಆಯ್ಕೆ ಮಾಡಲು ಪ್ರಯತ್ನಗಳು ನಡೆದಿವೆ.

ಬಿಜೆಪಿ ಹಲವು ವರ್ಷಗಳಿಂದ ಗೆಲ್ಲಲು ಅಸಾಧ್ಯವಾಗಿರುವ ಕ್ಷೇತ್ರಗಳಲ್ಲಿ ಪ್ರತಿಪಕ್ಷಗಳ ಪ್ರಭಾವಿ ಮುಖಂಡರನ್ನು ಪಕ್ಷಕ್ಕೆ ಆಹ್ವಾನಿಸಿ, ಅವರಿಗೆ ಟಿಕೆಟ್‌ ನೀಡಿ ಕಣಕ್ಕೆ ಇಳಿಸಲು ಮುಂದಾಗಿದೆ. ಛೋಟಾ ಉದಯಪುರ ಕ್ಷೇತ್ರದಲ್ಲಿ ಬುಡಕಟ್ಟು ಸಮುದಾಯದ 78 ವರ್ಷದ ಮೋಹನ್‌ ಸಿಂಗ್‌ ರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಅವರ ಬದಲಾಗಿ ಅಳಿಯನಿಗೆ ಆ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ನೀಡಲಾಗಿದೆ.

ಮೋದಿಯವರ ರಾಜಕೀಯ ಜೀವನದಲ್ಲಿ 2002 ಮಹತ್ವದ ವರ್ಷ. ಆ ವರ್ಷ ನಿಗದಿತ 8 ತಿಂಗಳು ಮೊದಲೇ ಗುಜರಾತ್‌ನಲ್ಲಿ ವಿಧಾನಸಭೆ ವಿಸರ್ಜಿಸಿ ಚುನಾವಣೆ ಘೋಷಣೆ ಮಾಡಿದ್ದರು. ಆಗ ಜಯವೂ ಸಿಕ್ಕಿತ್ತು. 2012ರ ಚುನಾವಣೆಯಲ್ಲಿ ಗೆದ್ದ ಬಳಿಕ ಅವರು ರಾಷ್ಟ್ರ ಮಟ್ಟಕ್ಕೆ ಪ್ರವೇಶ ಮಾಡುವ ಸುಳಿವೂ ಪ್ರಾಪ್ತವಾಗಿತ್ತು. ಹಾಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ, ಪಕ್ಷದಲ್ಲಿ ಅವರ ವರ್ಚಸ್ಸು ಮತ್ತಷ್ಟು ಹೆಚ್ಚಿಸಲಿದೆ. ಜತೆಗೆ 2024ರ ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಫ‌ಲಿತಾಂಶದ ದಿಕ್ಸೂಚಿಗೆ ಮುನ್ನುಡಿ ಬರೆದಂತೆ ಆಗಲಿದೆ.

ಸಮಾನ ನಾಗರಿಕ ಸಂಹಿತೆ ಜಾರಿಗೆ ಆದ್ಯತೆ
ಗುಜರಾತ್‌ ಚುನಾವಣೆ ಪ್ರಣಾಳಿಕೆಯನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಗಾಂಧಿನಗರದಲ್ಲಿ ಬಿಡುಗಡೆ ಮಾಡಿದ್ದಾರೆ. ಸಮಾನ ನಾಗರಿಕ ಸಂಹಿತೆ (ಯುಸಿಸಿ) ಜಾರಿ, ಉಗ್ರ ನಿಗ್ರಹಕ್ಕಾಗಿ ಯುವಕರು ತೆÌàಷಮಯ ಭಾಷಣಗಳಿಗೆ ಮಾರು ಹೋಗದಂತೆ ಮಾಡಲು ವಿಶೇಷ ಸೆಲ್‌ ರಚನೆ, ಸ್ಲೀಪರ್ ಸೆಲ್‌ಗ‌ಳ ರಚನೆಗೆ ತಡೆ, 20 ಲಕ್ಷ ಉದ್ಯೋಗ ಸೃಷ್ಟಿ, ಮುಂದಿನ 5 ವರ್ಷಗಳಲ್ಲಿ ಗುಜರಾತ್‌ನ ಅರ್ಥ ವ್ಯವಸ್ಥೆಯನ್ನು ಒಂದು ಲಕ್ಷಕೋಟಿ ಡಾಲರ್‌ಗೆ ಏರಿಕೆ ಮಾಡುವ ವಾಗ್ಧಾನವನ್ನು ಮಾಡಲಾಗಿದೆ. ಅಲ್ಲದೇ, ದ್ವಾರಕಾದ ಅಭಿವೃದ್ಧಿಗೆ ದೇವಭೂಮಿ ದ್ವಾರಕಾ ಕಾರಿಡಾರ್‌ ನಿರ್ಮಾಣ. ಅದರಲ್ಲಿ ಜಗತ್ತಿನ ಅತಿ ಎತ್ತರದ ಕೃಷ್ಣ ವಿಗ್ರಹ ನಿರ್ಮಾಣ, 3ಡಿ ಭಗವದ್ಗೀತೆ ವಲಯ ರಚನೆ. ಸೋಮನಾಥ ಅಂಬಾಜಿ, ಪಾವಗಡ ದೇಗುಲಗಳ ಅಭಿವೃದ್ಧಿ ಮಾದರಿಯಲ್ಲಿ 1 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಗುಲಗಳ ಪುನರ್‌ ನಿರ್ಮಾಣದ ಆಶ್ವಾಸನೆಯನ್ನೂ ನೀಡಲಾಗಿದೆ.

ಟಾಪ್ ನ್ಯೂಸ್

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್‌ ಟ್ರಕ್‌ ಸ್ಫೋ*ಟದ ವ್ಯಕ್ತಿ!

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Formula E race corruption case: ಜ.6ರಂದು ಕೆಟಿಆರ್‌ ವಿಚಾರಣೆ

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

Bangladesh ಸುಧಾರಿಸುವವರೆಗೂ ಪ್ರಾರ್ಥನೆ ನಿಲ್ಲದು: ಇಸ್ಕಾನ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

ಸನಾತನ ಅರ್ಥ ತಿಳಿಯದೆ ತಪ್ಪು ದಾರಿಗೆ ಸಮಾಜ: ಧನಕರ್‌

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

Arvind Kejriwal: ಕೇಂದ್ರ ಸರಕಾರ‌ ದಿಲ್ಲಿಯಲ್ಲಿ ಏನೂ ಮಾಡಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

RSS; ಶಿಸ್ತು, ಧೈರ್ಯ ತುಂಬಲು ಆರೆಸ್ಸೆಸ್‌ನಲ್ಲಿ ಲಾಠಿ ಬಳಕೆ: ಮೋಹನ್‌ ಭಾಗವತ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

Hunsur: ಹೊಸ ವರ್ಷಾಚರಣೆ: ಕೇಕ್‌ ತಿಂದ 45ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

“ನಿಮ್ಹಾನ್ಸ್‌ ನಡೆ ದೇಶದಲ್ಲೇ ಮುಂಚೂಣಿಯದು’: ರಾಷ್ಟ್ರಪತಿ ದ್ರೌಪದಿ ಮುರ್ಮು

puttige-2

Udupi; ಗೀತಾರ್ಥ ಚಿಂತನೆ 145: ವೇದಪ್ರಾಮಾಣ್ಯದ ಚರ್ಚೆ

crime

Kasaragod: ಘರ್ಷಣೆಯಿಂದ ಮೂವರಿಗೆ ಗಾಯ

1-weewq

Baindur: ಬಟ್ಟೆ ವ್ಯಾಪಾರಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.