500 ಅಡಿ ಆಳದ ಬೋರ್‌ವೆಲ್ ಗೆ ಬಿದ್ದ 12 ವರ್ಷದ ಬಾಲಕಿಯ ರಕ್ಷಣೆ
Team Udayavani, Jul 29, 2022, 8:55 PM IST
ಸುರೇಂದ್ರನಗರ: ಗುಜರಾತ್‌ನ ಸುರೇಂದ್ರನಗರ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ 12 ವರ್ಷದ ಬಾಲಕಿಯೊಬ್ಬಳು 500 ಅಡಿ ಆಳದ ಬೋರ್‌ವೆಲ್ ಗುಂಡಿಗೆ ಬಿದ್ದಿದ್ದು, ಐದು ಗಂಟೆಗಳ ಕಾರ್ಯಾಚರಣೆಯ ನಂತರ ಸೇನೆ ಮತ್ತು ಪೊಲೀಸ್ ತಂಡಗಳು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಧರಂಗಧ್ರ ತಹಸಿಲ್‌ನ ಗಜನ್ವಾವ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜೂನ್‌ನಲ್ಲಿ ಎರಡು ವರ್ಷದ ಬಾಲಕನನ್ನು ಬೋರ್‌ವೆಲ್‌ನಿಂದ ರಕ್ಷಿಸಿದ ನಂತರ ತಹಸಿಲ್‌ನಲ್ಲಿ ಇದು ಎರಡನೇ ಘಟನೆಯಾಗಿದೆ.
ಮನಿಶಾ ಎಂದು ಗುರುತಿಸಲಾದ ಬಾಲಕಿಯು ಬೆಳಗ್ಗೆ 7.30 ರ ಸುಮಾರಿಗೆ ಜಮೀನಿನಲ್ಲಿನ ತೆರೆದ ಬೋರ್‌ವೆಲ್‌ನ ಗುಂಡಿಗೆ ಬಿದ್ದಿದ್ದಾಳೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸುಮಾರು ಐದು ಗಂಟೆಗಳ ಪ್ರಯತ್ನದ ನಂತರ ಸ್ಥಳೀಯ ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಹಾಯದಿಂದ ಸೇನಾ ಯೋಧರು ಆಕೆಯನ್ನು ರಕ್ಷಿಸಿದ್ದಾರೆ. 500 ರಿಂದ 700 ಅಡಿ ಆಳದ ಬೋರ್‌ವೆಲ್‌ನಲ್ಲಿ ಬಾಲಕಿ ಸುಮಾರು 60 ಅಡಿ ಆಳದಲ್ಲಿ ಸಿಲುಕಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.